ಸಾರಾಂಶ
ಶಿಗ್ಗಾಂವಿ: ಪೊಲೀಸ್ ಸಂಸ್ಮರಣಾ ದಿನ ಕಳೆದ ವರ್ಷ ಪೊಲೀಸ್ ಸೇವೆಯನ್ನು ಮಾಡುವಾಗ ಆತ್ಮಾರ್ಪಣೆಯನ್ನು ಮಾಡಿದವರನ್ನು ನೆನೆಸಿಕೊಂಡು ಸ್ಮರಿಸುವುದಾಗಿದೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ೧೦ನೇ ಪಡೆಯ ಕಮಾಡೆಂಟ್ ಎನ್. ಬಿ. ಮೇಳ್ಳಾಗಟ್ಟಿ ಹೇಳಿದರು.
ತಾಲೂಕಿನ ಗಂಗೇಭಾವಿ ೧೦ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಿಂದ ಪರೇಡ್ ಮೈದಾನದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಲಿದೆ. ಸಾರ್ವಜನಿಕರ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬುದಾಗಿ ಯೋಚಿಸುತ್ತಿರುತ್ತೇವೆ. ನಿಷ್ಠೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಸಿಬ್ಬಂದಿಗೆ ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಕಮಾಡೆಂಟ್ ವೀರಣ್ಣ ಜಿರಾಳೆ ಮಾತನಾಡಿ, ಸರಕಾರ ಕೊಟ್ಟ ಯಾವುದೇ ಕರ್ತವ್ಯವವನ್ನು ನೀಡಿದಾಗ ಹಿಂದೆ ಮುಂದೆ ನೋಡದೆ ನಮ್ಮ ಅಳಿಲು ಸೇವೆ ದೊಡ್ಡ ಸೇವೆಯನ್ನು ಮಾಡಿ ಯಶಸ್ವಿಯಾಗಬೇಕು ಕರ್ತವ್ಯಕ್ಕೆ ನಿರ್ವಹಿಸುವಾಗ ಹೆದರುವ ಅಗತ್ಯವಿಲ್ಲ. ನಾವು ವೀರ ಮರಣವನ್ನು ಹೊಂದಿ ಇಂಥಹ ಕೀರ್ತಿ ನಮಗೂ ಕೂಡಾ ಸಿಗುತ್ತೆ ಎಂದು ಮುನ್ನುಗ್ಗಿ ಜಯಗಳಿಸಿ ನಿವೃತ್ತಿಯನ್ನು ಹೊಂದಬೇಕು ಎಂದರು. ಸಮಾಜದಲ್ಲಿ ಉತ್ತಮವಾದ ಸೇವೆಯನ್ನು ಮಾಡುವದರ ಜೋತೆಗೆ ಯಶಸ್ವಿಯಾಗಿ ಹುತಾತ್ಮ ದಿನಾಚರಣೆ ಸಿಕ್ಕಾಗ ಅವರನ್ನು ಸ್ಮರಿಸಿಕೊಂಡು ತ್ಯಾಗ ಬಲಿದಾನವನ್ನು ಮಾಡಿದ ಹುತಾತ್ಮರನ್ನು ಸ್ಮರಿಸುವದು ಅವಶ್ಯವಾಗಿದೆ ಎಂದರು.ಕರ್ತವ್ಯ ಪಾಲನೆಯಲ್ಲಿ ಹುತಾತ್ಮರಾದ ಪೊಲೀಸರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಕೈಗೊಳ್ಳಲಾಯಿತು.ಅಧಿಕಾರಿಗಳು ಹಾಗೂ ಗಣ್ಯರು ಹುತಾತ್ಮರಿಗೆ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು. ನಂತರ ಸಿಬ್ಬಂದಿಗಳಿಂದ ಮೂರು ಸುತ್ತಿನ ಗುಂಡು ಹಾರಿಸಲಾಯಿತು. ಬ್ಯಾಂಡ್ ಸೆಟ್ ಮೂಲಕ ನಮನ ಸಲ್ಲಿಸಿದರು.ಸಹಾಯಕ ಕಮಾಂಡೆಂಟ್‌ಗಳಾದ ವಿಶ್ವನಾಥ ನಾಯಕ್, ಸುಲೇಮಾನ್ ಹಂಚಿನಮನಿ, ಈ ವರ್ಷದ ಪೈಕಿ ದೇಶದಲ್ಲಿ ಹುತಾತ್ಮರಾಗಿರುವ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹೆಸರುಗಳನ್ನು ಓದಿ ಹೇಳಿದರು. ಈ ಸಂದರ್ಭದಲ್ಲಿ ಕೆಎಸ್‌ಐಗಳಾದ ಸುರೇಶ್ ಡಂಬೇರ, ಹನುಮೇಶ ಜಿ., ಸಂತೋಷ್ ವಸ್ತ್ರದ, ಶ್ರೀಧರ ವಾಘ್ಮೋರೆ, ಪರೇಡ್ ಕಮಾಡೆಂಟ್ ರಾಜೇಂದ್ರ ಶಿರಗುಪ್ಪಿ, ಶ್ರೀಕಾಂತ ನಾಯಕ್ ರಾಜಶೇಖರ ಪಾಟೀಲ, ಹನುಮಂತೇಶ ಜಿ., ನಾರಾಯಣ ಹೂಗಾಡೆ, ಶ್ರೀಧರ ವಾಘ್ಮೂರೆ ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.ಕಾರ್ಯಕ್ರಮ ನಿರೂಪಣೆಯನ್ನು ಆರ್‌ಪಿಐ ಸಂತೋಷ ವಸ್ತ್ರದ ನೆರವೇರಿಸಿದರು.