ಪರ್ಕಳ ಮಂಗಳ ಕಾಲ ಸಾಹಿತ್ಯ ವೇದಿಕೆ ಅಧ್ಯಕ್ಷ ನಟರಾಜ್ ಪರ್ಕಳ

| Published : Aug 04 2025, 12:30 AM IST

ಸಾರಾಂಶ

ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಮಹಾಸಭೆಯು ಭಾನುವಾರ ಕೆಳಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಭೆಯಲ್ಲಿ 20025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಮಹಾಸಭೆಯು ಭಾನುವಾರ ಕೆಳಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಭೆಯಲ್ಲಿ 20025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ವೇದಿಕೆಯ ನೂತನ ಅಧ್ಯಕ್ಷರನ್ನಾಗಿ ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರವಚನಕಾರ ನಟರಾಜ್ ಪರ್ಕಳ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಳಿದಂತೆ ವೇದಿಕೆಯ ಗೌರವಾಧ್ಯಕ್ಷರಾಗಿ ಕೆ. ಪ್ರಕಾಶ್ ಶೆಣೈ ಪರ್ಕಳ ಮತ್ತು ಶ್ರೀನಿವಾಸ ಉಪಾಧ್ಯ ಪರ್ಕಳ, ಸಂಚಾಲಕರಾಗಿ ಎಂ. ಮಂಜುನಾಥ ಉಪಾಧ್ಯ ಪರ್ಕಳ, ಸಹ ಸಂಚಾಲಕರಾಗಿ ಗೋಪಿ ಹಿರೇ ಬೆಟ್ಟು, ಪೋಷಕರಾಗಿ ಶ್ರೀಧರ್ ಭಟ್ ಹಿರೇಬೆಟ್ಟು, ಶ್ರೀಭುವನ ಪ್ರಸಾದ್ ಹೆಗ್ಡೆ ಮಣಿಪಾಲ, ಸರ್ವೋದಯ ಶೆಟ್ಟಿಗಾರ್ ಪರ್ಕಳ, ಉಪಾಧ್ಯಕ್ಷರಾಗಿ ಅನಂತರಾಮ ನಾಯಕ್ ಸಣ್ಣಕ್ಕಿಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಗಣೇಶ್ ಸಣ್ಣಕ್ಕಿಬೆಟ್ಟು, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು, ಕಾರ್ಯದರ್ಶಿಯಾಗಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ, ಕೋಶಾಧಿಕಾರಿಯಾಗಿ ಸಂದೀಪ್ ನಾಯ್ಕ್ ಕಬ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ್ ನಾಯಕ್ ಕಬ್ಯಾಡಿ, ಸಂತೋಷ್ ಕುಮಾರ್ ಸಣ್ಣಕ್ಕಿಬೆಟ್ಟು, ಸುಧೀರ್ ಕುಮಾರ್ ನಗರ ಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಕಬ್ಯಾಡಿ ಸಂತೋಷ್ ಪ್ರಭು ಕಬ್ಯಾಡಿ, ಬಸವರಾಜ್ ನಡಿದಾರೆ, ರಾಘವೇಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯಕುಮಾರ್ ಆಲಂಬಿ ಗಣೇಶ್ ಕುಲಾಲ್ ಕೆಳ ಪರ್ಕಳ, ಗೌರವ ಸಲಹೆಗಾರರಾಗಿ ಅಶೋಕ್ ಸಣ್ಣಕ್ಕಿ ಬೆಟ್ಟು, ಮೌನೇಶ್ ಆಚಾರ್ಯ ಕೆಳಪರ್ಕಳ, ಪಿ. ರವಿರಾಜ್ ಆಚಾರ್ಯ ಪರ್ಕಳ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಕಾರ್ಯಕಾರಿ ಸಮಿತಿಯ ಸದಸ್ಯರು ನಾಗರಾಜ ಪ್ರಭು, ರಾಘವೇಂದ್ರ ಪ್ರಭು ಮಾಣಿಬೆಟ್ಟು, ರಾಜೇಶ್ವರ ಶೆಟ್ಟಿಗಾರ್ ಸತೀಶ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.