ಸ್ವಚ್ಛತೆ ಮರೆತ ಪಾತಪಾಳ್ಯ ಗ್ರಾಪಂ: ರಾಶಿ ರಾಶಿ ತ್ಯಾಜ್ಯ ಸಂಗ್ರಹ

| Published : Apr 21 2025, 12:45 AM IST

ಸಾರಾಂಶ

ತ್ಯಾಜ್ಯ ಸಂಗ್ರಹ ಕಾರಣ ಚರಂಡಿ ಸಂಪೂರ್ಣ ಬಂದ್ ಆಗಿದ್ದು ನೀರು ಹರಿಯದೇ ದುರ್ನಾತ ಬೀರುತ್ತಿದೆ. ಹಾಗೂ ಅಕ್ಕ ಪಕ್ಕದಲ್ಲಿ ಲ್ಲೆಂದರಲ್ಲಿ ಕೊಳೆತ ತರಕಾರಿ ಹಾಗೂ ಹಸಿ ತ್ಯಾಜ್ಯ ಬಿಸಡಿದ್ದು ದುರ್ನಾತ ಬೀರುತ್ತಿದೆ. ಚರಂಡಿಯ ನೀರಿನಿಂದ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದ್ದು ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಚೇಳೂರು

ತಾಲೂಕಿನ ಪಾತಪಾಳ್ಯ ಗ್ರಾಮದ ಬಸ್ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಯವರು ಹಾಗೂ ಮದ್ಯ ಮಾರಾಟ ಮಳಿಗೆಗಳ ಖಾಲಿ ಬಾಕ್ಸ್‌ಗಳು, ಪ್ಯಾಕೆಟ್ ಸೇರಿದಂತೆ ಮದ್ಯ ಕುಡಿದ ಲೋಟಗಳು ಹಾಗೂ ತ್ಯಾಜ್ಯವನ್ನು ಚರಂಡಿ ಹಾಗೂ ಪಕ್ಕದಲ್ಲೆ ಇರುವ ಖಾಲಿ ನಿವೇಶನದಲ್ಲಿ ಬಿಸಾಕುತ್ತಿರುವ ಪರಿಣಾಮ ಕಸದ ರಾಶಿಯೇ ಬಿದ್ದಿದ್ದು, ದುರ್ನಾತ ಬೀರುತ್ತಿದೆ.

ಇದರಿಂದ ಚರಂಡಿ ಸಂಪೂರ್ಣ ಬಂದ್ ಆಗಿದ್ದು ಚರಂಡಿ ನೀರು ಹರಿಯದೇ ದುರ್ನಾತ ಬೀರುತ್ತಿದೆ. ಹಾಗೂ ಅಕ್ಕ ಪಕ್ಕದಲ್ಲಿ ಲ್ಲೆಂದರಲ್ಲಿ ಕೊಳೆತ ತರಕಾರಿ ಹಾಗೂ ಹಸಿ ತ್ಯಾಜ್ಯ ಬಿಸಡಿದ್ದು ದುರ್ನಾತ ಬೀರುತ್ತಿದೆ ಜೊತೆಗೆ ಚರಂಡಿಯ ನೀರಿನಿಂದ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದ್ದು ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸುವಂತಾಗಿದೆ.

ಸ್ವಚ್ಛತೆ ಮರೆತ ಗ್ರಾಪಂ

ಈ ಕುರಿತು ಸ್ಥಳೀಯರು ಗ್ರಾಮಸ್ಥರ ವಿರುದ್ಧ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಈ ಹಿಂದೆ ದೂರು ನೀಡಿದ ಒಂದೆರೆಡು ದಿನ ನೆಪ ಮಾತ್ರಕ್ಕೆ ತ್ಯಾಜ್ಯವನ್ನು ತೆಗೆದರಾದರೂ ಮತ್ತೆ ಅದೇ ಜಾಗದಲ್ಲಿ ಪುನಃ ಪುನಃ ತ್ಯಾಜ್ಯದ ರಾಶಿ ಬಿದ್ದಿದೆ. ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆಯ ಬಗ್ಗೆ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಸ್ಥಳೀಯರು ಈ ತ್ಯಾಜ್ಯದ ರಾಶಿಯಿಂದ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.

ಪ್ಲಾಸ್ಟಿಕ್‌ ನಿಷೇಧವಾಗಿದ್ದರೂ ಸಾರ್ವಜನಿಕರು ಜ್ಞಾನವಿಲ್ಲದೆಯೋ ಅಥವಾ ಆದೇಶವನ್ನು ಧಿಕ್ಕರಿಸಿಯೋ ಅಥಾವ ಅಧಿಕಾರಿಗ:ಳಿಗೆ ಮಮೂಲಿ ಕೋಟ್ಟು ಇನ್ನೂ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಲಾದರೂ ಜನತೆಗೆ, ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಿದೆ. ಆದ್ದರಿಂದ ಈ ಜಾಗಕ್ಕೆ ಗ್ರಾಮ ಪಂಚಾಯತಿ ವತಿಯಿಂದ ರಸ್ತೆಯ ಬದಿಯಲ್ಲಿ ಕಸ ಎಸೆಯದಂತೆ ನಾಮ ಫಲಕ ಅಳವಡಿಸಿ ಕಸ ಎಸೆಯುವವರ ವಿರುದ್ಧ ದಂಡ ಹಾಕುವಂತಹ ಕಠಿಣ ಕ್ರಮ ಕೈಗೊಂಡರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು..

ಕಸ ಹಾಕುವವರ ವಿರುದ್ಧ ಕ್ರಮ

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಬಾರ್ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮಾಡಬೇಕು ಹಾಗೂ ಕಸ ಹಾಕಲು ತೊಟ್ಟಿ ನಿರ‍್ಮಾಣ, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಹಾಗೂ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.ಕೋೋಟ್‌,,,,,,,,,,,,,,,,,,,,,,,,,,,,,,,,,,,

ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಲಾಗುವುದು ಹಾಗೂ ಖಾಲಿ ನಿವೇಶಗಳಲ್ಲಿ ಅಕ್ಕ ಪಕ್ಕದ ಅಂಗಡಿಯ ಮಾಲೀಕರು ಹಾಗೂ ಬಾರ್ ಮಾಲೀಕರು ತ್ಯಾಜ್ಯವನ್ನು ಸುರಿಯದಂತೆ ಎಚ್ಚರಿಕೆ ನೀಡಲಾಗುವುದು.

- ವಿ.ಮಂಜುನಾಥ, ಗ್ರಾಪಂ ಅಧ್ಯಕ್ಷರು. ಪಾತಪಾಳ್ಯ.