ಗೌರಿಗಣೇಶ ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಸಭೆ

| Published : Aug 31 2024, 01:34 AM IST

ಗೌರಿಗಣೇಶ ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿ ಗಣೇಶ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವುದರಿಂದ ಈ ಶಾಂತಿ ಸಭೆಯನ್ನು ಕರೆಯಲಾಗಿದೆ. ಉಭಯ ಸಮುದಾಯದವರು ಸೌಹಾರ್ದಯುತವಾಗಿ ಎರಡು ಹಬ್ಬಗಳಿಗೆ ಪರಸ್ಪರ ಸಹಕಾರವನ್ನು ನೀಡಿಕೊಂಡು ಆಚರಿಸುತ್ತೇವೆಂದು ತಿಳಿಸಿರುವುದು ಸಂತೋಷವಾಗಿದೆ ಎಂದು ಡಿವೈಎಸ್ಪಿ ಲೋಕೇಶ್ ಹೇಳಿದರು. ಎರಡು ವಿಶೇಷ ಹಬ್ಬಗಳಲ್ಲಿ ನಾವು ಹೆಚ್ಚಿನ ರಕ್ಷಣಾ ವ್ಯವಸ್ಥೆಗಾಗಿ ಹೊರ ಸಿಬ್ಬಂದಿಯನ್ನು ಬರಮಾಡಿಕೊಳ್ಳುತ್ತೇವೆ. ಎರಡು ಹಬ್ಬಗಳ ಆಚರಣೆಗೆ ನಮ್ಮಿಂದ ಸಂಪೂರ್ಣ ಸಹಕಾರ ಇರುತ್ತದೆ. ಕಳೆದ ವರ್ಷದಂತೆ ಇದ್ದ ನಿಯಮವನ್ನು ಈ ಬಾರಿಯೂ ಪಾಲಿಸಬೇಕು. ಅಗತ್ಯ ಬಿದ್ದಲ್ಲಿ ಮಹಲ್ಲವಾರು ಸಭೆ ಮಾಡುತ್ತೇವೆ. ಹಬ್ಬ ಸಮೀಪಿಸಿದಂತೆ ಇನ್ನೊಂದು ಸಭೆಯನ್ನು ನಡೆಸಲಾಗುವುದು. ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯವರು ಮತ್ತು ಮುಸ್ಲಿಂ ಜಮಾತ್ ಕಮಿಟಿಯವರು ಪರಸ್ಪರ ಸಹಕಾರದೊಂದಿಗೆ ಹಬ್ಬಗಳನ್ನು ಆಚರಿಸಿಕೊಂಡು ಹೋಗುವುದಾಗಿ ತಿಳಿಸಿದ್ದೀರಿ ಸಂತೋಷ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗೌರಿ ಗಣೇಶ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವುದರಿಂದ ಈ ಶಾಂತಿ ಸಭೆಯನ್ನು ಕರೆಯಲಾಗಿದೆ. ಉಭಯ ಸಮುದಾಯದವರು ಸೌಹಾರ್ದಯುತವಾಗಿ ಎರಡು ಹಬ್ಬಗಳಿಗೆ ಪರಸ್ಪರ ಸಹಕಾರವನ್ನು ನೀಡಿಕೊಂಡು ಆಚರಿಸುತ್ತೇವೆಂದು ತಿಳಿಸಿರುವುದು ಸಂತೋಷವಾಗಿದೆ ಎಂದು ಡಿವೈಎಸ್ಪಿ ಲೋಕೇಶ್ ಹೇಳಿದರು.

ನಗರ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಟಿಂಕ್ಸ್ ಮತ್ತು ಇತರೆ ಬಾವುಟಗಳನ್ನ ಕಟ್ಟುವವರು ನಗರಸಭೆಯಿಂದ ಅನುಮತಿಯನ್ನು ಪಡೆಯಬೇಕು. ಗಣಪತಿ ಪ್ರತಿಷ್ಠಾಪಿಸುವವರು ಠಾಣೆಗೆ ಮಾಹಿತಿ ನೀಡಿ ರಾತ್ರಿ ನೀವು ಅದನ್ನು ಸಂರಕ್ಷಿಸಬೇಕು. ನಾವು ಸುಗಮ ಸಂಚಾರ ಮತ್ತು ಅಪರಾಧ ತಡೆಗೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಎರಡು ವಿಶೇಷ ಹಬ್ಬಗಳಲ್ಲಿ ನಾವು ಹೆಚ್ಚಿನ ರಕ್ಷಣಾ ವ್ಯವಸ್ಥೆಗಾಗಿ ಹೊರ ಸಿಬ್ಬಂದಿಯನ್ನು ಬರಮಾಡಿಕೊಳ್ಳುತ್ತೇವೆ. ಎರಡು ಹಬ್ಬಗಳ ಆಚರಣೆಗೆ ನಮ್ಮಿಂದ ಸಂಪೂರ್ಣ ಸಹಕಾರ ಇರುತ್ತದೆ. ಕಳೆದ ವರ್ಷದಂತೆ ಇದ್ದ ನಿಯಮವನ್ನು ಈ ಬಾರಿಯೂ ಪಾಲಿಸಬೇಕು. ಅಗತ್ಯ ಬಿದ್ದಲ್ಲಿ ಮಹಲ್ಲವಾರು ಸಭೆ ಮಾಡುತ್ತೇವೆ. ಹಬ್ಬ ಸಮೀಪಿಸಿದಂತೆ ಇನ್ನೊಂದು ಸಭೆಯನ್ನು ನಡೆಸಲಾಗುವುದು. ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯವರು ಮತ್ತು ಮುಸ್ಲಿಂ ಜಮಾತ್ ಕಮಿಟಿಯವರು ಪರಸ್ಪರ ಸಹಕಾರದೊಂದಿಗೆ ಹಬ್ಬಗಳನ್ನು ಆಚರಿಸಿಕೊಂಡು ಹೋಗುವುದಾಗಿ ತಿಳಿಸಿದ್ದೀರಿ ಸಂತೋಷ ಎಂದರು.

ನಗರ ಠಾಣೆ ಪ್ರಭಾರ ನಿರೀಕ್ಷಕ ಹಾಗೂ ಗ್ರಾಮಾಂತರ ನಿರೀಕ್ಷಕ ಗಂಗಾಧರ್ ರಾತ್ರಿ ಪಹರೆ ಸಿಬ್ಬಂದಿಯ ವಾಟ್ಸಾಪ್ ಇದೆ. ಅದಕ್ಕೆ ಆಯಾ ವಾರ್ಡಿನ ಪ್ರಮುಖರನ್ನು ಸೇರಿಸಿ ಮಾಹಿತಿಗಳನ್ನು ಕೊಡುತ್ತಿದ್ದಾರೆ. ನಿಮ್ಮಲ್ಲಿ ಬರುವ ಮಾಹಿತಿಯನ್ನು ತಿಳಿಸಿ ಈಗ ಪ್ರಸ್ತುತ ನಗರದಲ್ಲಿ ಗಸ್ತು ಹಾಕಲಾಗುತ್ತಿದೆ, ಸಿಸಿಟಿವಿಯಲ್ಲಿ ನಗರದ ಒಂದೆರಡು ಬಡಾವಣೆಗಳಲ್ಲಿ ಕಾಣಿಸಿಕೊಂಡ ಚಡ್ಡಿ ಗ್ಯಾಂಗ್ ಅವರು ಯಾರೆಂಬುದು ಗೊತ್ತಾಗಿಲ್ಲ. ತಮ್ಮ ರಕ್ಷಣೆಗಾಗಿಯೇ ಕೈಯಲ್ಲಿ ರಾಡ್ ಅಥವಾ ಕೋಲನ್ನು ಹಿಡಿದು ಓಡಾಡಿರಬಹುದು ಎಂದರು.

ಅಪರಾಧಗಳನ್ನು ತಡೆಯಲಾಗಿದೆ, ಆದಷ್ಟು ಸುಗಮ ಸಂಚಾರಕ್ಕೆ ಆದ್ಯತೆಯನ್ನು ನೀಡುತ್ತಿದ್ದೇವೆ. ನಗರದಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಆ ಕಮಿಟಿಯ ಪೂರ್ಣ ವಿವರವನ್ನು ಠಾಣೆಗೆ ಕೊಡಬೇಕು ಮತ್ತು ಅನುಮತಿ ಪಡೆಯಬೇಕು. ಬೆಂಟಿಂಗ್‌ಗಳನ್ನು ಆದಷ್ಟು ಎತ್ತರಕ್ಕೆ ಕಟ್ಟಿ, ಗಣಪತಿ ಪ್ರತಿಷ್ಠಾಪಿಸಿದಾಗ ರಾತ್ರಿ ವೇಳೆ ಅಲ್ಲಿ ಕಮಿಟಿಯವರು ಯಾರಾದರೂ ಇರಬೇಕು ಎಂದು ಅವರು ಸೂಚನೆ ನೀಡಿದರು.

ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿ ಕಾರ್ಯದರ್ಶಿ ಎಸ್ ಬಿ. ಟಿ. ಬಾಬು ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಗಣಪತಿ ಪ್ರತಿಷ್ಠಾಪನೆಯನ್ನ ವಿಜೃಂಭಣೆಯಿಂದ ಇಟ್ಟುಕೊಳ್ಳಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡಬೇಕು. ಅವರು ಆಚರಿಸುವ ಈದ್ ಮಿಲಾದ್ ಹಬ್ಬಕ್ಕೆ ನಮ್ಮ ಪೂರ್ಣ ಸಹಕಾರವಿರುತ್ತದೆ. ಸೌಹಾರ್ದ ಭಾವನೆಯಲ್ಲಿ ಈ ಹಬ್ಬಗಳನ್ನು ಆಚರಿಸೋಣ ಎಂದರು.

ಅಬ್ದುಲ್ ಜಮೀಲ್ ಎರಡು ಹಬ್ಬಗಳು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿಯೂ ನಾವು ಪರಸ್ಪರ ಸಹಕಾರದಿಂದ ಆಚರಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು. ಜಮ್ಮಾದ್ ಕಮಿಟಿ ಪ್ರತಿನಿಧಿ ನೂರಿ ಅವರು ಸಹ ಪರಸ್ಪರ ಸಹಕಾರ ವ್ಯಕ್ತಪಡಿಸಿದರು.