ಸಂಸತ್‌ ಮಾದರಿ ಅನುಭವ ಮಂಟಪ ನಿರ್ಮಿಸಿದ ಬಸವಣ್ಣ: ಬಸನಗೌಡ

| Published : May 10 2024, 11:47 PM IST

ಸಂಸತ್‌ ಮಾದರಿ ಅನುಭವ ಮಂಟಪ ನಿರ್ಮಿಸಿದ ಬಸವಣ್ಣ: ಬಸನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತುರ್ವಿಹಾಳ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಈಗಿನ ಸಂಸತ್ತಿನ ಮಾದರಿಯನ್ನು 12 ಶತಮಾನದಲ್ಲಿಯೇ ಯೋಚಿಸಿ ಅನುಭವ ಮಂಟಪವೆಂಬ ಹೆಸರಿನೊಂದಿಗೆ ಕಾರ್ಯರೂಪಕ್ಕೆ ತಂದ ದಾರ್ಶನಿಕ ಬಸವಣ್ಣ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಹೇಳಿದರು.

ಸ್ಥಳೀಯ ಶಂಕ್ರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನಗಳಿಂದಲೇ ಜಗತ್ತಿಗೆ ಪ್ರಸಿದ್ಧಿಯಾದ ಮಹಾಜ್ಞಾನಿ ನಮ್ಮ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಶಂಕರಲಿಂಗೇಶ್ವರ ದೇವಸ್ಥಾನ ದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ಬಸವೇಶ್ವರರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರ ಮೆರವಣಿಗೆ ನಡೆಯಿತು.

ಅಮರಗುಂಡಯ್ಯ ಶಿವಾಚಾರ್ಯರು ಮಾತನಾಡಿ, ವಚನಗಳ ಮೂಲಕವೇ ಜಾತಿ ಅಸಮಾನತೆ ವಿರುದ್ಧ ದನಿ ಎತ್ತಿದ ಮಹಾನ್ ಪುರುಷ, ಇವರು ತಮ್ಮ ಕಾಲದಲ್ಲಿಯೇ ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯುವಂತೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾದಯ್ಯ ಗುರುವಿನ್, ಗುಂಡಯ್ಯ ಅಪ್ಪಾಜಿ, ಚಿದಾನಂದಯ್ಯ ಗುರುವಿನ್, ಮಲ್ಲನಗೌಡ ದೇವರಮನಿ, ಪಾರೂಕ್ ಸಾಬ್, ಉಮರ್ ಸಾಬ್, ಆರ್, ಶಿವನಗೌಡ, ಶರಣಬಸವ ರಡ್ಡೆರ್, ಶರಣಬಸವ ಗಡೇದ್, ಶಾಮೀದ ಸಾಬ್ ಚೌದ್ರಿ, ಸಿದ್ದೇಶ್ವರ ಗುರಿಕಾರ, ಬಾಪುಗೌಡ ದೇವರಮನಿ, ರಾಜಶೇಖರ ಗಡೆದ್, ಮಲ್ಲಪ್ಪ ತೆಗ್ಗಿಹಾಳ, ಕರಿಲಿಂಗಪ್ಪ ಹಳ್ಳಿ, ಅಭಿಗೌಡ, ಭೀಮದಾಸ ದಾಸರ್, ಶಿವಪುತ್ರಪ್ಪ ಕೆಂಗೇರಿ, ಪ್ರಕಾಶ ಈಳಿಗೇರ್, ಕರಿಯಪ್ಪ ಭಂಗಿ, ರಮೇಶ ಕರಡೋಣಿ ಇತರರು ಇದ್ದರು.