ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ವಿದ್ಯೆಯಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಶ್ರೀ ಶಾಲ ಇಂಟರ್ ನ್ಯಾಷನಲ್ ಸ್ಕೂಲ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀ ವೆಂಕಟರಾಮಯ್ಯ ಹೇಳಿದರು.ಪಟ್ಟಣದ ಶ್ರೀ ಶಾಲಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀಶಾಲಾ ಇಂಟರ್ ನ್ಯಾಷನಲ್ ಸ್ಕೂಲ್‌ನ 9ನೇ ವಾರ್ಷಿಕೊತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯೆ ಎಂಬುವುದು ಒಂದು ವಿನಯ ಹಾಗೂ ಉತ್ತಮ ಸಂಸ್ಕಾರದ ನಡೆಯಾಗಿದೆ. ವಿದ್ಯೆ ಕತ್ತಲು ದೂರ ಮಾಡಿ ಬೆಳಕಿನತ್ತ ಕೊಂಡೊಯ್ಯುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ರಾಮಾಯಣ ಹಾಗೂ ಮಹಾಭಾರತ ಪ್ರಸಂಗ ಕುರಿತು ಮಕ್ಕಳಿಗೆ ಮನೆಯಲ್ಲಿ ಕಥೆ ಹೇಳಬೇಕು. ಮನೆಯ ವಾತಾವರಣ ಶುದ್ಧ ಹಾಗೂ ಸ್ವಚ್ಛತೆಯಿಂದ ಕೂಡಿದರೆ ಮಕ್ಕಳಲ್ಲಿ ಉತ್ತಮ ನಡೆ, ನುಡಿ ನೋಡಲು ಸಾಧ್ಯವಿದೆ ಎಂದರು.
ಶ್ರೀಶಾಲ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ, ಶಿಕ್ಷಕರ ಜತೆ ಮಕ್ಕಳ ವಿದ್ಯೆ ಬಗ್ಗೆ ಫೋಷಕರು ಹೆಚ್ಚು ನಿಗಾವಹಿಸಬೇಕು. ಮಕ್ಕಳಲ್ಲಿ ಸಮಯ ಪಾಲನೆ ಹಾಗೂ ಶಿಸ್ತು ರೂಪಿಸುವಲ್ಲಿ ಫೋಷಕರ ಪಾತ್ರ ಹೆಚ್ಚಿದೆ ಎಂದರು.ಡಾ.ಶಶಿಕಿರಣ್ ಮಾತನಾಡಿ, ನನ್ನ ವಿದ್ಯಾಭ್ಯಾಸಕ್ಕೆ ನಮ್ಮ ತಂದೆ ಪ್ರೇರಣೆ ಆಗಿದ್ದರು. ಅವರ ಸಲಹೆ ಹಾಗೂ ಮಾರ್ಗದರ್ಶನ ಮೇರೆಗೆ ಉನ್ನತ ಪದವಿಗಳಿಸಲು ಸಾಧ್ಯವಾಗಿದೆ ಎಂದರು.
ಪುರಸಭೆ ಸದಸ್ಯ ಗೊರ್ತಿ ನಾಗರಾಜು ಮಾತನಾಡಿ, ಮಕ್ಕಳ ವಿದ್ಯೆ ಬಗ್ಗೆ ಶಿಕ್ಷಕರು ಹಾಗೂ ಫೋಷಕರ ಪಾತ್ರ ಮಹತ್ತರವಾಗಿದೆ. ಸಿಬಿಎಸ್‌ಸಿ ಪಠ್ಯಕ್ರಮ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಅನುಕೂಲವಾಗಿದೆ ಎಂದರು.ಕ್ರೀಡೆ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿ.ಆರ್‌ಸಿ ಪವನ್‌ಕುಮಾರ್ ರೆಡ್ಡಿ ಹಾಗೂ ಗೌತಮ ಬುದ್ಧ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಟಿ.ಗೋವಿಂದರಾಜುಲು, ಶ್ರೀ ಶಾಲಾ ಸ್ಕೂಲ್‌ನ ಪ್ರಾಂಶುಪಾಲರಾದ ಮಂಜುಳಾ ನಾಗಭೂಷಣ್ ಹಾಗೂ ಶ್ರೀಶಾಲ ಸ್ಕೂಲ್ ಆಡಳಿತ ಮಂಡಳಿಯ ವ್ಯವಸ್ಥಾಪಕ ನಾಗೇಂದ್ರಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.