ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ: ಐವರ ವಿರುದ್ಧ ದೂರು

| Published : Jun 23 2024, 02:03 AM IST

ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ: ಐವರ ವಿರುದ್ಧ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಬದಿ ನಿಲ್ಲಿಸಲಾಗಿದ್ದ ಟಾಟಾಸುಮೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಬೆಳಗಾವಿ ತಾಲೂಕಿನ ಕೇದನೂರು ಗ್ರಾಮದ ಮಾರುತಿ ಭಾಗಣ್ಣ ರಾಜಾಯಿ ಎಂಬುವರಿಗೆ ಸೇರಿದ್ದ ಟಾಟಾಸುಮೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ವಾಹನ ಸುಟ್ಟು ಕರಕಲಾಗಿ, ಸುಮಾರು ₹ 5 ಲಕ್ಷ ಮೌಲ್ಯದಷ್ಟು ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಸ್ತೆ ಬದಿ ನಿಲ್ಲಿಸಲಾಗಿದ್ದ ಟಾಟಾಸುಮೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಬೆಳಗಾವಿ ತಾಲೂಕಿನ ಕೇದನೂರು ಗ್ರಾಮದ ಮಾರುತಿ ಭಾಗಣ್ಣ ರಾಜಾಯಿ ಎಂಬುವರಿಗೆ ಸೇರಿದ್ದ ಟಾಟಾಸುಮೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ವಾಹನ ಸುಟ್ಟು ಕರಕಲಾಗಿ, ಸುಮಾರು ₹ 5 ಲಕ್ಷ ಮೌಲ್ಯದಷ್ಟು ನಷ್ಟವಾಗಿದೆ. ವಾಹನ ಮಾಲೀಕನ ಮನೆ ಇರುವ ಬೀದಿಯಲ್ಲಿ ರಸ್ತೆ ಕಾಮಗಾರಿ ನಡೆದಿರುವುದರಿಂದ ಕೇದನೂರು ಗ್ರಾಮದ ಸ್ಮಶಾನ ಭೂಮಿ ರಸ್ತೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ವಾಹನ ನಿಲ್ಲಿಸಿ ಹೋಗಿದ್ದರು. ಜೂ.16 ರಾತ್ರಿ ಕಿಡಿಗೇಡಿಗಳು ವಾಹನಕ್ಕೆ ಬೆಂಕಿಹಚ್ಚಿದ ಪರಿಣಾಮ ಸುಟ್ಟು ಕರಕಲಾಗಿದೆ.

ಈ ಹಿನ್ನೆಲೆಯಲ್ಲಿ ವಾಹನದ ಮಾಲೀಕ ಮಾರುತಿ ರಾಜಾಯಿ, ಸಂಶಯಾಸ್ಪದವಾಗಿ ಅಶ್ವಿನ ಮಲ್ಲಪ್ಪ ಚಿಂದಿ, ನಂದು ಮಹಾದೇವ ಸಂಬಾಜಿ, ರಾಮಾ ಪರುಶರಾಮ ತೋಲಗೇಕರ, ರಾಹುಲ್‌ ಮಲ್ಲಪ್ಪ ರಾಜಾಯಿ, ಲೋಕೇಶ ಅರುಣ ಶಹಾಪೂರಕರ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.