ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಗ್ನಿ ಹೋತ್ರ, ಸಾಮೂಹಿಕ ಹನುಮಾನ್‌, ವಿಷ್ಣು ನಮಸ್ಕಾರ

| Published : Jan 22 2024, 02:17 AM IST

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಗ್ನಿ ಹೋತ್ರ, ಸಾಮೂಹಿಕ ಹನುಮಾನ್‌, ವಿಷ್ಣು ನಮಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌.ಪಿ.ವೈ.ಎಸ್‌.ಎಸ್‌) ) ವತಿಯಿಂದ ಜ. 22 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿಜಯನಗರ 4ನೇ ಹಂತ, ಬಸವನಹಳ್ಳಿಯಲ್ಲಿರುವ ಶ್ರೀ ಗುಡ್ಡದ ಮುತ್ತುರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಗ್ನಿ ಹೋತ್ರ, ಸಾಮೂಹಿಕ ಹನುಮಾನ್ ನಮಸ್ಕಾರ ಹಾಗೂ ಸಾಮೂಹಿಕ ವಿಷ್ಣು ನಮಸ್ಕಾರ ಮಾಡಲಾಯಿತು.

- ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌.ಪಿ.ವೈ.ಎಸ್‌.ಎಸ್‌) ) ವತಿಯಿಂದ ಜ. 22 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿಜಯನಗರ 4ನೇ ಹಂತ, ಬಸವನಹಳ್ಳಿಯಲ್ಲಿರುವ ಶ್ರೀ ಗುಡ್ಡದ ಮುತ್ತುರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಗ್ನಿ ಹೋತ್ರ, ಸಾಮೂಹಿಕ ಹನುಮಾನ್ ನಮಸ್ಕಾರ ಹಾಗೂ ಸಾಮೂಹಿಕ ವಿಷ್ಣು ನಮಸ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾವೇರಿ ವಲಯ ಸಂಚಾಲಕ ಕಾಳಾಜಿ, ಉಪನಗರದ ಸಂಚಾಲಕ ಗಿರೀಶ, ,ಉಪನಗರದ ಪ್ರಮುಖರಾದ ಭದ್ರೇಗೌಡ, ರವೀಂದ್ರ ಕುಮಾರ್, ಸವಿತಾ, ಮುತ್ತುರಾಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿಯ ಶ್ರೀನಿವಾಸ್ ಹಾಗೂ ನೂರಾರು ಯೋಗ ಬಂಧುಗಳು ಸಾರ್ವಜನಿಕರು ಭಾಗವಹಿಸಿದ್ದರು. ಜ. 22ರ ಸೋಮವಾರ ಬೆಳಗ್ಗೆ 5.30 ರಿಂದ 7ರವರೆಗೆ ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನ, ಶ್ರೀರಾಂಪುರದ ಶಿವ ದೇವಸ್ಥಾನ, ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಹಾಗೂ ಡಾ. ರಾಜ್‌ಕುಮಾರ್‌ರಸ್ತೆಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಈ ಸ್ಥಳಗಳಲ್ಲಿ ಸಾಮೂಹಿಕ ಹನುಮಾನ್ ನಮಸ್ಕಾರ ಹಾಗೂ ಸಾಮೂಹಿಕ ವಿಷ್ಣು ನಮಸ್ಕಾರ ನೆರವೇರಲಿದೆ.