ಸಾರಾಂಶ
ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ ಪಾತಾಳ ಇದರ ವತಿಯಿಂದ ನೀಡಲಾಗುವ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮಟ್ ಉಪ್ಪಿನಂಗಡಿ ಸಮೀಪದ ಪಾತಾಳ ಶ್ರೀ ಪೂರ್ಣ ಮನೆಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ ಪಾತಾಳ ಇದರ ವತಿಯಿಂದ ನೀಡಲಾಗುವ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇಲ್ಲಿನ ಪಾತಾಳ ಶ್ರೀ ಪೂರ್ಣ ಮನೆಯಲ್ಲಿ ನಡೆಯಿತು.ಯಕ್ಷಗಾನ ಕ್ಷೇತ್ರದ ಕಲಾ ಸೇವೆಯಲ್ಲಿ ನಿರತರಾಗಿರುವ ಗುಂಡಿಮಜಲು ಗೋಪಾಲಕೃಷ್ಣ ಭಟ್, ಹಾಗೂ ಓಟೆಪಡ್ಪು ವಿಷ್ಣು ಶರ್ಮ ಅವರಿಗೆ ಪಾತಾಳ ಕಲಾ ಮಂಗಳ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾತಾಳ ಮನೆತನದೊಂದಿಗೆ ಸುದೀರ್ಘ ನಂಟು ಹೊಂದಿರುವ ಶ್ರಮಿಕರಾದ ಅರ್ತಿಲ ಕೃಷ್ಣಪ್ಪ ಗೌಡ, ಪದಾಳ ವೆಂಕಪ್ಪ ಮಡಿವಾಳ, ಬಾಣಂತಿ ಆರೈಕೆಯ ವಿಮಲಾ ಮಡಿವಾಳ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ, ಮೂಡುಬಿದಿರೆಯ ಶ್ರೀಪತಿ ಭಟ್, ಮಂಗಳೂರಿನ ಜನಾರ್ದನ ಹಂದೆ, ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಉಜಿರೆ ಅಶೋಕ್ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಮಹಾಲಿಂಗಭಟ್ ಬಿಲ್ಲಂಪದವು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪಾತಾಳ ವೆಂಕಟರಮಣ ಭಟ್ , ಅಂಬಾ ಪ್ರಸಾದ ಪಾತಾಳ, ಶ್ರೀರಾಮ ಪಾತಾಳ, ಗಣರಾಜ ಕುಂಬ್ಳೆ, ಡಾ. ಗೋವಿಂದಪ್ರಸಾದ್ ಕಜೆ, ರಮೇ‹ಶ್ ಭಟ್ ಕಜೆ, ಹರಿಕಿರಣ್ ಕೊಯಿಲ, ಮೊದಲಾದ ಪ್ರಮುಖರು ಭಾಗವಹಿಸಿದ್ದರು.