ತುರುವೇಕೆರೆಯ ಮಣಿಚೆಂಡೂರು ಗ್ರಾಪಂ ಅಧ್ಯಕ್ಷರಾಗಿ ಪಾರ್ವತಿ ಹರೀಶ್

| Published : Oct 02 2024, 01:09 AM IST

ಸಾರಾಂಶ

ತುರುವೇಕೆರೆ ತಾಲೂಕಿನ ಮಣಿಚೆಂಡೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕ್ಷೇತ್ರದ ಸದಸ್ಯೆ ಪಾರ್ವತಿ ಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಮಣಿಚೆಂಡೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕ್ಷೇತ್ರದ ಸದಸ್ಯೆ ಪಾರ್ವತಿ ಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳವಾರ ನಡೆದ ಅಧ್ಯಕ್ಷರ ಚುನಾವಣೆಗೆ ಪಾರ್ವತಿ ಹರೀಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಕುಂ.ಇ.ಅಹಮದ್ ನೂತನ ಅಧ್ಯಕ್ಷರಾಗಿ ಪಾರ್ವತಿ ಹರೀಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ಅಧ್ಯಕ್ಷೆ ಪಾರ್ವತಿ ಹರೀಶ್ ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುವುದು. ಜನರಿಗೆ ಅಗತ್ಯವಿರುವ ಕುಡಿಯುವ ನೀರು, ವಿದ್ಯುತ್ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಲು ಪ್ರಯತ್ನಿಸುವೆ. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ ಎಲ್ಲಾ ಸದಸ್ಯರಿಗೆ ತಮ್ಮ ಕೃತಜ್ಞತೆಯನ್ನು ಪಾರ್ವತಿ ಹರೀಶ್ ರವರು ಸಲ್ಲಿಸಿದರು.

ನೂತನ ಅಧ್ಯಕ್ಷರನ್ನು ಸದಸ್ಯರಾದ ವಿ.ಲಕ್ಷ್ಮೀದೇವಿ, ಲಕ್ಷ್ಮಮ್ಮ, ಅನಿತಾ, ಭಾಗ್ಯಮ್ಮ, ಎಲ್.ಚೇತನ್, ಹೆಚ್.ಕೆ.ಹನುಮಂತಯ್ಯ, ಎನ್.ಮುಕುಂದ್, ಮುಬಸೀರ್ ಹುಸೇನ್, ಸೈಯದ್ ಯೂನಸ್, ಕೆ.ಸುಧಾ, ಬಿ.ಆರ್.ಶ್ಯಾಮಲಾ, ಎಲ್.ಶ್ರೀನಿವಾಸ್, ಕೆ.ಯಶೋಧರ್, ಮುಖಂಡರಾದ ಬಸವರಾಜು, ಕೆಂಚಪ್ಪ, ಕಣಕೂರು ಲಕ್ಕೆಗೌಡ, ಮಲ್ಲೂರು ತಿಮ್ಮೇಶ್, ಮಣಿಚೆಂಡೂರು ರಮೇಶ್, ನಾಗೇಗೌಡನ ಬ್ಯಾಲದ ಮಂಜುನಾಥ್, ಗುಡಿಗೌಡರಾದ ಮಲ್ಲೂರು ರಾಜಣ್ಣ, ಪುಟ್ಟೇಗೌಡ, ಮಧು ಸೇರಿದಂತೆ ಹಲವಾರು ಮಂದಿ ನೂತನ ಅಧ್ಯಕ್ಷೆ ಪಾರ್ವತಿ ಹರೀಶ್ ರವರನ್ನು ಅಭಿನಂದಿಸಿದರು. ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಹೇಮಂತ್ ಕುಮಾರ್, ಕಾರ್ಯದರ್ಶಿ ಪ್ರಸನ್ನ ಕುಮಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.