ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ದೇಶದ ಜನರಲ್ಲಿ ರಾಷ್ಟ್ರಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ರಾಷ್ಟ್ರೀಯ ಹಬ್ಬಗಳಲ್ಲಿ ಕಡ್ಡಾಯವಾಗಿ, ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಮಂಗಳವಾರ ರಬಕವಿ-ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಎಲ್ಲ ಕಚೇರಿಗಳಲ್ಲಿ ರಾಷ್ಟ್ರೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ರಬಕವಿಯ ರಾಮಪ್ಪ ಚಿಕ್ಕೋಡಿ ಕ್ರೀಡಾಂಗಣದಲ್ಲಿ ಬೆಳಗ್ಗೆ 9ಕ್ಕೆ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ರಾಷ್ಟ್ರದ ಅಖಂಡತೆ ಹಾಗೂ ಶ್ರೇಷ್ಠತೆಗೆ ನಾವೆಲ್ಲರೂ ಶ್ರಮಿಸಬೇಕು. ರಾಷ್ಟ್ರೀಯ ಹಬ್ಬಗಳು ಯಾವುದೇ ಜಾತಿ, ಮತ, ಪಂಥ ಮತ್ತು ಧರ್ಮಗಳಿಗೆ ಸಿಮೀತವಾಗಿರುವುದಿಲ್ಲ. ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಸವದಿ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಶಿಸ್ತುಬದ್ಧವಾದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯವಾಗಿದೆ. ತಾಲೂಕಿನ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಯಾವುದೇ ನೆಪ ಹೇಳದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಕೆ ಮಾಡುವುದನ್ನು ಕಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಧ್ವಜ ಮಾರಾಟಗಾರರಿಗೆ ತಿಳಿವಳಿಕೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೊದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದಾಗ್ಯೂ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.ಸಭೆಯಲ್ಲಿ ಉಪ ತಹಸೀಲ್ದಾರ್ ಎಸ್.ಎಲ್. ಕಾಗಿಯವರ, ಪಿಎಸ್‌ಐ ಆರ್.ಎಸ್. ಖೋತ, ಶಿಕ್ಷಣ ಇಲಾಖೆ ಎ.ಕೆ. ಬಸನ್ನವರ, ರಮೇಶ ಅವಟಿ, ಎಸ್.ಜಿ. ಕಲಕಂಬ, ಎಸ್.ಎಸ್. ಮುರಗೋಡ, ಎಸ್.ಟಿ. ಗೋಠೆ, ಎನ್.ಎಂ. ದಿವಟೆ, ಸುರೇಶ ಬಾಗೇವಾಡಿ, ಬಸವರಾಜ ಹನಗಂಡಿ, ಎ.ಎಸ್. ಜೆಡನ್ನವರ, ಡಾ.ಎನ್.ಎಂ. ನದಾಫ್, ಎಂ.ಬಿ. ಚಂಡಕಿ, ಆರ್.ಎಸ್. ಸಂಕಣ್ಣವರ, ಎಂ.ಪಿ. ವಂದಾಲ, ಮಹಾಲಿಂಗೇಶ ಕರೆನ್ನವರ, ಶಬ್ಬಿರ ಪಕಾಲಿ, ಎಂ.ಜಿ. ರೋಡಕರ, ಪಿ.ಆರ್. ಕೊಣ್ಣೂರ, ಸಿ.ಎಸ್. ಕಲ್ಯಾಣಿ, ಜಿ.ಆರ್. ಹುಣಚಗಿ, ಡಾ.ಸಿ.ಎಂ. ವಜ್ರಮಟ್ಟಿ, ಐ.ಜಿ. ಪೂಜಾರಿ, ಎಂ.ಪಿ. ದಾಸರ, ಡಾ.ಬಸವರಾಜ ಗೌಡರ, ಪಿಎಸ್‌ಐ ಪ್ರವೀಣ ಬೀಳಗಿ, ಪ್ರಸಾದ ಮಾವರಕರ, ಬಾಬಾಗೌಡ ಪಾಟೀಲ, ಬಿ.ಡಿ. ನೇಮಗೌಡ, ಅರ್ಜುನ ಕಾಖಂಡಕಿ, ಸುಬಾಸ ಲಮಾಣಿ, ಎಸ್.ಎನ್. ಪಾಟೀಲ, ಎಸ್.ಸಿ. ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.