ಪಾರು ಪಾರ್ವತಿ ಕನ್ನಡ ಸಿನಿಮಾ ಯಶಸ್ಸು

| Published : Feb 04 2025, 12:32 AM IST

ಸಾರಾಂಶ

ಪಾರು ಪಾರ್ವತಿ ಸಿನಿಮಾ ರಿಲೀಸ್ ಆದ ಮೇಲೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಪ್ರಚಾರದ ಪ್ರಯಾಣ ಸಾಗುತ್ತಿದೆ. ಈಗ ನನ್ನ ಹುಟ್ಟೂರು ಹಾಸನ ಜಿಲ್ಲೆಗೆ ಆಗಮಿಸಿದ್ದೇವೆ. ನಮ್ಮ ತಂದೆ ತಾಯಿ ನಾನು ಎಲ್ಲಾ ಇಲ್ಲಿಯೇ ಹುಟ್ಟಿ ಬೆಳೆದಿರುವುದು. ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿದೆ. ಆಗಾಗ್ಗೆ ಸಲ್ಪ ಕಾಮಿಡಿ ಸನ್ನಿವೇಶಗಳು ನಾಯಕ ನಟನಿಂದಲೇ ಸಿಗಲಿದೆ. ನಾಯಕ ನಟ ಇನ್ನು ಕನ್ನಡವನ್ನು ಕಲಿತು ಅವರೆ ಡಬ್‌ ಕೂಡ ಮಾಡಿರುವುದು ವಿಶೇಷವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಈಗಾಗಲೇ ರಾಜ್ಯಾದ್ಯಂತ ಜನವರಿ ೩೧ಕ್ಕೆ ಬಿಡುಗಡೆ ಮಾಡಿರುವ ಸಿನಿಮಾ ಪಾರು ಪಾರ್ವತಿ ಬಿಡುಗಡೆಗೊಂಡು ಮತ್ತು ಯು.ಕೆ. ಐರ್ಲೇಂಡ್ ದೇಶದಲ್ಲೂ ಕೂಡ ಎಲ್ಲಾ ಚಿತ್ರಮಂದಿರದಲ್ಲೂ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವುದಾಗಿ ಚಿತ್ರದ ನಾಯಕಿ ದೀಪಿಕಾ ದಾಸ್ ಸಂತೋಷ ವ್ಯಕ್ತಪಡಿಸಿದರು..

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಿನಿಮಾ ರಿಲೀಸ್ ಆದ ಮೇಲೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಪ್ರಚಾರದ ಪ್ರಯಾಣ ಸಾಗುತ್ತಿದೆ. ಈಗ ನನ್ನ ಹುಟ್ಟೂರು ಹಾಸನ ಜಿಲ್ಲೆಗೆ ಆಗಮಿಸಿದ್ದೇವೆ. ನಮ್ಮ ತಂದೆ ತಾಯಿ ನಾನು ಎಲ್ಲಾ ಇಲ್ಲಿಯೇ ಹುಟ್ಟಿ ಬೆಳೆದಿರುವುದು. ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿದೆ. ಆಗಾಗ್ಗೆ ಸಲ್ಪ ಕಾಮಿಡಿ ಸನ್ನಿವೇಶಗಳು ನಾಯಕ ನಟನಿಂದಲೇ ಸಿಗಲಿದೆ. ನಾಯಕ ನಟ ಇನ್ನು ಕನ್ನಡವನ್ನು ಕಲಿತು ಅವರೆ ಡಬ್‌ ಕೂಡ ಮಾಡಿರುವುದು ವಿಶೇಷವಾಗಿದೆ ಎಂದರು. ಚಿತ್ರದ ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ, ಇದು ನನ್ನ ಮೊದಲನೇ ಸಿನಿಮಾವಾಗಿದ್ದು, ಪಾರು ಪಾರ್ವತಿ ಸಿನಿಮಾ ಈಗ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಿಥುನ್ ಅನ್ನುವತ ಪಾತ್ರದಲ್ಲಿ ಫಾವಾರ್ಜ್ ಅಶ್ರಫ್ ಅವರು ಕೇರಳದ ಮಲಯಾಳಿ ಹುಡುಗ ಹಾರ್ಫ್ ಕನ್ನಡಿಗನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾವು ಕುಟುಂಬದ ಜೊತೆ ನೋಡುವಂತಹ ಸಿನಿಮಾವಾಗಿದೆ. ಪಾಯಲ್ ಅನ್ನುವ ಕ್ಯಾರೆಕ್ಟರ್ ಬಹಳ ವಿಭಿನ್ನ ರೀತಿಯಲ್ಲಿ ಎಲ್ಲರಲ್ಲೂ ಕಾಡುವಂತಹ ಮನಸ್ಸಿಗೆ ಹತ್ತಿರವಾಗುವ ಕ್ಯಾರೆಕ್ಟರ್ ಆಗಿದೆ. ಟ್ರಾವೆಲರ್ ಜರ್ನಿಯನ್ನು ಈಗೀನ ಜನತೆಯನ್ನ ಥೀಮ್ ಆಗಿ ತೆಗೆದುಕೊಂಡು ಯಾವೆಲ್ಲಾ ರೀತಿಯ ಚಾಲೆಂಜಸ್‌ಗಳನ್ನು ತೆಗೆದುಕೊಂಡು ಹೋಗಿದೆ. ಈ ಸಿನಿಮಾದಲ್ಲಿ ಮುಖ್ಯವಾಗಿ ವಯಸ್ಸಾದಂತಹ ಅಜ್ಜಿಯನ್ನ ಹಾಗೂ ಅವರ ಆಸೆಯನ್ನ ಯಾವೆಲ್ಲಾ ರೀತಿಯಲ್ಲಿ ಪೂರೈಸುತ್ತಾರೆ ಎನ್ನುವುದು ಮುಖ್ಯವಾದ ಒಂದು ವಿಷಯ. ಸಿನಿಮಾ ಚಿತ್ರೀಕರಣವನ್ನು ಬೆಂಗಳೂರು, ಗೋವಾ, ಮಹಾರಾಷ್ಟ್ರ, ಬಿಹಾರ್, ಹಾಗೂ ಉತ್ತರಾಖಂಡ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದರು. ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದ್ದು, ಹೊರದೇಶದಲ್ಲಿ ಕೂಡ ಜನವರಿ ೩೧ರಂದೇ ಬಿಡುಗಡೆ ಆಗಿದೆ. ಎಲ್ಲರೂ ಕನ್ನಡ ಚಲನಚಿತ್ರವನ್ನು ಚಿತ್ರ ಮಂದಿರದಲ್ಲೆ ಕುಳಿತು ನೋಡುವ ಮೂಲಕ ಸಿನಿಮಾ ರಂಗವನ್ನು ಉಳಿಸಿ, ಬೆಳೆಸಬೇಕು ಎಂದು ಮನವಿ ಮಾಡಿದರು.