ಸಾರಾಂಶ
ನರಗುಂದ ತಾಲೂಕಿನಲ್ಲಿ ಎನ್.ಆರ್.ಜಿ ಯೋಜನೆಯಲ್ಲಿ ನಡೆದ ಸುರಕೋಡ, ಹದಲಿ ಗ್ರಾ.ಪಂ.ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಗುರುವಾರ ತಾ.ಪಂ. ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನರಗುಂದ: ತಾಲೂಕಿನಲ್ಲಿ ಎನ್.ಆರ್.ಜಿ ಯೋಜನೆಯಲ್ಲಿ ನಡೆದ ಸುರಕೋಡ, ಹದಲಿ ಗ್ರಾ.ಪಂ.ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಗುರುವಾರ ತಾ.ಪಂ. ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆನಂತರ ಮಾತನಾಡಿ, ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಎನ್ಎಂಎಂಎಸ್ ಹಾಜರಾತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಕೂಲಿಕಾರರು ಎರಡು ಬಾರಿ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದರು. ತಾಲೂಕಿನ ಸುರಕೋಡ, ಹದಲಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ 2025-26 ನೇ ಸಾಲಿನ ಕ್ರಿಯಾಯೋಜನೆ ಏಪ್ರಿಲ್- 1ರಿಂದ ಆರಂಭವಾಗಿದ್ದು, ಪ್ರತಿ ದಿನಕ್ಕೆ ಒಬ್ಬರಿಗೆ 370 ರು. ಕೂಲಿ ಮೊತ್ತ ದೊರೆಯಲಿದೆ. ತಮಗೆ ಕೊಟ್ಟಿರುವ ಅಳತೆಯಂತೆ ಕೆಲಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಕೆಲಸ ಸಿಗಲಿದೆ. ಆದ್ದರಿಂದ ಎಲ್ಲರೂ ಸರಿಯಾಗಿ ಕೆಲಸ ನಿರ್ವಹಿಸಿ 370 ರುಪಾಯಿ ಕೂಲಿ ಮೊತ್ತ ಪಡೆಯಬೇಕು ಎಂದು ತಿಳಿಸಿದರು. ಕೂಲಿಕಾರರು 10-5-2 ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರುಪಾಯಿ ತಮ್ಮ ಖಾತೆಗೆ ನೇರವಾಗಿ ಪಾವತಿಯಾಗಲಿದೆ. ಕೂಲಿಕಾರರು ದಿನಕ್ಕೆ ಎರಡು ಬಾರಿ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ಒಂದು ಫೋಟೋದಲ್ಲಿದ್ದು ಎರಡನೇ ಫೋಟೋದಲ್ಲಿ ಗೈರಾಗುವ ಕೂಲಿಕಾರ ಖಾತೆಗೆ ಹಣ ಪಾವತಿಯಾಗುವುದಿಲ್ಲ. ಆದ್ದರಿಂದ ಕೂಲಿಕಾರರು ಎರಡು ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದರು. ನರೇಗಾ ಯೋಜನೆಯಡಿ ಕೂಲಿಕಾರರು ಬೇಸಿಗೆ ಅವಧಿಯಲ್ಲಿ ಕೂಲಿ ಕೆಲಸ ಪಡೆದುಕೊಂಡು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಯೋಜನೆಯಡಿ ಪಡೆಯುವ ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಿಗೆ ಮುಂಗಾರು ಬಿತ್ತನೆಯ ಬೀಜ ಗೊಬ್ಬರ ಖರೀದಿಗೆ ಸಹಾಯಕವಾಗುತ್ತದೆ. ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಿಡಿಒ ಶೃತಿ ಸಂಗನಾಳ, ತಾಂತ್ರಿಕ ಸಂಯೋಜಕರ ಹನುಮಂತ ಡಂಬಳ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ತಾಂತ್ರಿಕ ಸಾಹಾಯಕ ಸುಭಾಸ ಮಲ್ಲನಗೌಡ್ರ, ಬಿಎಫ್.ಟಿ ಮಂಜುನಾಥ ನಾಡಗೌಡ್ರ, ಗ್ರಾಪಂ ಸಿಬ್ಬಂದಿ, ನರೇಗಾ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.