ಬಡವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ: ಉಮಾ

| Published : Dec 23 2024, 01:01 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಬಡ ಜನರ ಸೇವೆ ಮಾಡುವ ಹಿತದೃಷ್ಟಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಗ್ರಾಮೀಣ ಪ್ರದೇಶದ ಬಡ ಜನರ ಸೇವೆ ಮಾಡುವ ಹಿತದೃಷ್ಟಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಉಮಾ ಮಹೇಶ ತಂಬ್ರಳ್ಳಿ ಹೇಳಿದರು.

ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ, ಲಾಯನ್ಸ್ ಕಣ್ಣಿನ ಆಸ್ಪತ್ರೆ, ಗ್ರಾಮ ಪಂಚಾಯಿತಿ ಮಾದಿನೂರ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಮಾದಿನೂರ ಗ್ರಾಮ ಪಂಚಾಯಿತಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿರು.ಇನ್ನರ್ ವೀಲ್ ಕ್ಲಬ್ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇರುವ ಸಂಸ್ಥೆ. ಕೊಪ್ಪಳ ಜಿಲ್ಲೆಯ ನಮ್ಮ ಸಂಸ್ಥೆಯಿಂದ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಸಾಮಾಜಿಕ, ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ ಸಾರ್ಥಕತೆ ನಮಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ನಾಗಮ್ಮ ಯಲ್ಲಪ್ಪ ಹಳೇಮನಿ ಉದ್ಘಾಟಿಸಿದರು.

ಈ ಸಂದರ್ಭ ಇನ್ನರ್ ವೀಲ್ ಕ್ಲಬ್ ಉಪಾಧ್ಯಕ್ಷೆ ಮಧು ಶೆಟ್ಟರ್, ಕಾರ್ಯದರ್ಶಿ ಮೀನಾಕ್ಷಿ ಬಣ್ಣದಬಾವಿ, ಮಾಜಿ ಅಧ್ಯಕ್ಷರಾದ ನೀತಾ ತಂಬ್ರಳ್ಳಿ, ಸುಜಾತಾ ಪಟ್ಟಣಶೆಟ್ಟಿ, ಶುಧಾ ಶೆಟ್ಟರ್, ಕವಿತಾ ಶೆಟ್ಟರ್,

ಶಿಬಿರದ ಸಂಚಾಲಕ ಬಸವರಾಜ ಪಲ್ಲೇದ, ಗ್ರಾಪಂ ಸದಸ್ಯರಾದ ಚನ್ನಕೇಶವ ನಂದಾಪೂರ, ಗವಿಸಿದ್ದಪ್ಪ ತಳಕಲ್, ನಾಗರಾಜ ಆವಣ್ಣಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಪಲ್ಲೇದ, ಎಂ.ಬಿ.ಕೆ ಭಾಗ್ಯ, ಗೀತಾ ಎತ್ತಿನಮನಿ, ಲಕ್ಷ್ಮೀ ನಾಯಕ, ರತ್ನಾ ವಡ್ಡರ, ಲಯನ್ಸ್ ಕಣ್ಣಿನ ಆಸ್ಪತ್ರೆ ನೇತ್ರಾಧಿಕಾರಿ ಸಚಿನ್ ಮಳಿಮಠ, ಪ್ರಾಥಮಿಕ ಕೇಂದ್ರದ ಮೇಲ್ವಿಚಾರಕ ದೂಳಪ್ಪ, ಸುರೇಖಾ, ಆಶಾ ಕಾರ್ಯಕರ್ತೆ ಕೌಶರ್ ಬೇಗಂ, ಮನೋಹರ ಪತ್ತಾರ, ಪ್ರಭು ಜಾಗೀರದಾರ, ಹನುಮಂತಪ್ಪ ಹೊಟ್ಟಿ, ಗ್ರಾಪಂ ಸಿಬ್ಬಂದಿ ರಾಜೇಂದ್ರ, ಕೃಷ್ಣ ಕುಮಾರ ಬನ್ನಿಕೋಪ್ಪ, ಪೀರಸಾಬ ನಡುವಿನಮನಿ, ಗೋವಿಂದಪ್ಪ, ಭೀಮಣ್ಣ, ವೀರಪ್ಪ ಹಾಗೂ ಮಾದಿನೂರ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 106 ಜನರು ಕಣ್ಣು ತಪಾಸಣೆ ಮಾಡಿಸಿಕೊಂಡರು. 32 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.