ಬಾವಿಯಲ್ಲಿ 2 ಗಂಟೆ ಪವನ್‌ ಕುಮಾರ್‌ ವಳಕೇರಿ ಜಲಯೋಗ

| Published : Jun 22 2024, 12:54 AM IST

ಸಾರಾಂಶ

ಕಲಬುರಗಿ ಹೊರವಲಯ ನಂದಿಕೂರ್‌ನಲ್ಲಿರುವ ಮಲ್ಲೇಶಪ್ಪ ಏವೂರ್‌ ಇವರ ತೋಟದಲ್ಲಿನ ಬಾವಿ ನೀರಲ್ಲಿ ಯೋಗಪಟು, ಗ್ರಾಪಂ ಸದಸ್ಯ ಪವನಕುಮಾರ್‌ ವಳಕೇರಿ ಬೆಳಗಿನ 2 ಗಂಟೆಗಳ ಕಾಲ ಜಲಯೋಗ ಮಾಡಿ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಶ್ವ ಯೋಗ ದಿನದ ಅಂಗವಾಗಿ ಶುಕ್ರವಾರ ಕಲಬುರಗಿ ಹೊರವಲಯ ನಂದಿಕೂರ್‌ನಲ್ಲಿರುವ ಮಲ್ಲೇಶಪ್ಪ ಏವೂರ್‌ ಇವರ ತೋಟದಲ್ಲಿನ ಬಾವಿ ನೀರಲ್ಲಿ ಯೋಗಪಟು, ಗ್ರಾಪಂ ಸದಸ್ಯ ಪವನಕುಮಾರ್‌ ವಳಕೇರಿ ಬೆಳಗಿನ 2 ಗಂಟೆಗಳ ಕಾಲ ಜಲಯೋಗ ಮಾಡಿ ಗಮನ ಸೆಳೆದರು.

57 ವರ್ಷದ ಪವನ ವಳಕೇರಿ ಕಳೆದ 28 ವರ್ಷದಿಂದ ಜಲಯೋಗವನ್ನು ರೂಢಿ ಮಾಡಿಕೊಂಡಿದ್ದು ನಿತ್ಯ ಮಾಡುತ್ತಿದ್ದಾರೆ. ಈಗಾಗಲೇ ಮನೆಯಲ್ಲಿ ಮಗನಿಗೂ ಈ ಯೋಗ ರೂಢಿಯಾಗಿದೆ. ಇದಲ್ಲದೆ ನಾಗನಹಳ್ಳಿಯಲ್ಲಿ, ನಂದಿಕೂರದಲ್ಲಿಯೂ ಪವನ ವಳಕೇರಿಯವರ ಪ್ರಭಾವಕ್ಕೊಳಗಾಗಿ ಹಲವರು ಯುವಕರು ಜಲಯೋಗ ಮೈಗೂಡಿಸಿಕೊಂಡಿದ್ದಾರೆ.

ನಿತ್ಯ ಜಲಯೋಗ ಮಾಡೋದು ನನ್ನ ಹವ್ಯಾಸ. ಸಾಮಾನ್ಯ ಯೋಗಾಸನಗಳನ್ನೇ ಶ್ವಾಸ ನಿಯಂತ್ರಣದೊಂದಿಗೆ ಮಾಡುವುದೇ ಜಲಯೋಗವಾಗಿದೆ. ಈಜುತ್ತ ಶ್ವಾಸ ನಿಯಂತ್ರಣ ಮಾಡುವ ಜಲಯೋಗ ಕಠಿಣವಾದರೂ ಆರೋಗ್ಯಕ್ಕೆ ತುಂಬ ಉಪಯುಕ್ತವೆನ್ನುವ ಪವನ ವಳಕೇರಿಯವರು ಯೋಗ ಎಲ್ಲರೂ ನಿತ್ಯ ರೂಢಿ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.

ಕೊರೋನಾ ನಂತರದಲ್ಲಿ ತೋಟದ ಬಾವಿಗಳೇ ಕಾುತ್ತಿಲ್ಲ. ಇದ್ದರೂ ನೀರು ಸಾಕಷ್ಟು ಇರುತ್ತಿಲ್ಲ. ಆದಾಗ್ಯೂ ಮಲ್ಲೇಶಪ್ಪನವರ ಬಾವಿಯಲ್ಲಿ ನೀರು ಇರೋದರಿಂದ ತಮಗೆ ಜಲಯೋಗಕ್ಕೆ ಹೆಚ್ಚಿನ ಅನುಕೂಲವಾಗಿದೆ. ಎಲ್ಲರು ಜಲಯೋಗವಲ್ಲದೆ ಹೋದರೂ ಸರಳ ಯೋ ರಮಾಗೂಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಪವನ ಕಿವಿಮಾತು ಹೇಳಿದ್ದಾರೆ.ಪ್ರತಿದಿನ ಯೋಗ ಮಾಡಿದರೆ ಆರೋಗ್ಯವಾಗಿರಲು ಸಾಧ್ಯ . ಯೋಗ ಮಾಡುವುದರಿಂದ ಯಾವುದೇ ರೋಗವು ನಮ್ಮ ಸಮೀಪ ಬರುವುದಿಲ್ಲ ಆರೋಗ್ಯವಾಗಿರುತ್ತೇವೆ. ನಮ್ಮ ಗ್ರಾಮ, ನಗರ ಜಿಲ್ಲೆ, ರಾಜ್ಯ, ರಾಷ್ಟ್ರ ಆರೋಗ್ಯವಂತವಾಗಿರುತ್ತೆ. ಜಲಯೋಗ ಅನುಕೂಲವಿದ್ದವರು ಮಾಡಿರಿ. ಇದರಿಂದಲೂ ಆರೋಗ್ಯ ಚೆನ್ನಾಗಿರುತ್ತದೆ.

- ಪವನ ವಳಕೇರಿ, ಗ್ರಾಪಂ ಸದಸ್ಯರು, ನಂದೀಕೂರ್‌, ಕಲಬುರಗಿ