ಸಾರಾಂಶ
ಹೊಳೆಆಲೂರ: ನಾವು ನಮ್ಮ ಜೀವನದಲ್ಲಿ ಧರ್ಮ ಕಾರ್ಯಗಳನ್ನು ಮಾಡುವುದರಿಂದ, ಅಂತಹ ಕಾರ್ಯಗಳಲ್ಲಿ ಭಾಗವಹಿಸುವದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಆದ್ದರಿಂದ ಧರ್ಮ ಕಾರ್ಯಗಳಲ್ಲಿ ತಪ್ಪದೆ ಭಾಗವಹಿಸಿ ಭಕ್ತಿ ಮೆರೆಯಬೇಕು ಎಂದು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಶ್ರೀ ಮುರುಘರಾಜೇಂದ್ರ ಕೊರಣೇಶ್ವರ ಸ್ವಾಮಿಗಳು ಹೇಳಿದರು.
ಅವರು ಅಸೂಟಿ ಮುರುಘರಾಜೇಂದ್ರ ಶಾಂತಿ ಧಾಮದ 5ನೇ ವಾರ್ಷಿಕೋತ್ಸವ ಹಾಗೂ ಧರ್ಮ ಸಭೆ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಅಸೂಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿ ವರ್ಷ ಅಚ್ಚುಕಟ್ಟಾಗಿ ಇಂತಹ ಸಾಮಾಜಿಕ ಕೆಲಸಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಈ ಶಾಂತಿಧಾಮದ ಭಕ್ತರು ಹೆಚ್ಚುತ್ತಿದ್ದು, ಉತ್ತರೋತ್ತರ ಬೆಳೆದು, ಮುಂದಿನ ದಿನಗಳಲ್ಲಿ ಹೆಚ್ಚಿನ ಧರ್ಮ ಕಾರ್ಯಗಳನ್ನು ಮಾಡುವಂತೆ ಆಗಲಿ.
ಈ ಶಾಂತಿಧಾಮದ ಶ್ರೀ ದಿವಾನ್ ಶರೀಫ ಸ್ವಾಮಿಗಳು ಅನೇಕ ಧರ್ಮ ಕಾರ್ಯಗಳು ಭಕ್ತರ ಹರಕೆಗಳು ಫಲಿಸುವಂತೆ ಮಾಡಿದೆ. ಆಸೂಟಿ ಆರಾಧ್ಯ ದೈವ ಫಲಹಾರ ಶಿವಯೋಗಿಗಳು ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಎಂದರು.
ಅಧ್ಯಕ್ಷತೆಯನ್ನು ಶಾಂತಿಧಾಮದ ದಿವಾನ್ ಶರೀಫ ಸ್ವಾಮಿಗಳು ವಹಿಸಿದ್ದರು. ನವಗ್ರಹ ಹಿರೇಮಠದ ಶಿವಾಪೂಜಾ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮಿಗಳು, ಹೊಳೆಆಲೂರ ಯಚ್ಚರೇಶ್ವರ ಸ್ವಾಮಿಗಳು, ಮುಂಡರಿಗಿ ಅನ್ನದಾನೇಶ್ವರ ಶಾಖಾ ಮಠದ ಸ್ವಾಮಿಗಳು, ನಿರಂಜನ ನಿಲಲೋಚನ ತಾಯಿಯವರು, ತೋಟಪ್ಪ ಸ್ವಾಮಿಗಳು, ಬಸವರಾಜ ಶಾಸ್ತ್ರಿಗಳು, ಮಾಜಿ ಜಿಪಂ ಅಧ್ಯಕ್ಷ ಪ್ರಕಾಶ ತಿರಕನಗೌಡ್ರ ಹಾಗೂ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಇದ್ದರು.