ಎಲ್ಲರನ್ನೂ ಪ್ರೀತಿಸುವುದೇ ದೇಶಭಕ್ತಿ

| Published : Mar 29 2025, 12:31 AM IST

ಸಾರಾಂಶ

ಈ ಮಾ.23ಕ್ಕೆ ಮಹಾನ್‌ ದೇಶಭಕ್ತರಾದ ಭಗತ್ ಸಿಂಗ್- ರಾಜಗುರು -ಸುಖದೇವ್ ಹುತಾತ್ಮರಾಗಿ 94 ವರ್ಷ ಕಳೆದಿವೆ. ದೇಶದ ಎಲ್ಲ ಜನರು ನಿರ್ಭೀತಿಯಿಂದ ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಯಿಂದ ಬದುಕಬೇಕು ಎಂಬ ಮಹಾದಾಸೆಯ ಕಾರಣಕ್ಕೆ ಬ್ರಿಟಿಷರ ಲಾಠಿ, ಬಂದೂಕು ಯಾವುದಕ್ಕೂ ಅಂಜದೇ ನಗುತ್ತಲೇ 1931 ಮಾರ್ಚ್ 23ರಂದು ಇವರು ನೇಣುಗಂಬಕ್ಕೆ ಏರಿದರು ಎಂದು ಕರ್ನಾಟಕ ಶ್ರಮಿಕಶಕ್ತಿ ಸಂಘಟನೆಯ ಸತೀಶ ಅರವಿಂದ್ ಸ್ಮರಿಸಿದ್ದಾರೆ.

- ಭಗತ್ ಸಿಂಗ್ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಸತೀಶ್‌ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಈ ಮಾ.23ಕ್ಕೆ ಮಹಾನ್‌ ದೇಶಭಕ್ತರಾದ ಭಗತ್ ಸಿಂಗ್- ರಾಜಗುರು -ಸುಖದೇವ್ ಹುತಾತ್ಮರಾಗಿ 94 ವರ್ಷ ಕಳೆದಿವೆ. ದೇಶದ ಎಲ್ಲ ಜನರು ನಿರ್ಭೀತಿಯಿಂದ ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಯಿಂದ ಬದುಕಬೇಕು ಎಂಬ ಮಹಾದಾಸೆಯ ಕಾರಣಕ್ಕೆ ಬ್ರಿಟಿಷರ ಲಾಠಿ, ಬಂದೂಕು ಯಾವುದಕ್ಕೂ ಅಂಜದೇ ನಗುತ್ತಲೇ 1931 ಮಾರ್ಚ್ 23ರಂದು ಇವರು ನೇಣುಗಂಬಕ್ಕೆ ಏರಿದರು ಎಂದು ಕರ್ನಾಟಕ ಶ್ರಮಿಕಶಕ್ತಿ ಸಂಘಟನೆಯ ಸತೀಶ ಅರವಿಂದ್ ಸ್ಮರಿಸಿದರು.

ನಗರದ ಮಹಾನಗರ ಪಾಲಿಕೆ ಎದುರಿನ ಭಗತ್ ಸಿಂಗ್ ಪ್ರತಿಮೆ ಬಳಿ ಭಾನುವಾರ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಭಗತ್ ಸಿಂಗ್ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶಭಕ್ತಿ ಎಂದರೆ ಯಾರನ್ನೂ ದ್ವೇಷಿಸುವುದಲ್ಲ, ಎಲ್ಲರನ್ನೂ ಪ್ರೀತಿಸುವುದು. ಎಲ್ಲರ ಏಳಿಗೆಗಾಗಿ ದುಡಿಯುವುದು ನಾವು ಬದುಕನ್ನು ಪ್ರೀತಿಸುತ್ತೇವೆ. ಅದರ ಸೌಂದಯವನ್ನು ಕಾಪಾಡಲು ಹೋರಾಡುತ್ತೇವೆ ಎಂದು ಘೋಷಿಸಿದ ಮತ್ತು ಹಾಗೆಯೇ ಬದುಕಿದ ಭಾರತದ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದ ಮತ್ತು ಬ್ರಿಟಿಷರ ಎದೆನಡುಗಿಸಿದ ಈ ಯುವಚೇತನಗಳ ಸಾಧನೆ, ದೇಶಭಕ್ತಿ ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷ ಬಿ.ಖಲೀಲ್, ಜಿಲ್ಲಾಧ್ಯಕ್ಷ ಆದೀಲ್ ಖಾನ್, ಅಣ್ಣಪ್ಪ, ಶಬ್ಬೀರ್, ಹನುಮಂತಪ್ಪ, ಮಾನವ ಬಂಧುತ್ವ ವೇದಿಕೆಯ ಲಕ್ಷ್ಮಣ್ ರಮಾವತ್ ಇತರರು ಇದ್ದರು.

- - - -23ಕೆಡಿವಿಜಿ33.ಜೆಪಿಜಿ:

ದಾವಣಗೆರೆಯಲ್ಲಿ ಜನಶಕ್ತಿ ಜಿಲ್ಲಾ ಸಮಿತಿ ವತಿಯಿಂದ ಭಗತ್ ಸಿಂಗ್ ಹುತಾತ್ಮ ದಿನಾಚರಣೆ ಆಚರಿಸಲಾಯಿತು.