ನೆಲಮಂಗಲ: ಸ್ವಾತಂತ್ರ್ಯ ಪೂರ್ವದಲ್ಲೇ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದ ದಿವಂಗತ ಪಟೇಲ್ ಚನ್ನಪ್ಪನವರ ಅಭಿವೃದ್ಧಿ ಕಾರ್ಯ ಶ್ಲಾಘನೀಯ. ಜತೆಗೆ ಅವರ ತತ್ವಾದರ್ಶಗಳು ಸಮಾಜಕ್ಕೆ ಸ್ಪೂರ್ತಿ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು
ನೆಲಮಂಗಲ: ಸ್ವಾತಂತ್ರ್ಯ ಪೂರ್ವದಲ್ಲೇ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದ ದಿವಂಗತ ಪಟೇಲ್ ಚನ್ನಪ್ಪನವರ ಅಭಿವೃದ್ಧಿ ಕಾರ್ಯ ಶ್ಲಾಘನೀಯ. ಜತೆಗೆ ಅವರ ತತ್ವಾದರ್ಶಗಳು ಸಮಾಜಕ್ಕೆ ಸ್ಪೂರ್ತಿ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ನಗರದ ಪಟೇಲ್ ಚನ್ನಪ್ಪ ಬಡಾವಣೆ ನಿವಾಸಿಗಳಿಂದ ನಿರ್ಮಿಸಿದ್ದ ದಿವಂಗತ ಪಟೇಲ್ ಚನ್ನಪ್ಪ ಅವರ ಪುತ್ಥಳಿ ಅನಾವರಣ ಹಾಗೂ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಮಂದಿ ಸ್ವಾತಂತ್ರ್ಯ ಹೋರಾಟಗಾರಕ್ಕೆ ಶ್ರಮಿಸಿದ್ದು ಅದರಲ್ಲಿ ಪಟೇಲ್ ಚನ್ನಪ್ಪ ಅವರೂ ಪ್ರಮುಖರು. ಅವರ ಸೇವೆಯನ್ನು ಸದಾ ಕಾಲ ನೆನಪಿನಲ್ಲಿ ಉಳಿಯುವಂತೆ ಕುಟುಂಬಸ್ಥರು ಬಡಾವಣೆಗಳನ್ನು ನಿರ್ಮಿಸುತ್ತಿದ್ದು ಸಂತೋಷಕರ ಸಂಗತಿ. ಅವರು ಸಮಾಜಕ್ಕೆ ಮಾದರಿ ಸೇವೆ ಸದಾಕಾಲ ಉಳಿಯುವಂತೆ ಮಾಡಿದ್ದಾರೆ. ಹಿರಿಯರನ್ನು ನೆನೆದು ಅವರ ಸೇವೆ ಸ್ಮರಿಸಿ ಅವರ ಹೆಸರಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದು ಉತ್ತಮ ಬೆಳವಣಿಗೆ ಎಂದರು.ಈ ಭಾಗದಲ್ಲಿ ಪಾಟೇಲ್ ಚನ್ನಪ್ಪ ಅವರು ಅನ್ಯಾಯದ ವಿರುದ್ಧ ಹೋರಾಟ ಮಾಡಿ ನ್ಯಾಯವನ್ನು ದೊರಕಿಸುವ ಕಾರ್ಯ ಮಾಡುತ್ತಿದ್ದರು. ಅವರ ಸೇವೆ ಸದಾ ಕಾಲಕ್ಕೂ ಸ್ಪೂರ್ತಿದಾಯವಾಗಿದ್ದು ಅವರ ಮರಿಮೊಮ್ಮಗ ಎನ್.ಗಣೇಶ್ ಅವರನ್ನು ನಗರಸಭೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಪಟೇಲ್ ಚನ್ನಪ್ಪ ಋಣ ತೀರಿಸುವ ಭಾಗ್ಯ ಸ್ವಲ್ಪ ದೊರಕಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಎನ್.ಗಣೇಶ್ ಮಾತನಾಡಿ, ಪಟೇಲ್ ಚನ್ನಪ್ಪ ಅವರು ಬ್ರಿಟಿಷರ ಕಾಲದಲ್ಲಿ ಈ ಭಾಗದಲ್ಲಿ ಪಟೇಲ್ ಕಾರ್ಯ ಮಾಡಿ ಜನರಿಗೆ ಸಾಕಷ್ಟು ಅನುಕೂಲ ಹಾಗೂ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದರು. ಬಳಿಕ ಬ್ರಿಟಿಷರ ಆಡಳಿತ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡಿದರು. ಅವರ ಸೇವೆಯನ್ನು ಸ್ಮರಣೆ ಮಾಡುವ ಉದ್ದೇಶದಿಂದ ಇಂದು ಅವರ ವಂಶಸ್ಥರು ಹಾಗೂ ಅವರ ಬಡಾವಣೆ ನಿವಾಸಿಗಳು ಸುಮಾರು 450ಕ್ಕೂ ಮನೆಗಳು ಅವರ ಪುತ್ಥಳಿ ನಿರ್ಮಾಣ ಕಾರ್ಯ ಮಾಡಲಾಗಿದೆ. ಅವರ ಹೆಸರಲ್ಲಿ ಅಂಗನವಾಡಿ ನಿರ್ಮಾಣ, ಬೋರ್ ವೆಲ್ ವ್ಯವಸ್ಥೆ, ಅನ್ನದಾಸೋಹ ಸೇರಿದಂತೆ ಸಾಕಷ್ಟು ಸೇವೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಮತ್ತಷ್ಟು ಸಮಾಜ ಮುಖಿ ಕಾರ್ಯಗಳನ್ನು ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಶಿವಾನಂದ ಆಶ್ರಮದ ಶ್ರೀ ರಾಮಾನಂದನಾಥ ಸ್ವಾಮೀಜಿ, ನೆ.ಯೋ.ಪ್ರಾಧಿಕಾರ ಅದ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣ್‌ಗೌಡ, ನಗರಸಭೆ ಸದಸ್ಯ ಆಂಜಿನಪ್ಪ, ಪ್ರಸಾದ್, ಶಿವಕುಮಾರ್, ಮುಖಂಡ ಚಿಕ್ಕನಾಗಯ್ಯ, ಕೃಷ್ಣಪ್ಪ, ಮುನಿಯಪ್ಪ, ಕೃಷ್ಣಪ್ಪ, ಚಂದ್ರಕುಮಾರ್, ವೆಂಕಟೇಶ್, ವಸಂತ್, ಪ್ರಸನ್ನ, ಲೋಕೇಶ್, ಈರೇಗೌಡ, ಎನ್.ಎ.ಸೂರಿ, ಚನ್ನೇಗೌಡ, ಜಯಮ್ಮ, ಎನ್.ಟಿ.ಕೃಷ್ಣ, ಎಬ್.ಎಸ್.ಗೌಡ, ಲೋಕೇಶ್ಗೌಡ, ಎನ್.ಜಿ.ವೆಂಕಟೇಶ್, ಭಾಗ್ಯರಾಜು, ಮುರಳಿ, ಸತೀಶ್‌ಕುಮಾರ್, ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.
ಪೊಟೊ-6ಕೆಎನ್‌ಎಲ್‌ಎಮ್1- ಪುತ್ಥಳಿ ಅನಾವರಣ:ನೆಲಮಂಗಲದ ಪಟೇಲ್ ಚನ್ನಪ್ಪ ಬಡಾವಣೆ ನಿವಾಸಿಗಳಿಂದ ನಿರ್ಮಿಸಿರುವ ದಿ. ಪಟೇಲ್ ಚನ್ನಪ್ಪ ಅವರ ಪುತ್ಥಳಿಯನ್ನು ಶಾಸಕ ಎನ್.ಶ್ರೀನಿವಾಸ್ ಅನಾವರಣಗೊಳಿಸಿದರು. ನಗರಸಭೆ ಅದ್ಯಕ್ಷ ಎನ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.