ಯಲಬುರ್ಗಾ: ದೈವ ಭಕ್ತಿಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಸೋಮವಾರ ಶ್ರೀಶರಣಬಸವೇಶ್ವರ ದೇವಸ್ಥಾನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಚಿಕ್ಕದಾದ ಗ್ರಾಮಗಳಲ್ಲಿ ಒಗ್ಗಟ್ಟು ಇರುವುದರಿಂದ ದೇವಸ್ಥಾನ ನಿರ್ಮಾಣದಂತ ಕಾರ್ಯಗಳ ಸರಳವಾಗಿ ಸಾಗಲು ಸಾಧ್ಯವಾಗುತ್ತದೆ. ದೇವಸ್ಥಾನ ನಿರ್ಮಾಣದ ಜತೆಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸಂತೃಪ್ತ ಭಾವ ಹೆಚ್ಚುತ್ತದೆ.ಪ್ರತಿಯೊಬ್ಬ ಪಾಲಕರು, ಹಿರಿಯರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಮೂಲಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಕಾಳಜಿ ವಹಿಸಬೇಕು ಎಂದರು.

ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಸಂತಸದ ಸಂಗತಿ. ಎಂಎಲ್‌ಸಿ ಅನುದಾನ ನೀಡುವ ಮೂಲಕ ಗ್ರಾಮದ ದೈವ ಭಕ್ತಿಗೆ ಕಾರಣವಾದ ಹೇಮಲತಾ ನಾಯಕರಿಗೆ ಇನ್ನೂ ಹೆಚ್ಚು ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದರು.

ಜಿಪಂ ಮಾಜಿ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣನವರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಸಮಾಜ ಸೇವಕ ಬಸಲಿಗಂಪ್ಪ ಭೂತೆ ಮಾತನಾಡಿದರು. ಕಲ್ಲಪ್ಪ ತೊಂಡಿಹಾಳ ಪ್ರಾಸ್ತಾವಿಕ ಮಾತನಾಡಿದರು. ಇದೆ ವೇಳೆ ೨೦ನೇ ವರ್ಷದ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಪ್ರಾರಂಭಗೊಂಡಿತು.


ಈ ಸಂದರ್ಭ ವರ್ತಕರ ಸಂಘದ ತಾಲೂಕಾಧ್ಯಕ್ಷ ಶಿವಣ್ಣ ಭೂತೆ, ವರ್ತಕ ಅಮರಪ್ಪ ಕಲಬುರ್ಗಿ, ಸಂಗಣ್ಣ ಟೆಂಗಿನಕಾಯಿ, ಅರ್ಚಕ ಶಂಭುಲಿಂಗಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ,ಸದಸ್ಯ ಕಾವೇರಿ ಬಾಲಪ್ಪ ಮಾರನಾಳ, ಉಮೇಶ ವಡ್ಡರ, ಬಸವರಾಜ ಬಿಸೆರೊಟ್ಟಿ, ತಾಪಂ ಮಾಜಿ ಸದಸ್ಯೆ ಸಾವಿತ್ರಿ ಗೊಲ್ಲರ, ಮುಖಂಡ ಚಂದ್ರಕಾಂತ ಬಿನ್ನಾಳ, ಕರಿಯಪ್ಪ ಗುರಿಕಾರ,ಹನುಮಂತಪ್ಪ‌ ಕೆರಳ್ಳಿ, ಈರಪ್ಪ ದಸ್ತಾನಿ, ಪ್ರಭುರಾಜ ಕಲ್ಲೂರ, ಹನುಮಂತ ಕುಡಗುಂಟಿ, ಮೈಲಾರರಾವ್ ಕುಲಕರ್ಣಿ,ಸುಭಾಷ ಲಕ್ಷ್ಮೇಶ್ವರ, ಚನ್ನಪ್ಪ ಮಾಜಿಗೌಡ್ರ, ಮಂಜುನಾಥ ತಳವಾರ ಇತರರಿದ್ದರು.