ಒಳಮೀಸಲಾತಿ ಜಾರಿಯಲ್ಲಿ ಪಕ್ಷಗಳಿಂದ ಮೋಸ: ಭಾಸ್ಕರ್ ಪ್ರಸಾದ್

| Published : Mar 13 2025, 12:45 AM IST

ಸಾರಾಂಶ

ಹಿರಿಯೂರು ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಒಳಮೀಸಲಾತಿ ಹೋರಾಟದ ಪಾದಯಾತ್ರೆಯು ಪ್ರಧಾನ ರಸ್ತೆಯ ಮೂಲಕ ಸಾಗಿತು.

ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿಮಾಡುವಂತೆ ಆಗ್ರಹಕನ್ನಡಪ್ರಭ ವಾರ್ತೆ ಹಿರಿಯೂರು

ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿಮಾಡಿ ಎಂದು ಒಳ ಮೀಸಲಾತಿ ಹೋರಾಟಗಾರರು ಆಗ್ರಹಿಸಿದರು.

ನಗರದ ಟಿಬಿ ವೃತ್ತದಲ್ಲಿರುವ ಆದಿಜಾಂಬವ ಮಠದಿಂದ ಹೊರಟ ಒಳ ಮೀಸಲಾತಿ ಜಾರಿಯ ಪಾದಯಾತ್ರೆ ಅಂಬೇಡ್ಕರ್ ವೃತ್ತದ ಮೂಲಕ ನಗರದ ಗಾಂಧಿ ವೃತ್ತ, ಪ್ರಧಾನ ರಸ್ತೆಯ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿತು.

ಆರಂಭದಲ್ಲಿ ಅಣಕು ಶವಯಾತ್ರೆ ವಿಚಾರವಾಗಿ ಕೆಲಕಾಲ ಪೊಲೀಸ್ ಮತ್ತು ಹೋರಾಟಗಾರ ನಡುವೆ ವಾಗ್ವಾದ ನಡೆಯಿತು.

ನಂತರ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಟ ಪಾದಯಾತ್ರೆಯ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಭಾಸ್ಕರ್ ಪ್ರಸಾದ್, ಕಳೆದ 35 ವರ್ಷಗಳಿಂದ ಕರ್ನಾಟಕದಲ್ಲಿ ಮಾದಿಗ ಸಮುದಾಯ ಒಳಮೀಸಲಾತಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬಂದರೂ ಸಹ ನಮ್ಮನ್ನಾಳಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಒಳಮೀಸಲಾತಿ ಜಾರಿ ಮಾಡದೇ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು.

ಅಂಬೇಡ್ಕರ್ ಸ್ವಾಭಿಮಾನಿ ಸಂಘಟನೆಯ ರಾಜ್ಯಾಧ್ಯಕ್ಷ ಕೋದಂಡರಾಮ್ ಮಾತನಾಡಿ, ಒಳಮೀಸಲಾತಿ ಜಾರಿಗೆ ಬಲಗೈ ಸಮುದಾಯ ವಿರೋಧ ಮಾಡುತ್ತಾರೆ ಅನ್ನುವುದು ಸುಳ್ಳಾಗಿದ್ದು, ಅಂಬೇಡ್ಕರ್ ರವರನ್ನು ಅಪ್ಪಿಕೊಂಡಿರುವ ಎಲ್ಲಾ ಸಮುದಾಯವು ಒಳಮೀಸಲಾತಿ ಜಾರಿಯನ್ನು ಸ್ವಾಗತಿಸುತ್ತದೆ. ಈ ವಿಚಾರವಾಗಿ ಅಂಬೇಡ್ಕರ್ ಸ್ವಾಭಿಮಾನಿ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಪಿ.ಶ್ರೀನಿವಾಸ್, ಜೀವೇಶ್ ಬೋರನಕುಂಟೆ, ಪ್ರಭುರಾಜ್ ಸಣ್ಣ ಮಳಲಿಯಪ್ಪ, ನಾಗರಾಜ್ ಮಾಗಡಿ, ಸುರೇಶ್ ರಾಯಚೂರು, ಕೆಆರ್.ಉಮೇಶ್, ರಾಹುಲ್, ರಘು, ಲಕ್ಷ್ಮಣ್ ಬಂಡಾರಿ, ಹನುಮೇಶ್, ನೆಲಮಂಗಲ ಮಂಜುನಾಥ್, ಮಾರುತೇಶ್, ಹನುಮಂತರಾಯ, ಶಿವು ,ರಾಘು, ಓಂಕಾರ್ ಮಸ್ಕಲ್ ಮಟ್ಟಿ, ರಘುನಾಥ್, ಕದುರಪ್ಪ, ಕರಿಯಪ್ಪ, ತಿಪ್ಪೇಸ್ವಾಮಿ, ದುರುಗಪ್ಪ, ಮಾಯಪ್ಪ ದೊಡ್ಡಮನಿ ಹಾಜರಿದ್ದರು.