ನಾರಾಯಣ ಗಣೇಶ್‌ಗೆ ಲೋಕಸಭಾ ಕಾಂಗ್ರೆಸ್ ಟಿಕೆಟ್‌ ಆಗ್ರಹ

| Published : Feb 28 2024, 02:37 AM IST

ನಾರಾಯಣ ಗಣೇಶ್‌ಗೆ ಲೋಕಸಭಾ ಕಾಂಗ್ರೆಸ್ ಟಿಕೆಟ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ಜಿಲ್ಲೆಯ ಸುಪ್ರಸಿದ್ಧ ವಕೀಲರು ಹಾಗೂ ಕರ್ನಾಟಕ ಕ್ಷತ್ರಿಯ ಒಕ್ಕೂಟ(ಕೆಕೆಓ) ಬೀದರ್ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನಾರಾಯಣ ಗಣೇಶ್ ವಕೀಲರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಮರಾಠಾ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.

ಬೀದರ್: ಬೀದರ್ ಜಿಲ್ಲೆಯ ಸುಪ್ರಸಿದ್ಧ ವಕೀಲರು ಹಾಗೂ ಕರ್ನಾಟಕ ಕ್ಷತ್ರಿಯ ಒಕ್ಕೂಟ(ಕೆಕೆಓ) ಬೀದರ್ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನಾರಾಯಣ ಗಣೇಶ್ ವಕೀಲರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಮರಾಠಾ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.

ಈ ಕುರಿತು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಉಪಾಧ್ಯಕ್ಷರಾದ ಡಾ.ರಾಜಶೇಖರ ಸೇಡಂಕರ್, ಶೈಲೇಂದ್ರ ಹಿವರೆ, ಜ್ಞಾನದೇವ ಶೇಂದ್ರೆ, ಜಿಲ್ಲಾ ಸಂಯೋಜಕ ರಾಮ್ ಅಂಬೂರೆ, ಬೀದರ್ ತಾಲೂಕು ಅಧ್ಯಕ್ಷ ವೆಂಕಟರಾವ ಚಿದ್ರೆ, ಪ್ರಮುಖರಾದ ಗೋಪಾಲ ಪವಾರ್, ಸಂತೋಷ ಜಗದಾಳೆ, ವೈಜಿನಾಥ ಹೊನ್ನಿಕೇರೆ, ರತ್ನದೀಪ ಬಿರಾದಾರ, ದತ್ತಾತ್ರೆ ಮೂಲಗೆ ಖಾಜಾಪೂರೆ ಅವರು ಪ್ರಕಟಣೆ ನೀಡಿ, ಎಲ್ಲಾ ಕ್ಷತ್ರಿಯ ಸಮಾಜದ ಪರವಾಗಿ ಹಿಂದುಳಿದ, ಅತಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲ್ಪಸಂಖ್ಯಾತರ ಪರವಾಗಿ ನ್ಯಾಯಯುತ ಏಳ್ಗಿಗೆಗಾಗಿ ಸುಮಾರು ವರ್ಷಗಳಿಂದ ಧ್ವನಿ ಎತ್ತುತ್ತಾ ಬಂದಿದ್ದಾರೆ.

ಮರಾಠ ಸಮಾಜದ ಒಬ್ಬ ಒಳ್ಳೆಯ ಸಮಾಜ ಸೇವಕ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಮರಾಠಾ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಸಾಕಷ್ಟು ಕೆಲಸ ಮಾಡಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಕ್ಷತ್ರಿಯ ಸಮಾಜ ಶೇ.40 ಇದೆ ಬೀದರ ಜಿಲ್ಲೆಯ ಪ್ರಸಿದ್ಧ ವಕೀಲರು ಹಾಗೂ ಕೆಲ ವರ್ಷಗಳ ಹಿಂದೆ ಬೀದರ್ ಹಾಗೂ ಕರ್ನಾಟಕ ರಾಜ್ಯಾದ್ಯಂತ 20 ನಗರಗಳಲ್ಲಿ ‌ನಡೆದ ಮರಾಠಾ ಕ್ರಾಂತಿ ಮೂಕ ಮೋರ್ಚಾಗಳನ್ನು ಸಂಘಟಿಸಿದ ರಾಜ್ಯ ಸಂಚಾಲಕರಲ್ಲಿ ಒಬ್ಬರಾದ ನಾರಾಯಣ ಗಣೇಶ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈಚೆಗೆ ಔರಾದ, ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ಸಂಭಾಜಿ ಬ್ರಿಗೇಡನವರು, ಮರಾಠಾ‌ ಸಮುದಾಯದ ಹಿರಿಯ ಮುಖಂಡರು ಸುದ್ದಿಗೋಷ್ಠಿ ನಡೆಸಿ ನಾರಾಯಣ ಗಣೇಶ ಇವರಿಗೆ ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ ನಾವು ಕೂಡ ನಾರಾಯಣ ಗಣೇಶ ಅವರಿಗೆ ಟಿಕೆಟ್ ನೀಡಲು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.