ಪಕ್ಷ ಸಂಘಟನೆ, ಗೆಲುವಿಗೆ ಕೊಡುಗೆ ನೀಡಿ

| Published : Jul 24 2025, 12:45 AM IST

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸದೃಢವಾಗಿ ಮಾಡುವ ಜೊತೆಗೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ನಿಮ್ಮ ಕೊಡುಗೆ ಮತ್ತು ಸಂಘಟನೆ ಹೆಚ್ಚಿನದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸದೃಢವಾಗಿ ಮಾಡುವ ಜೊತೆಗೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ನಿಮ್ಮ ಕೊಡುಗೆ ಮತ್ತು ಸಂಘಟನೆ ಹೆಚ್ಚಿನದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಕಾಂಗ್ರೆಸ್ ನೀತಿ ಮತ್ತು ಸಂಶೋಧನಾ ವಿಭಾಗದ ಜಿಲ್ಲಾಧ್ಯಕ್ಷರಾಗಿ ಡಿ. ಸೋಮಣ್ಣೇಗೌಡರ ನೇಮಕ ಅದೇಶ ಪ್ರತಿಯನ್ನು ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲೆ ಭದ್ರವಾಗಿದೆ. ಮೂವರು ಶಾಸಕರು, ಸಂಸದರು ಹಾಗು ಮಾಜಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಅವರ ಸಲಹೆ ಸಹಕಾರವನ್ನು ಪಡೆದುಕೊಂಡು ತಾವು ಕಾರ್ಯನಿರ್ವಹಣೆ ಮಾಡಬೇಕು. ಜಿಲ್ಲಾ ಘಟಕ ಹಾಗು ತಾಲೂಕು ಅಧ್ಯಕ್ಷರನ್ನು ಈಗಾಗಲೇ ಕೆಪಿಸಿಸಿ ನೀತಿ ಮತ್ತು ಸಂಶೋಧನಾ ವಿಭಾಗದ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ. ಇನ್ನುಳಿದಂತೆ ಇತರೇ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಕನಿಷ್ಟ ಒಂದು ತಾಲೂಕಿನಲ್ಲಿ ಮಂದಿ ನಿಮ್ಮ ವಿಭಾಗದ ಪದಾಧಿಕಾರಿಗಳು ಸಂಘಟನೆಯಲ್ಲಿರುಬೇಕು ಎಂದು ತಿಳಿಸಿದರು. ಕೆಪಿಸಿಸಿ ನೀತಿ ಮತ್ತು ಸಂಶೋಧನಾ ವಿಭಾಗದ ರಾಜ್ಯ ಸಂಚಾಲಕ ಡಾ. ನಾಗರಾಜು ಮಾತನಾಡಿ, ಈ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಇದ್ದಾರೆ. ಕಳೆದ ಒಂದು ವರ್ಷದಿಂದ ಸಕ್ರಿಯವಾಗಿ ವಿಭಾಗ ಕಾರ್ಯನಿರ್ವಹಿಸುತ್ತಿದೆ ಎಂದರು. ನೂತನ ಅಧ್ಯಕ್ಷ ಡಿ. ಸೋಮಣ್ಣೇಗೌಡ ಮಾತನಾಡಿ, ನನ್ನನ್ನು ಜಿಲ್ಲೆಯಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗಲೇ ಕಾಂಗ್ರೆಸ್ ಪಕ್ಷದವರೆಂದು ಗುರುತಿಸಿ, ಅನೇಕ ಚುನಾವಣೆಗಳಲ್ಲಿ ನನ್ನ ವಿರುದ್ದ ಪತ್ರಗಳನ್ನು ಬರೆದಿರುವ ಸಾಕಷ್ಟು ನಿದರ್ಶನಗಳನ್ನು ಎದುರಿಸಿದ್ದೇನೆ. ಆರ್. ಮಹದೇವ್, ಚಿಕ್ಕಮಹದೇವ್, ಹಿರಿಯ ಉಪಾಧ್ಯಕ್ಷ ಎಸ್.ವಿ.ಶಂಕರ್, ಎಎಚ್‌ಎನ್ ಖಾನ್, ನಗರಭಾ ಸದಸ್ಯ ಸದಸ್ಯ ಕರಿನಂಜನಪುರ ಸ್ವಾಮಿ, ನಾಗವಳ್ಳಿ ನಾಗಯ್ಯ, ಅಪ್ಪು, ಸಂಶೋಧನಾ ವಿಭಾಗದ ಯಳಂದೂರು ತಾಲೂಕು ಅಧ್ಯಕ್ಷ ಡ. ಎಚ್.ಬಿ. ಬಸವರಾಜು, ಗುಂಡ್ಲುಪೇಟೆ ವೆಂಕಟೇಗೌಡ, ಕೊಳ್ಳೆಗಾಲ ನಾಗರಾಜು, ಹನೂರು ವಿಜಯಕುಮಾರ್ ಇತರರು ಇದ್ದರು.