ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ

| Published : Jun 02 2024, 01:47 AM IST

ಸಾರಾಂಶ

ಮಕ್ಕಳನ್ನು ಶಾಲೆಯತ್ತ ಸೆಳೆಯಲು ತಳಿರು ತೋರಣಗಳಿಂದ ಶೃಂಗರಿಸಿ, ಆಕರ್ಷಕವಾಗಿ ವಿವಿಧ ಚಟುವಟಿಕೆ ಮಾಡಲಾಗಿತ್ತು

ಗದಗ: ಪಾಲಕರಿಗೆ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಪ್ರತಿನಿತ್ಯ ಮಕ್ಕಳ ಶಿಕ್ಷಣ ಬಗೆಗೆ ಹೆಚ್ಚಿನ ಕಾಳಜಿ ವಹಿಸುವುದನ್ನು ಮರೆಯಬಾರದು ಎಂದು ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.

ಅವರು ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಾಲಾ ಆರಂಭದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಶಾಲಾ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಶಾಲೆಗೆ ಬರ ಮಾಡಿಕೊಂಡರು.

ಮಕ್ಕಳನ್ನು ಶಾಲೆಯತ್ತ ಸೆಳೆಯಲು ತಳಿರು ತೋರಣಗಳಿಂದ ಶೃಂಗರಿಸಿ, ಆಕರ್ಷಕವಾಗಿ ವಿವಿಧ ಚಟುವಟಿಕೆ ಮಾಡಲಾಗಿತ್ತು. ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸುವ ಜತೆಗೆ ಮಕ್ಕಳಿಗೆ ಸಿಹಿ ವಿತರಿಸಿ ನಂತರ ಸಸಿ ನಡೆಸಲಾಯಿತು.

ಈ ವೇಳೆ ಡಯಟ್ ಉಪನ್ಯಾಸಕ ಶಂಕರ ಹಡಗಲಿ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಜಿ. ಶಿವಶಿಂಪಿಗೇರ, ಲೆಂಕೆಪ್ಪ ಹೊಸಳ್ಳಿ, ರಮಜಾಸಾಬ್‌ ಹುಯಿಲಗೋಳ, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ ದೊಡ್ಡಮನಿ ಹಾಗೂ ಸದಸ್ಯರು, ಪ್ರಧಾನ ಶಿಕ್ಷಕಿ ಎಸ್.ಆರ್. ಮಟ್ಟಿ ಹಾಗೂ ಶಿಕ್ಷಕರು ಸೇರಿದಂತೆ ಮುಂತಾದವರು ಇದ್ದರು.