ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘ: ಬಿಜೆಪಿ ಬೆಂಬಲಿತರ ಕ್ಲೀನ್‌ ಸ್ವೀಪ್‌

| Published : Jan 02 2025, 12:32 AM IST

ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘ: ಬಿಜೆಪಿ ಬೆಂಬಲಿತರ ಕ್ಲೀನ್‌ ಸ್ವೀಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಕಿಶನ್ ಪೊನ್ನೆಟ್ಟಿಯಂಡ 1008 ಮತ, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಪುಂಡರೀಕ ಅರಂಬೂರು 986 ಮತ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಪಕ್ಕಿರ 885 ಮತ, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ವಸಂತ ನಾಯ್ಕ 1001 ಮತ, ಮಹಿಳೆಯರ ಕ್ಷೇತ್ರದಲ್ಲಿ ಪ್ರಿಯಾಂಕಾ ರೋಹಿತ್ ಹೊಸೂರು 898 ಮತ, ವಾಣಿ ಜಗದೀಶ್ 853 ಮತ, ಸಾಲಗಾರರಲ್ಲದ ಕ್ಷೇತ್ರದಲ್ಲಿ ದಿನೇಶ್ ಸಣ್ಣಮನೆ 123 ಮತ, ಸಾಮಾನ್ಯ 6 ಕ್ಷೇತ್ರದಲ್ಲಿ ಎಸ್.ಸಿ.ಅನಂತ, 1193, ಯಶವಂತ ದೇವರಗುಂಡ 875, ತೀರ್ಥಪ್ರಸಾದ್ ಕೋಲ್ಚಾರ್ 886, ದಯಾನಂದ ಪನೆಡ್ಕ 902, ಹೊನ್ನಪ್ಪ ಕಾಸ್ಪಾಡಿ 778 ಮತ ಹಾಗೂ ರಾಮಮೂರ್ತಿ ಉಂಬಳೆ 802 ಮತಗಳನ್ನು ಪಡೆದು ಗೆಲವು ಸಾಧಿಸಿದರು.

ಈ ಸಂದರ್ಭ ಹಾಜರಿದ್ದ ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ, ಒಡೆದು ಆಳುವ ರಾಜಕೀಯ ತಂತ್ರಕ್ಕೆ ಸೋಲಾಗಿದೆ. ಬಿಜೆಪಿ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮಕ್ಕೆ ಜಯ ಸಿಕ್ಕಿದೆ ಎಂದು ಬಣ್ಣಿಸಿದರು.

.............ಬಿಜೆಪಿ-ಜೆಡಿಎಸ್ ಬೆಂಬಲಿತರ ಮೇಲುಗೈ

ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರು ೮ ಮಂದಿ ಆಯ್ಕೆಯಾದರೆ, ೪ ಕಾಂಗ್ರೆಸ್ ಮತ್ತು ಒಬ್ಬರು ಪಕ್ಷೇತರರು ಜಯಗಳಿಸಿದ್ದಾರೆ.ಒಟ್ಟು ೧೩ ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು, ಈ ಬಾರಿ ೯ ಮಂದಿ ಹೊಸ ಮುಖಗಳಿಗೆ ಮತದಾರರ ಆಶೀರ್ವಾದ ಸಿಕ್ಕಿದೆ. ಬಸವನಕೊಪ್ಪ ಗ್ರಾಮದ ಬಿ.ಪಿ.ಮೊಗಪ್ಪ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಹಿರಿಕರ ಗ್ರಾಮದ ಕೆ.ಕೆ. ಶಿವಪ್ರಕಾಶ್, ಹೆಗ್ಗುಳ ಗ್ರಾಮದ ಜಿ.ಎಂ. ಹೂವಯ್ಯ, ಅಜ್ಜಳ್ಳಿ ಗ್ರಾಮದ ಎ.ಎಸ್. ನವೀನ್ ಕುಮಾರ್, ಶುಂಠಿ ಗ್ರಾಮದ ಎಸ್.ಬಿ. ಭರತ್ ಕುಮಾರ್, ಗೌಡಳ್ಳಿ ಗ್ರಾಮದ ಜಿ.ಎಸ್. ನಾಗರಾಜು, ಹೊನ್ನವಳ್ಳಿ ಗ್ರಾಮದ ಎಚ್.ಎಸ್. ನೇತ್ರಾವತಿ, ಶುಂಠಿ ಗ್ರಾಮದ ಎಸ್.ಸಿ. ಸುನೀತಾ, ಹಾರಳ್ಳಿ-ಬೀಟಿಕಟ್ಟೆ ಗ್ರಾಮದ ಕೆ.ಜಿ. ದಿನೇಶ್, ಹಣಕೋಡು ಗ್ರಾಮದ ಎಚ್.ಆರ್. ಸುರೇಶ್, ಗೆಜ್ಜೆಹಣಕೋಡು ಗ್ರಾಮದ ಜಿ.ಬಿ. ಗಿರೀಶ್, ಜಿ.ಈ.ಸುರೇಶ್, ಶುಂಠಿ ಗ್ರಾಮದ ಕೆ.ಎಲ್.ರಕ್ಷಿತ್ ಆಯ್ಕೆಯಾಗಿದ್ದಾರೆ.