ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಮಂಗಳವಾರ ನಡೆದ ಪಂದ್ಯದಲ್ಲಿ ಪಟ್ಟಡ ತಂಡ ಭರ್ಜರಿ ಜಯ ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು) ನಡುವಿನ ಪಂದ್ಯದಲ್ಲಿ ಪಟ್ಟಡ ತಂಡ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಮಂಗೇರಿರ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಕ್ಕಪಂಡ ತಂಡ ಗೆಲುವು ದಾಖಲಿಸಿತು.ಮರುವಂಡ ಮತ್ತು ಮಾಣಿಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿಪಂಡ ತಂಡ 4-3 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಮಂಡೀರ ಮತ್ತು ಮಂಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡ ಟೈಬ್ರೇಕರ್ ಮೂಲಕ ಜಯ ಸಾಧಿಸಿತು.ಬೊಜ್ಜಂಗಡ ಮತ್ತು ಪಟ್ರಪಂಡ ನಡುವಿನ ಪಂದ್ಯ ಯಾವುದೇ ಗೋಲು ಇಲ್ಲದೆ ಡ್ರಾ ಆಯಿತು. ನಂತರ ನಡೆದ ಟೈ ಬ್ರೇಕರ್‌ನಲ್ಲಿ ಬೊಜ್ಜಂಗಡ ತಂಡ 4 ಮತ್ತು ಪಟ್ರಪಂಡ ತಂಡ 2 ಗೋಲು ದಾಖಲಿಸಿದವು.
ಪಟ್ಟಚೆರುವಂಡ ಮತ್ತು ಚೆಟ್ರುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಚೆರುವಂಡ ತಂಡ 4-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.ಮೋಟನಾಳಿರ ಮತ್ತು ಬೊಳ್ತಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ತಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ನೆರಪಂಡ ಮತ್ತು ಕಾಂಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡಂಡ ತಂಡ 5-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.ಚೆರಿಯಂಡ ಮತ್ತು ಪೂಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರಿಯಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಮಾದೇಟಿರ ಮತ್ತು ಮಲ್ಚೀರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಮಲ್ಚೀರ ತಂಡ ಜಯ ಸಾಧಿಸಿತು.ಕೋಡಿರ ಮತ್ತು ಕೊಡಂದೇರ ತಂಡಗಳ ನಡುವಿನ ವಾಕ್ ಓವರ್‌ನಲ್ಲಿ ಕೊಡಂದೇರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಪಾಲೆಕಂಡ ಮತ್ತು ಬಾಚಿರ ತಂಡಗಳ ವಾಕ್ ಓವರ್ ನಲ್ಲಿ ಬಾಚಿರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.ಬಡುವಮಂಡ ಮತ್ತು ಮೇದುರ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಮಂಡ 5-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಪಳಂಗೇಟಿರ ಮತ್ತು ಪೋತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗೇಟಿರ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಬೈರಾಜಂಡ ಮತ್ತು ಬಾಳೆಕುಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಬೈರಾಜಂಡ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.ಚೊಟ್ಟೆರ ಮತ್ತು ಪಳಂಗಿಯಂಡ ನಡುವೆ ನಡೆದ ಪಂದ್ಯದಲ್ಲಿ ಚೊಟ್ಟೆರ ತಂಡ 5-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಉಳಿದಂತೆ ಅಲ್ಲಾಂಡ, ಕಂಬೇಯಂಡ, ಪಳೆಯಂಡ, ಮೂಕಳೇರ, ಕಲ್ಲೇಂಗಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿತು.