ಸಾರಾಂಶ
ಮಕ್ಕಳಿಗಾಗಿ ಅಂತ ಆಸ್ತಿ ಮಾಡುವುದಕ್ಕಾಗಿಯೇ ಜೀವನ ಮೀಸಲಿಡಬೇಡಿ. ಬದಲಿಗೆ ಮಕ್ಕಳನ್ನೇ ಸಮಾಜದ ಆಸ್ತಿಯಾಗುವಂತೆ ಉತ್ತಮ ಶಿಕ್ಷಣ ನೀಡಿ, ಪ್ರತಿಭಾವಂತರಾಗಿ ಬೆಳೆಸಬೇಕು. ಆಗ ಪ್ರತಿಯೊಂದು ಮನೆಯು ಮಂತ್ರಾಲಯವಾಗಬಲ್ಲದು ಎಂದು ಆರ್‌ಎಸ್‌ಎಸ್ ಪ್ರಚಾರಕ ಸು.ರಾಮಣ್ಣ ಹೇಳಿದ್ದಾರೆ.
- ಸೋಮೇಶ್ವರ ಶಾಲೆಯಲ್ಲಿ ಜನ್ಮದಾತರಿಗೆ ನಮನ ಕಾರ್ಯಕ್ರಮ- - - ದಾವಣಗೆರೆ: ಮಕ್ಕಳಿಗಾಗಿ ಅಂತ ಆಸ್ತಿ ಮಾಡುವುದಕ್ಕಾಗಿಯೇ ಜೀವನ ಮೀಸಲಿಡಬೇಡಿ. ಬದಲಿಗೆ ಮಕ್ಕಳನ್ನೇ ಸಮಾಜದ ಆಸ್ತಿಯಾಗುವಂತೆ ಉತ್ತಮ ಶಿಕ್ಷಣ ನೀಡಿ, ಪ್ರತಿಭಾವಂತರಾಗಿ ಬೆಳೆಸಬೇಕು. ಆಗ ಪ್ರತಿಯೊಂದು ಮನೆಯು ಮಂತ್ರಾಲಯವಾಗಬಲ್ಲದು ಎಂದು ಆರ್‌ಎಸ್‌ಎಸ್ ಪ್ರಚಾರಕ ಸು.ರಾಮಣ್ಣ ಹೇಳಿದರು.
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಠ್ಯದ ಜೊತೆ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವಂಥ ಚಟುವಟಿಕೆಗಳು ನಡೆಸಬೇಕು. ಭಾವಿಪ್ರಜೆಗಳನ್ನು ನಿರ್ಮಿಸುವ ಶಿಲ್ಪಿಗಳಾದ ಶಿಕ್ಷಕರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬೋಧನೆ ಕೈಗೊಳ್ಳಬೇಕು ಎಂದರು.ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಲ್ಲಿ ಹಾಗೂ ಮೌಲ್ಯಗಳನ್ನು ಕಲಿಸುವಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯ ಶ್ರಮಿಸುತ್ತಿರುವುದು ಶ್ಲಾಘನೀಯ. ಈ ವಿದ್ಯಾಲಯ ಪಠ್ಯದ ಜೊತೆಗೆ ಮಕ್ಕಳಲ್ಲಿ ಪೋಷಕರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತ ಯಶಸ್ವಿಯಾಗುತ್ತಿರುವುದು ಮಾದರಿ ಸೇವೆಯಾಗಿದೆ ಎಂದರು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಉದ್ಘಾಟಿಸಿದರು. ಶಾಲೆಯ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್, ಶೈಕ್ಷಣಿಕ ನಿರ್ದೇಶಕ ಪರಮೇಶ್ವರಪ್ಪ, ಪ್ರಾಚಾರ್ಯರಾದ ಎನ್.ಪ್ರಭಾವತಿ, ಪಿ.ಎಚ್.ವೀಣಾ, ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯೋಪಾಧ್ಯಾಯರು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.- - - -18ಕೆಡಿವಿಜಿ31.ಜೆಪಿಜಿ:
ದಾವಣಗೆರೆಯ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದ ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ ಕಾರ್ಯಕ್ರಮವನ್ನು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಉದ್ಘಾಟಿಸಿದರು.