ಸಾರಾಂಶ
ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ರಾಜ್ಯಾದ್ಯಂತ "ಪವತಿ ವಾರಸು ಖಾತೆ ಆಂದೋಲನ " ಆರಂಭಿಸಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಧೀರಜ್ ಮುನಿರಾಜು ಕರೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅವರು, ಪವತಿ ವಾರಸು ಖಾತೆ ಆಂದೋಲದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.ಮುಖ್ಯಮಂತ್ರಿಗಳು, ಕಂದಾಯ ಸಚಿವರ ನಿರ್ದೇಶನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪವತಿ ವಾರಸು ಖಾತೆ ಆಂದೋಲನ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸೋಮವಾರದಿಂದ ಅರ್ಜಿ ಸ್ವೀಕಾರ ಕಾರ್ಯ ನಡೆಯುತ್ತಿದ್ದು, ಫೆ.5ರವರೆಗೆ ಮುಂದುವರೆಯಲಿದೆ ಎಂದರು.
ತಾಲೂಕಿನಲ್ಲಿ 11 ಸಾವಿರ ಪವತಿ ಖಾತೆ:ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೊಂದಣಿ ಆರಂಭವಾದಾಗ ಹಲವಾರು ರೈತರಿಗೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ 11 ಸಾವಿರ ಖಾತೆಗಳು ಪವತಿ ಖಾತೆ ಆಗಬೇಕಿದೆ ಎಂದು ಅಂದಾಜಿಸಲಾಗಿದೆ. ಒಂದು ತಿಂಗಳ ಕಾಲ ನಡೆಯುವ ಆಂದೋಲನದಲ್ಲಿ ಕನಿಷ್ಠ ಏಳು ಸಾವಿರ ಪವತಿ ಖಾತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಸುಮಾರು 50-60 ವರ್ಷಗಳಿಂದಲೂ ಹಿಡುವಳಿ ಜಮೀನುಗಳ ಖಾತೆದಾರರು ನಿಧನ ಹೊಂದಿದ್ದರೂ ಸಹ ವಾರಸುದಾರರಿಗೆ ಖಾತೆಯಾಗದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಶೇಷ ಆಂದೋಲನದ ರೀತಿಯಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ವಿಲೇವಾರಿ ಮಾಡಲು ಜಿಲ್ಲಾಡಳಿತ/ತಾಲ್ಲೂಕು ಆಡಳಿತವು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.ವಾರಸುದಾರರಿಗೆ ಪವತಿ ಖಾತೆಯಾಗದೇ ಇರುವ ಹಕ್ಕುದಾರರು ಸರ್ಕಾರದ ಯಾವುದೇ ಯೋಜನೆಗಳನ್ನು ರೈತರು ಪಡೆಯಲು ಸಾಧ್ಯವಾಗದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳಾದ ಪಿ.ಎಂ. ಕಿಸಾನ ಯೋಜನೆ, ಬರ, ಅತಿವೃಷ್ಠಿ ಪರಿಹಾರ ಹಾಗೂ ಇನ್ನುಳಿದ ಸರ್ಕಾರದ ಯಾವುದೇ ಯೋಜನೆಗಳನ್ನು ಪೂಟ್ಸ್ ಐಡಿ ಮುಖಾಂತರ ಸವಲತ್ತುಗಳನ್ನು ನೀಡಲಾಗುತ್ತಿದ್ದು. ಖಾತೆ ಬದಲಾವಣೆಯಾಗದೆ ರೈತರು ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಈ ಹಿನ್ನೆಲೆಯಲ್ಲಿ ಆಂದೋಲನ ಮಹತ್ವ ಪಡೆದಿದೆ ಎಂದರು.
ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ನಗರಸಭಾ ಸದಸ್ಯ ಪದ್ಮನಾಭ, ವಕೀಲ ಕಾಂತರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಬಾಕ್ಸ್..................
ಸಂಪರ್ಕಿಸಬೇಕಾದ ಅಧಿಕಾರಿಗಳ ದೂ.ಸಂಖ್ಯೆ:ಗ್ರೇಡ್-2 ತಹಶೀಲ್ದಾರ್ , ತಾಲೂಕು ಕಚೇರಿ- 9448346792, ಶಿರಸ್ತೇದಾರ್- ತಾಲೂಕು ಕಚೇರಿ 9008890958, ತೂಬಗೆರೆ ಹೋಬಳಿ ಉಪ ತಹಸೀಲ್ದಾರ್ - 9611444610, ಉಪ ತಹಸೀಲ್ದಾರ್ ದೊಡ್ಡಬೆಳವಂಗಲ ಹೋಬಳಿ - 9901994991, ಉಪ ತಹಸೀಲ್ದಾರ್ ಸಾಸಲು ಹೋಬಳಿ - 9901337869, ಉಪ ತಹಸೀಲ್ದಾರ್ ಮಧುರೆ ಹೋಬಳಿ - 7795686879, ಕಸಬಾ ಹೋಬಳಿ 1 - 9743060315, ಕಸಬಾ ಹೋಬಳಿ 2 - 9481555500, ದೊಡ್ಡಬೆಳವಂಗಲ ಹೋಬಳಿ1 - 9663327907,
ದೊಡ್ಡಬೆಳವಂಗಲ ಹೋಬಳಿ2 - 9964903205, ಸಾಸಲು ಹೋಬಳಿ1 - 9535175316, ಸಾಸಲು ಹೋಬಳಿ 2 - 9483482766, ತೂಬಗೆರೆ ಹೋಬಳಿ - 9986466916, ಮಧುರೆ ಹೋಬಳಿ - 9606940774 .ಬಾಕ್ಸ್-.................ಒದಗಿಸಬೇಕಾದ ದಾಖಲೆಗಳು :
1. ಅರ್ಜಿ, 2. ಪಹಣಿ, 3. ಮೃತ ಖಾತೆದಾರರ ಮರಣ ಪ್ರಮಾಣ ಪತ್ರ (ಪ್ರಮಾಣ ಪತ್ರ ಇಲ್ಲದೆ ಹೋದರೆ ಉಪವಿಭಾಗಾಧಿಕಾರಿಗಳಿಂದ ಅಲಭ್ಯ ಪ್ರಮಾಣ ಪತ್ರ) , 4. ನಾಡ ಕಚೇರಿಯಿಂದ ದೃಢೀಕರಿಸಲ್ಪಟ್ಟ ವಂಶವೃಕ್ಷ5. ಆಧಾರ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳು.ಫೋಟೋ-9ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿ ಮಂಗಳವಾರ ಶಾಸಕ ಧೀರಜ್ ಮುನಿರಾಜ್ ಪವತಿ ವಾರಸು ಖಾತೆ ಆಂದೋಲನ ಕರಪತ್ರ ಅನಾವರಣಗೊಳಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))