ಸಾರಾಂಶ
ಬೇರೆ ಕಡೆ ಸಾಲ ಶೂಲ ಮಾಡಿ ಕುಟುಂಬ ನಿರ್ವಹಿಸಬೇಕಾಗಿದೆ. ಜಿಲ್ಲೆಯ ಕೊಪ್ಪಳ, ಕುಷ್ಟಗಿ ಹಾಗೂ ಗಂಗಾವತಿ ತಾಲೂಕಿನ ಶಿಕ್ಷಕರಿಗೆ ಈಗಾಗಲೇ ವೇತನ ಪಾವತಿಯಾಗಿದೆ
ಯಲಬುರ್ಗಾ: ಸರ್ಕಾರಿ ಶಾಲೆಗಳಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುವ ಎಲ್‌ಕೆಜಿ,ಯುಕೆಜಿ ತರಗತಿಗಳ ಅತಿಥಿ ಶಿಕ್ಷಕರಿಗೆ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಅತಿಥಿ ಶಿಕ್ಷಕರಿಂದ ಪಟ್ಟಣದ ಬಿಇಒ ಅಶೋಕ ಗೌಡರಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಯಲಬುರ್ಗಾ ಹಾಗೂ ಕುಕನೂರ ಅವಳಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಕಳೆದ ವರ್ಷದಿಂದ ವೇತನ ಪಾವತಿಯಾಗಿಲ್ಲ.ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಬೇರೆ ಕಡೆ ಸಾಲ ಶೂಲ ಮಾಡಿ ಕುಟುಂಬ ನಿರ್ವಹಿಸಬೇಕಾಗಿದೆ. ಜಿಲ್ಲೆಯ ಕೊಪ್ಪಳ, ಕುಷ್ಟಗಿ ಹಾಗೂ ಗಂಗಾವತಿ ತಾಲೂಕಿನ ಶಿಕ್ಷಕರಿಗೆ ಈಗಾಗಲೇ ವೇತನ ಪಾವತಿಯಾಗಿದೆ. ನಮ್ಮ ತಾಲೂಕುಗಳ ಶಿಕ್ಷಕರಿಗೆ ವೇತನ ಪಾವತಿಸುವಂತೆ ಹಲವಾರು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾರಣ ವೇತನಕ್ಕಾಗಿ ಅಲೆದಾಡುವಂತಾಗಿದೆ. ವಾರದೊಳಗೆ ಪಾವತಿಯಾಗದಿದ್ದರೆ ಹೋರಾಟ ನಡೆಸಲಾಗುವುದು ಎಂದು ತಾಲೂಕು ಅತಿಥಿ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಏಳುಗುಡ್ಡದ, ಅತಿಥಿ ಶಿಕ್ಷಕರಾದ ವಸಂತಕುಮಾರ ಗುಡಿ, ರಮೇಶ ಗಾಣಧಾಳ, ಮಂಜುಳಾ ಗುತ್ತೂರ, ಮಹಾದೇವಿ, ಮರ್ತುಜಾ, ದಶರಥ, ಚೈತ್ರಾ ಅಂಗಡಿ, ಸಂಗೀತಾ, ಇಂದಿರಾಬಾಯಿ, ಸುಜಾತಾ, ಶಿವರಾಜ, ಭಾಗೀರಥಿ, ಅಶ್ವಿನಿ, ಶರಣಪ್ಪ, ಯಲ್ಲಪ್ಪ, ಸುಮರೀನ್, ಗೀತಾ, ಅಕ್ಕಮ್ಮ, ಹನುಮೇಶ, ಬಸವರಾಜ ಸೇರಿದಂತೆ ಇತರರು ಎಚ್ಚರಿಕೆ ನೀಡಿದರು.