ಸಾರಾಂಶ
ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮಾ ದೇವಸ್ಥಾನಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾನುವಾರ ಭೇಟಿ ನೀಡಿ ಶ್ರೀ ರೇಣುಕಾಮಾತೆಯ ದರ್ಶನ ಪಡೆದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾನುವಾರ ಭೇಟಿ ನೀಡಿ ಶ್ರೀ ರೇಣುಕಾಮಾತೆಯ ದರ್ಶನ ಪಡೆದರು. ಶಾಸಕ ವಿಶ್ವಾಸ ವೈದ್ಯ ಹಾಗೂ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ನೂತನ ಸಂಸದೆ ಪ್ರಿಯಾಂಕಾರನ್ನು ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿದರು. ಬಳಿಕ ಶಾಸಕ ವಿಶ್ವಾಸ ವೈದ್ಯರವರ ನಿವಾಸಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಮನೆಯಲ್ಲಿ ಸೇರಿದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.ಎಪಿಎಮ್‌ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಮಲ್ಲು ಜಕಾತಿ, ಡಿ.ಡಿ. ಟೋಪೊಜಿ, ಚಂದ್ರು ಶಾಮರಾಯನವರ, ಮಹಾಬಳೇಶ್ವರ ಪುರದಗುಡಿ, ಮಲ್ಲಿಕಾರ್ಜುನ ಬೇವೂರ, ಮಲ್ಲಿಕಾರ್ಜುನ ಪುರದಗುಡಿ, ಬಿ.ಎನ್.ಪ್ರಭುನುವರ, ಪ್ರಕಾಶ ಲಮಾಣಿ, ಸಿ.ಬಿ.ಬಾಳಿ, ಶಿವಾನಂದ ಪಟ್ಟಣಶೆಟ್ಟಿ, ಪ್ರವೀಣ ರಾಮಪ್ಪನವರ, ಶಿವು ರಾಠೋಡ, ಮಲ್ಲಿಕ ಭಾಗವಾನ ಇತರರು ಉಪಸ್ಥಿತರಿದ್ದರು.