ಪಶ್ಚಕಂಥಿ ಮಠದ ಉತ್ತರಾಧಿಕಾರಿಗೆ ಪಟ್ಟಾಧಿಕಾರ

| Published : Dec 15 2023, 01:30 AM IST

ಸಾರಾಂಶ

ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಪಶ್ಚಕಂಥಿ ಹಿರೇಮಠ, ಕುಷ್ಟಗಿ, ಗೆಜ್ಜೆಬಾವಿ, ಜಲಕಮಲದಿನ್ನಿ ಗುಡದೂರ ಮಠಗಳ ಸ್ಥಿರ ಹಾಗೂ ಚರ ಮಠಗಳ ನೂತನ ಉತ್ತರಾಧಿಕಾರಿಯ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಸಡಗರ ಹಾಗೂ ಸಂಭ್ರಮದೊಂದಿಗೆ ನೆರವೇರಿತು. ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಿಡಶೇಸಿ ಗ್ರಾಮದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದಂಡಕ ಮಂಡಲ ದೀಕ್ಷೆ, ಉಪದೇಶಾಮೃತ, ಮುದ್ರೆಯುಂಗುರ, ಕಿರೀಟ ಧಾರಣೆ ಇತರೆ ವಿಧಿ ವಿಧಾನಗಳೊಂದಿಗೆ ಅನೇಕ ಮಠಾಧೀಶರ ಸಾನ್ನಿಧ್ಯದಲ್ಲಿ ಮರುಳಸಿದ್ದ ಶಿವಾಚಾರ್ಯರು ವಿಶ್ವರಾಧ್ಯ ದೇವರಿಗೆ ಕರಿಬಸವ ಶಿವಾಚಾರ್ಯರು ಎಂಬ ನಾಮಕರಣದೊಂದಿಗೆ ಪಟ್ಟಾಧಿಕಾರದ ಕಾರ್ಯಕ್ರಮ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ನಿಡಶೇಸಿ ಗ್ರಾಮದ ಪಶ್ಚಕಂಥಿ ಹಿರೇಮಠ, ಕುಷ್ಟಗಿ, ಗೆಜ್ಜೆಬಾವಿ, ಜಲಕಮಲದಿನ್ನಿ ಗುಡದೂರ ಮಠಗಳ ಸ್ಥಿರ ಹಾಗೂ ಚರ ಮಠಗಳ ನೂತನ ಉತ್ತರಾಧಿಕಾರಿಯ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಸಡಗರ ಹಾಗೂ ಸಂಭ್ರಮದೊಂದಿಗೆ ನೆರವೇರಿತು.ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಿಡಶೇಸಿ ಗ್ರಾಮದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದಂಡಕ ಮಂಡಲ ದೀಕ್ಷೆ, ಉಪದೇಶಾಮೃತ, ಮುದ್ರೆಯುಂಗುರ, ಕಿರೀಟ ಧಾರಣೆ ಇತರೆ ವಿಧಿ ವಿಧಾನಗಳೊಂದಿಗೆ ಅನೇಕ ಮಠಾಧೀಶರ ಸಾನ್ನಿಧ್ಯದಲ್ಲಿ ಮರುಳಸಿದ್ದ ಶಿವಾಚಾರ್ಯರು ವಿಶ್ವರಾಧ್ಯ ದೇವರಿಗೆ ಕರಿಬಸವ ಶಿವಾಚಾರ್ಯರು ಎಂಬ ನಾಮಕರಣದೊಂದಿಗೆ ಪಟ್ಟಾಧಿಕಾರದ ಕಾರ್ಯಕ್ರಮ ನಡೆಸಿಕೊಟ್ಟರು.ನಂತರ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಚನ್ನಬಸವ ಸ್ವಾಮೀಜಿ ಹಾಗೂ ಕರಿಬಸವ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ನಡೆಯಿತು. ಕುಂಭ ಕಲಶಗಳನ್ನು ಹೊತ್ತ ಮಹಿಳೆಯರು, ವಿವಿಧ ವಾದ್ಯ, ಕಲಾ ಮೇಳದವರು ಮೆರವಣಿಗೆಗೆ ಕಳೆ ತಂದರು. ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಗಣ್ಯರು ಭಾಗವಹಿಸಿದ್ದರು. ನಂತರ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.