ಸಾರಾಂಶ
ರೋಗಗಳಿಗೆ ಬಲಿಯಾಗುತ್ತಿದ್ದಾಪ್ರಸ್ತುತ ದಿನಮಾನಗಳಲ್ಲಿ ಎಲ್ಲರೂ ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಹಲವಾರು ರೆ.
ಕನ್ನಡಪ್ರಭ ವಾರ್ತೆ ಮೈಸೂರು
ಪಾವನಾ ಮ್ಯೂಸಿಕಲ್ ಇವೆಂಟ್ಸ್ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತಸಭಾದಲ್ಲಿ ಮಂಗಳವಾರ ಮರೆಯಲಾಗದ ಮಧುರ ಗೀತೆಗಳು- ಸಂಗೀತ ಸಂಭ್ರಮ ಏರ್ಪಡಿಸಿತ್ತು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡ ನಿವಾರಣೆಗೆ ಸಂಗೀತ ಆಲಿಕೆ ಸಹಕಾರಿ ಎಂದರು.
ರೋಗಗಳಿಗೆ ಬಲಿಯಾಗುತ್ತಿದ್ದಾಪ್ರಸ್ತುತ ದಿನಮಾನಗಳಲ್ಲಿ ಎಲ್ಲರೂ ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಹಲವಾರು ರೆ. ಹೀಗಾಗಿ ಸಂಜೆ ಬಿಡುವಿನ ವೇಳೆ ಸಂಗೀತ ಆಲಿಸುವುದರಿಂದ ಮಾನಸಿಕವಾಗಿ ನೆಮ್ಮದಿ ಪಡೆದು, ಒತ್ತಡ ನಿವಾರಿಸಿಕೊಳ್ಳಬಹುದು ಎಂದರು.ಮೈಸೂರು ರಾಜಮಹಾರಾಜರ ಕಾಲದಿಂದಲೂ ಸಾಂಸ್ಕೃತಿಕ ನಗರಿ ಎಂದೇ ಹೆಸರುವಾಸಿ. ಇತ್ತೀಚಿನ ದಿನಗಳಲ್ಲಿ ನಾಗರಾಜ ಬೈರಿ ಅವರ ನೇತೃತ್ವದ ಸುಗಮ ಸಂಗೀತ ಪರಿಷತ್ ಹಲವಾರು ಮಂದಿಗೆ ವೇದಿಕೆ ಒದಗಿಸುವ ಮೂಲಕ ನಿಜವಾದ ಕಲಾಪೋಷಕ ಪಾತ್ರ ನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಪಾವನಾ ಮ್ಯೂಸಿಕಲ್ ಇವೆಂಟ್ಸ್ ಪಾವನಾ ಹಾಗೂ ಪರಮೇಶ್ವರ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪಾವನಾ ಅವರು ಗ್ರಾಮಾಂತರ ಪ್ರದೇಶಗಳಿಗೂ ಹೋಗಿ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಚಲನಚಿತ್ರ ನಿರ್ಮಾಪಕ ಎಸ್.ಎ. ಶ್ರೀನಿವಾಸ್, ಕಲಾಪೋಷಕ ಕಾರ್ಪೋರೇಷನ್ ಮಂಜುನಾಥ್ ಮುಖ್ಯ ಅತಿಥಿಗಳಾಗಿದ್ದರು.
ಪಾವನಾ, ಪರಮೇಶ್, ರವಿರಾಜ್ ಹಾಸು, ನರಸಿಂಹಮೂರ್ತಿ,. ನಾಗೇಂದ್ರ, ತೇಜಾವತಿ, ಸುಮಾ ಅವರು ಗಾಯನ ಪ್ರಸ್ತುತಪಡಿಸಿದರು. ಅಜಯ್ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.