ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯತೆಯಾಗಲಿ-ಸಚಿವ ಶಿವಾನಂದ ಪಾಟೀಲ

| Published : Aug 18 2024, 01:46 AM IST

ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯತೆಯಾಗಲಿ-ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕಾಗಿದ್ದು, ಪಂಚಮಸಾಲಿ ಸಮಾಜದಿಂದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಹಾನಗಲ್ಲ: ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕಾಗಿದ್ದು, ಪಂಚಮಸಾಲಿ ಸಮಾಜದಿಂದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಶುಕ್ರವಾರ ಹಾನಗಲ್ಲ ತಾಲೂಕಿನ ನೀರಲಗಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಆಯೋಜಿಸಿದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸೈನಿಕರನ್ನು ಮೊದಲು ಗೌರವಿಸುವುದು ಈ ಸಮಾಜದ ಮೊದಲ ಆದ್ಯತೆಯಾಗಲಿ. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವ ಬಗೆಗೆ ಈ ವೇದಿಕೆಯಲ್ಲಿ ಮಾತನಾಡುವುದು ಬೇಡ. ಅದಕ್ಕಾಗಿ ಸರಿಯಾದ ಸ್ಥಳದಲ್ಲಿ ನಮ್ಮ ಪ್ರಯತ್ನ ನಡೆಸುತ್ತೇವೆ. ನಮ್ಮ ಸರಕಾರ ರೈತರ ಪರವಾಗಿದೆ. ಬೆಲೆ ಏರಿಳಿತಗಳಿಂದಾಗಿ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾವೇರಿ ಜಿಲ್ಲೆ ಆರೋಗ್ಯ ಸೌಲಭ್ಯದಿಂದ ವಂಚಿತವಾಗಿದೆ. ಹಾವೇರಿ ಕುಡಿಯುವ ನೀರಿಗೆ ಬಡಿದಾಡುತ್ತಿದೆ. ಹಾವೇರಿ ಜಿಲ್ಲೆ ನೀರಾವರಿ ಸಮಸ್ಯೆಗಳಿಂದ ಕೂಡಿದೆ. ಇವೆಲ್ಲಕ್ಕೂ ಸೌಲಭ್ಯ ಒದಗಿಸಲು ನಮ್ಮ ಸರಕಾರ ಮುಂದಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಹಾನಗಲ್ಲ ತಾಲೂಕಿನ ಜನತೆ ನನಗೆ ನೀಡಿದ ಅಧಿಕಾರವನ್ನು ಜನತೆಯ ಹಿತಕ್ಕೆ ಶ್ರಮಿಸುವ ಮೂಲಕ ಸಾರ್ಥಕವಾಗಿ ಕೆಲಸ ಮಾಡುತ್ತಿದ್ದೇನೆ. ಪಂಚಮಸಾಲಿ ಸಮುದಾಯದ ಜೊತೆಗೆ ನಾನಿದ್ದೇನೆ. ಬಡವರ ಸಹಾಯಕ್ಕೆ ನಾನು ಹಿಂದೆ ಬೀಳುವುದಿಲ್ಲ. ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಕೆಲಸ ಮಾಡುತ್ತಿದ್ದೇನೆ. ಪಂಚಮಸಾಲಿ ಸಮುದಾಯದ ಬಡ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯದ ಅಗತ್ಯವಿದ್ದಲ್ಲಿ ವಿಳಂಬವಿಲ್ಲದೆ ಸಹಾಯ ಸಹಕಾರ ನೀಡಲು ನಾನು ಬದ್ಧ ಎಂದರು.ಕೂಡಲ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು, ಹರಿಹರ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಮಹದೇವಪ್ಪ ಬಾಗಸರ ಅಧ್ಯಕ್ಷತೆವಹಿಸಿದ್ದರು. ಮಾಜಿ ಜಿಪಂ ಸದಸ್ಯ ಮಾಲತೇಶ ಸೊಪ್ಪಿನ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ವಿರೋಧ ಪಕ್ಷದ ಉಪ ನಾಯಕ ಶಾಸಕ ಅರವಿಂದ ಬೆಲ್ಲದ, ಶಿಗ್ಗಾಂವಿಯ ಶ್ರೀಕಾಂತ ದುಂಡಿಗೌಡರ, ಸಮಾಜದ ಜಿಲ್ಲಾಕ್ಷರಾದ ನಾಗೇಂದ್ರ ಕಡಕೋಳ, ಬಸವರಾಜ ಹಾಲಪ್ಪನವರ, ವೀರೇಶ ಮತ್ತೀಹಳ್ಳಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಭುವನೇಶ್ವರ ಶಿಡ್ಲಾಪೂರ, ಬಸವಣ್ಣೆಪ್ಪ ಬೆಂಚಳ್ಳಿ, ನಿಂಗಪ್ಪ ಪೂಜಾರ, ರಾಜಶೇಖರ ಬೆಟಗೇರಿ, ಮಂಜು ನೀಲಗುಂದ, ನಿಜಲಿಂಗಪ್ಪ ಮುದಿಯಪ್ಪನವರ, ಮಲ್ಲಿಕಾರ್ಜುನ ಅಗಡಿ, ಸೋಮಶೇಖರ ಕೋತಂಬರಿ, ಮಧು ಪಾಣಿಗಟ್ಟಿ, ಪ್ರೊ.ಸಿ.ಮಂಜುನಾಥ, ಪ್ರೊ.ಮಾರುತಿ ಶಿಡ್ಲಾಪೂರ, ಹಾದೆಪ್ಪ ದೊಡ್ಡಮನಿ, ಕಲವೀರಪ್ಪ ಪವಾಡಿ, ವಿಜಯಕುಮಾರ ದೊಡ್ಡಮನಿ, ಬಸಣ್ಣ ಸೂರಗೊಂಡರ, ಈಶ್ವರಪ್ಪ ಚವಟಿ, ರಾಜಶೇಖರ ಹಲಸೂರ ಅತಿಥಿಗಳಾಗಿದ್ದರು. ಶ್ರಾವಣಿ ಕೊಟ್ರಣ್ಣನವರ ಭರತನಾಟ್ಯ ಮಾಡಿದರು. ಎಸ್.ಎಂ.ಕೋತಂಬರಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಮಧು ಪಾಣಿಗಟ್ಟಿ ಕಾರ್ಯಕ್ರಮ ನಿರೂಪಿಸಿದರು.