ಮೀಸಲಾತಿ ನೀಡಿ ಸಮಾಜದ ಋಣ ತೀರಿಸಿ: ಬಸವಜಯಮೃತ್ಯುಂಜಯ ಸ್ವಾಮೀಜಿ

| Published : Dec 09 2024, 12:46 AM IST

ಸಾರಾಂಶ

2ಎ ಮೀಸಲಾತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಂಚಮಸಾಲಿ ಸಮಾಜದ ಋಣತೀರಿಸಬೇಕು. ಅದನ್ನು ಬಿಟ್ಟು ಹೋರಾಟ ಹತ್ತಿಕಲು ಮುಂದಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

2ಎ ಮೀಸಲಾತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಂಚಮಸಾಲಿ ಸಮಾಜದ ಋಣತೀರಿಸಬೇಕು. ಅದನ್ನು ಬಿಟ್ಟು ಹೋರಾಟ ಹತ್ತಿಕಲು ಮುಂದಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಸಮೀಪದ ಹೊಸೂರ ಗ್ರಾಮದಲ್ಲಿ ನಡೆದ ಪಂಚಮಸಾಲಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹೋರಾಟವನ್ನು ಧಾರ್ಮಿಕ ನಾಯಕರು, ರಾಜಕೀಯ ಮುಖಂಡರು ಹಾಗೂ ಸಮಾಜದ ಪ್ರಮುಖರು ಮುನ್ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಹತ್ತಿಕ್ಕುವ ಕಾರ್ಯ ನಡೆಸಿರುವುದು ಸರಿಯಲ್ಲ ಎಂದ ಶ್ರೀಗಳು, ಹೊಸೂರ ಗ್ರಾಮದಿಂದ ಹೋರಾಟದ ಕಿಚ್ಚು ಹೆಚ್ಚಲಿದೆ ಎಂದು ಹೇಳಿದರು.

ಸಮಾಜದ ಮುಖಂಡರಾದ ಸೋಮಲಿಂಗ ಮೆಳ್ಳಿಕೇರಿ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಮತ್ತಿಕೊಪ್ಪ, ಜಗದೀಶ ಬೂದಿಹಾಳ, ವಿಜಯ ಬೊಳಣ್ಣವರ ಮಾತನಾಡಿ, ರಾಜಕೀಯವಾಗಿ ಹೋರಾಟದ ದುರುಪಯೋಗ ಪಡೆದುಕೊಳ್ಳುತ್ತಿರುವುದು ಹೋರಾಟಕ್ಕೆ ಹಿನ್ನಡೆಯಾಗಿದ್ದು, ಹೋರಾಟದ ನೇತೃತ್ವ ವಕೀಲರು ವಹಿಸಿದ್ದು ತಾರ್ಕಿಕ ಅಂತ್ಯಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಫ್.ಎಸ್.ಸಿದ್ದನಗೌಡರ ಪ್ರಸ್ತಾವಿಕವಾಗಿ ಮಾತನಾಡಿದರು. ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ತಾಲೂಕು ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೀರಣಗೌಡ ಸಂಗಣ್ಣವರ, ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ನೀರು ಬಳಕೆದಾರರ ಸಂಘದ ನಿರ್ದೇಶಕ ಚನ್ನಪ್ಪ ಬೂದಿಹಾಳ, ಶ್ರೀಕಾಂತ ಮಳಕನ್ನವರ ಇದ್ದರು. ವೀರೇಶ ಹಲಕಿ ಸ್ವಾಗತಿಸಿ, ನಿರೂಪಿಸಿದರು.