ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇಂಡಿಗನತ್ತ ಗ್ರಾಮದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ಗ್ರಾಮಗಳ ನಿವಾಸಿಗಳನ್ನು ಒಂದೆಡೆ ಸೇರಿಸಿ ಶಾಂತಿ ಸೌಹಾರ್ದತೆ ಸಭೆ ನಡೆಸಲಾಯಿತು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಠಾಣೆ ಸರಹದ್ದಿನ ಇಂಡಿಗನತ್ತ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಮೆಂದರೆ ಮತ್ತು ಇಂಡಿಗನತ್ತ ಗ್ರಾಮದ ನಿವಾಸಿಗಳಿಗೆ ಶಾಂತಿ ಸೌದಾರ್ಹತೆ ಸಭೆಯ ಅಧ್ಯಕ್ಷತೆ ವಹಿಸಿ ಕೊಳ್ಳೇಗಾಲ ಎಸಿ ಶಿವಮೂರ್ತಿ ಮಾತನಾಡಿದರು. ಗ್ರಾಮದಲ್ಲಿ ಏ.26ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ವೇಳೆ ಗ್ರಾಮದ ಕೆಲವರು ಗುಂಪುಗೂಡಿ ಮತಗಟ್ಟೆ ಪುಡಿ ಮಾಡಿ ಇವಿಎಂ ಮಷಿನ್ ಧ್ವಂಸಗೊಳಿಸಿ ಅಧಿಕಾರಿಗಳ ಮೇಲೆ ಹಲ್ಲೇ ನಡೆಸಿರುವ ಘಟನೆಯಿಂದ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವುದರಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗಿ ನಿವಾಸಿಗಳು ಬಂದನ ಭೀತಿಯಿಂದ ಗ್ರಾಮವನ್ನು ತೊರೆದಿದ್ದು ಪ್ರಕರಣಕ್ಕೆ ಬೇಕಾದವರು ಕಾರಾಗೃಹದಲ್ಲಿ ಇದ್ದಾರೆ.
ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ವಹಿಸಿದೆ:ಪೊಲೀಸರು ಗ್ರಾಮದಲ್ಲಿ ನಿಮ್ಮ ಭದ್ರತೆಗಾಗಿ ಇದ್ದಾರೆ ಎರಡು ಗ್ರಾಮಸ್ಧರು ಸಾಮರಸ್ಯದೊಂದಿಗೆ ಮೊದಲಿನಂತೆ ಯಾವುದೇ ತಂಟೆ ತಕರಾರಿಲ್ಲದೇ ಗ್ರಾಮದಲ್ಲಿ ಶಾಂತಿ ನೆಲೆಸುವ ಮೂಲಕ ಪರಸ್ಪರವಾಗಿ ಏನೇ ಸಮಸ್ಯೆಗಳಿದ್ದರೂ ವಿಕೋಪಕ್ಕೆ ಹೋಗದೆ ಸೌದಾರ್ಹತೆಯಿಂದ ಎರಡು ಗ್ರಾಮದ ನಿವಾಸಿಗಳು ಇರಬೇಕು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದೆ ನಿಮ್ಮಲ್ಲಿಯೇ ಒಗ್ಗಟ್ಟಿನಿಂದ ಪರಸ್ಪರ ಏನೇ ಇದ್ದರೂ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಇರಬೇಕು ಸರ್ಕಾರದಿಂದ ನಿಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸರ್ಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಪತ್ರ ವ್ಯವಹಾರ ಮಾಡಿ ಇಲಾಖೆಗೆ ಅನುಮತಿಗಾಗಿ ಕಾಯ್ದಿರಿಸಲಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಗ್ರಾಮಗಳ ಮೂಲಭೂತ ಸೌಲಭ್ಯಗಳಿಗೆ ಸರ್ಕಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಎಲ್ಲಾ ರೀತಿಯ ಸೂಕ್ತ ಕ್ರಮ ವಹಿಸಿದೆ ಎಂದರು.
ಕೊಳ್ಳೆಗಾಲ ಉಪವಿಭಾಗ ಡಿವೈಎಸ್ಪಿ ಧರ್ಮೇಂದರ್ ಮಾತನಾಡಿ, ಗ್ರಾಮದಲ್ಲಿ ಮತದಾನ ವೇಳೆಯಲ್ಲಿ ಇವಿಎಂ ಮತಗಟ್ಟೆ ಧ್ವಂಸ ಪ್ರಕರಣ ಘಟನೆಯಿಂದ ಸಮಾಜವೇ ತಲೆತಗ್ಗಿಸುವಂತಹ ಕೆಲಸವಾಗಿದೆ ಆದುದರಿಂದ ಎರಡು ಗ್ರಾಮಗಳಲ್ಲಿ ಶಾಂತಿ ನೆಲೆಸುವ ಮೂಲಕ ನಿಮ್ಮಲ್ಲಿ ಇರುವ ನಿವಾಸಿಗಳು ಸಹನೆಯಿಂದ ಗ್ರಾಮಗಳಲ್ಲಿ ಅಶಾಂತಿ ಉಂಟಾಗದಂತೆ ಕ್ರಮ ಕೈಗೊಳ್ಳುವ ಮೂಲಕ ಪ್ರಕಣಕ್ಕೆ ಬೇಕಾಗಿರುವ ವ್ಯಕ್ತಿಗಳನ್ನು ಶರಣಾಗಿಸಿ ಉಳಿದಂತ ನಿವಾಸಿಗಳಿಗೂ ಸಹ ಇದರಿಂದ ಅನುಕೂಲವಾಗಲಿದೆ. ಗ್ರಾಮಸ್ಥರು ಯಾವುದೇ ವಿಚಾರಗಳಿದ್ದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಇಲ್ಲದಿದ್ದರೆ ನಿಮ್ಮ ಮುಖಂಡರಿಗೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಘಟನೆಯ ಬಗ್ಗೆ ಸವಿಸ್ತಾರವಾಗಿ ನಿವಾಸಿಗಳಿಗೆ ಮಾಹಿತಿ ನೀಡಿ ಶಾಂತಿ ಸಭೆಯಲ್ಲಿ ತಿಳಿಸಿದರು.ಸಮುದಾಯ ಹಿರಿಯ ಮುಖಂಡ ಹಾಗೂ ಪ್ರಧಾನ ಅರ್ಚಕ ಕೆ.ವಿ. ಮಹದೇಶ್ ಮಾತನಾಡಿ, ಇಲ್ಲಿನ ಗ್ರಾಮಗಳಲ್ಲಿ ವಾಸಿಸುವ ಜನರು ಯಾವುದೇ ಗಲಾಟೆ ಇಲ್ಲದೆ ತಲಾತಲಾಂತರದಿಂದ ಬೇದ ಭಾವವಿಲ್ಲದೆ ಇದ್ದಂತ ಎರಡು ಗ್ರಾಮಗಳ ನಿವಾಸಿಗಳು ಮೊದಲಿನಂತೆ ಅನ್ಮೋನ್ಯತೆಯಿಂದ ಇರಬೇಕು. ಯಾವುದೇ ವಿಚಾರಗಳಿದ್ದರೆ ಗಮನಕ್ಕೆ ತನ್ನಿ ಅಧಿಕಾರಿಗಳ ಸಮನ್ವಯದಿಂದ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬಗೆಹರಿಸಿಕೊಳ್ಳೋಣ ಎಂದರು. ಸಭೆಯಲ್ಲಿ ಇನ್ಸ್‌ಪೆಕ್ಟರ್ ಜಗದೀಶ್, ಪಿಎಸ್ಐ ಬಸವರಾಜ್ ಅಪ್ಪರದಿನ್ನಿ ಮತ್ತು ಮಂದಾರೆ ಹಾಗೂ ಇಂಡಿಗನತ್ತ ಗ್ರಾಮದ ಮುಖಂಡರು ಪೊಲೀಸರು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
ನೆರವಿಗೆ ದಾವಿಸಿದ ಸಮುದಾಯ ಮುಖಂಡರು :ಅವಿದ್ಯಾವಂತರೆ ಹೆಚ್ಚಾಗಿರುವ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮತದಾನ ವೇಳೆ ನಡೆದ ಘಟನೆ ಯಿಂದ ಗ್ರಾಮದ ನಿವಾಸಿಗಳ ಮೇಲೆ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿದೆ ಹಲವರು ಕಾರಾಗೃಹದಲ್ಲಿ ಇರುವುದರಿಂದ ಸಮುದಾಯದ ಹಿರಿಯ ಮುಖಂಡ ಪುಟ್ಟಣ್ಣ ಮತ್ತು ಮುರುಗ ಇವರ ನೆರವಿಗೆ ಧಾವಿಸಿ, ಕಾರಾಗೃಹದ ಬಂಧನದಲ್ಲಿರುವ ಮಹಿಳೆಯರು ಹಾಗೂ ಪುರುಷರಿಗೆ ಧೈರ್ಯ ಹೇಳಿ ವ್ಯಕ್ತಿಗಳಿಗೆ ಜಾಮೀನು ಪಡೆಯಲು ಸಹ ಅರ್ಜಿಗಳಿಗೆ ಸಹಿ ಪಡೆದು ತಿಳಿ ಹೇಳುವ ಮೂಲಕ ಗ್ರಾಮದಲ್ಲಿ ಶಾಂತಿಸುವವಸ್ಥೆಯಿಂದ ಇನ್ನು ಮುಂದೆ ಇರಬೇಕು ಜನಾಂಗದ ಹಿತದೃಷ್ಟಿಯಿಂದ ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ನಿವಾಸಿಗಳಿಗೆ ತಿಳಿಸಿ ಘಟನೆಗೆ ಸಂಬಂಧಪಟ್ಟ ನ್ಯಾಯಾಲಯದ ವ್ಯಾಜ್ಯಗಳಿಗೂ ಸಹ ಸಮುದಾಯದ ವತಿಯಿಂದ ಸೂಕ್ತ ಕ್ರಮ ವಹಿಸಲಾಗುವುದು.
4ಸಿಎಚ್ಎನ್11ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಅಧಿಕಾರಿಗಳು ನಿವಾಸಿಗಳಿಗೆ ಶಾಂತಿ ಸಭೆ ನಡೆಸಿದರು.