ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ಸತಿ-ಪತಿಗಳು ಒಬ್ಬರನೊಬ್ಬರು ಅರಿತುಕೊಂಡು ಸುಖವಾಗಿ ಸಂಸಾರ ಸಾಗಿಸಲಿ ಎಂದು ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.ಪಟ್ಟಣದ ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಜಾತ್ರಾ ಸಮಿತಿಯಿಂದ ಹಮ್ಮಿಕೊಂಡ ಸಾಮೂಹಿಕ ವಿವಾಹ ಮತ್ತು ಅಯ್ಯಾಚಾರ ಸಮಾರಂಭದ ಕಾರ್ಯಕ್ರಮದ ಆಶೀರ್ವಚನ ನೀಡಿ ಮಾತನಾಡಿದ ಅವರು, ವಿವಾಹ ಬಂಧನವೆಂದರೆ ಎರಡು ಮನಸ್ಸುಗಳು ಒಂದಾಗಿ ಪರಸ್ಪರ ಹಾಲು ಜೇನಿನಂತೆ ಜೀವನ ನಡೆಸುವುದಾಗಿದೆ. ಆದ್ದರಿಂದ ನಿಮ್ಮ ಬದುಕು ಬಂಗಾರವಾಗಲಿ ಪ್ರಗತಿಯತ್ತ ಸಾಗಲು ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿರುತ್ತದೆ. ಸೊಸೆಯಾದವರು ಅತ್ತೆ-ಮಾವನನ್ನು ತಂದೆ-ತಾಯಿಯಂತೆ ಕಾಣಬೇಕು. ಅತ್ತೆ-ಮಾವ ಸೊಸೆಯನ್ನು ಮಗಳಂತೆ ನೋಡಿಕೊಂಡು ಹೋಗಬೇಕೆಂದು ತಿಳಿಸಿದರು.
ಚಳಗೇರಿಯ ವೀರಸಂಗಮೇಶ್ವರ ಸ್ವಾಮಿಗಳು ಮಾತನಾಡಿ, ದಂಪತಿಗಳು ತಂದೆ-ತಾಯಿಗಳಲ್ಲಿ ದೇವರನ್ನು ಕಾಣಬೇಕು. ಮನೆಯ ಹಿರಿಯರನ್ನು ಗೌರವವನ್ನು ನೀಡಬೇಕು. ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿದರೆ ಜೀವನ ಸಾರ್ಥಕಗೊಳ್ಳುತ್ತದೆ. ಮಕ್ಕಳ ಮದುವೆ ಮಾಡಲು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ ಎಂದರು.ಸಂಗಮೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಮಾತನಾಡಿದರು. ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ, ವಿ.ಮ.ಬ್ಯಾಂಕ್ ಅಧ್ಯಕ್ಷ ಶಿವಾನಂದ ಕಂಠಿ, ನಿರ್ದೇಶಕ ರವಿ ಹುಚನೂರ, ದೇವು ಡಂಬಳ ಪುರಸಭೆ ಅಧ್ಯಕ್ಷ ಭಾಗ್ಯಶ್ರೀ ರೇವಡಿ, ಮುಸ್ಲಿಂ ಸಮಾಜದ ನೌಕರರ ಅಧ್ಯಕ್ಷ ನೂರಸಾಬ ರೋಣದ, ಪಿಎಸ್.ಐ ಚನ್ನಯ್ಯ ದೇವೂರ, ಸಂಗಮೇಶ್ವರ ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಅರುಣೋದಯ ದುದ್ಗಿ ಮಾತನಾಡಿದರು.
ಶ್ರೀ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಬಸವರಾಜ ಹೊಸೂರ, ನೀಲಪ್ಪ ತಪೇಲಿ, ಬಾಬು ನಾಗರಾಳ, ತಿರುಪತಿ ಕುಷ್ಟಗಿ, ಅಶೋಕ ಪಟ್ಟಣಶೆಟ್ಟಿ, ಮಹಾಂತೇಶ ಶ್ಯಾವಿ, ಹನಮಂತಗೌಡ ಬೆನಕನಡೋಣಿ, ರಾಮನಗೌಡ ಬೆಳ್ಳಿಹಾಳ, ಗಿರಿಮಲ್ಲಪ್ಪ ಹಳಪೇಟಿ, ವಿರೇಶ ಅಂಗಡಿ, ನಾರಾಯಣ ಕುರಕುಂಟಾ, ಬಸವಪ್ಪ ವಂದಾಲಿ, ಮಲ್ಲಪ್ಪ ಅಂಠರದಾನಿ, ಈಶ್ವರಪ್ಪ ಹವಾಲ್ದಾರ, ಬಸವರಾಜ ಜಮಾದರ, ನಂದಪ್ಪ ಬಾರಕೇರ, ಅಡಿವೆಪ್ಪ ಅವಾರಿ, ಸೇರಿದಂತೆ ಇತರರಿದ್ದರು. ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 16 ಇಷ್ಟಲಿಂಗ ಅಯ್ಯಾಚಾರ ಸಮಾರಂಭ ನಡೆಯಿತು.