ಧರ್ಮಾಚರಣೆಯಿಂದ ಮನಸ್ಸಿಗೆ ನೆಮ್ಮದಿ: ಶಂಕರಯ್ಯ ದೇಗಾವಿಮಠ

| Published : Jan 03 2025, 12:34 AM IST

ಧರ್ಮಾಚರಣೆಯಿಂದ ಮನಸ್ಸಿಗೆ ನೆಮ್ಮದಿ: ಶಂಕರಯ್ಯ ದೇಗಾವಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಎಳ್ಳು ಅಮವಾಸ್ಯೆಯೆಂದು ರೈತ ಬೆಳೆದ ಎಳ್ಳಿನಿಂದ ಎಣ್ಣೆ ತೆಗೆದು ದೇವರಿಗೆ ದೀಪ ಹಚ್ಚುವುದು ವಾಡಿಕೆ. ಆಯಾ ಕಾಲಮಾನಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲು ನಮ್ಮ ಆಚರಣೆಗಳು ಸಹಕಾರಿಯಾಗಿವೆ.

ಅಳ್ನಾವರ:

ಪೂರ್ವಿಕರು ಹಾಕಿಕೊಟ್ಟ ಭಕ್ತಿಯ ಹಾಗೂ ಧರ್ಮದ ಹಾದಿಯಲ್ಲಿ ಸದಾ ಮುನ್ನಡೆಯಬೇಕು. ಭೂದೇವಿಯ ಆರಾಧನೆಯಿಂದ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ಶಂಕರಯ್ಯ ದೇಗಾವಿಮಠ ಹೇಳಿದರು.

ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದರು.

ಧರ್ಮಾಚರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲು ಸಾಧ್ಯ. ಎಳ್ಳು ಅಮವಾಸ್ಯೆಯೆಂದು ರೈತ ಬೆಳೆದ ಎಳ್ಳಿನಿಂದ ಎಣ್ಣೆ ತೆಗೆದು ದೇವರಿಗೆ ದೀಪ ಹಚ್ಚುವುದು ವಾಡಿಕೆ. ಆಯಾ ಕಾಲಮಾನಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲು ನಮ್ಮ ಆಚರಣೆಗಳು ಸಹಕಾರಿಯಾಗಿವೆ. ಎಳ್ಳು, ಬೆಲ್ಲ ಸೇವನೆಯಿಂದ ಶರೀರದ ದೋಷ ನಿವಾರಣೆಯಾಗಿ ಚಳಿಗಾಲದ ಬಾಧೆಯಿಂದ ದೇಹವನ್ನು ರಕ್ಷಿಸಬಹುದು ಎಂದರು.

ಕೋಗಿಲಗೇರಿ ಗ್ರಾಮದ ಭಕ್ತರಾದ ಉಳವಯ್ಯ ಬಸಯ್ಯ ಯಾದವಾಡಮಠ ಕುಟುಂಬದವರು ವಿವಿಧ ಧಾರ್ಮಿಕ ಕೈಂಕರ್ಯ ನೇರವೇರಿಸಿದರು.

ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಹಿರಿಯರಾದ ಎಂ.ಸಿ. ಹಿರೇಮಠ, ಚರಂತಯ್ಯ ಹಸಬಿಮಠ, ಪೂರ್ಣಿಮಾ ಮುತ್ನಾಳ, ಜಯಶ್ರೀ ಸೊಪ್ಪಿ, ರುದ್ರಪ್ಪ ಹಂಚಿನಮನಿ, ಚೆನ್ನಬಸಪ್ಪ ನರಗುಂದ, ಶಂಕ್ರಪ್ಪ ಧಾರವಾಡ, ಪ್ರವೀಣ ವಾರದ, ರಾಜಶೇಖರ ಕೌಜಲಗಿ, ಜಗದೀಶ ಚಚಡಿ, ಚೆನ್ನಬಸ್ಸು ಕಿತ್ತೂರ, ವೀರಯ್ಯ ಗಚ್ಚಿನಮಠ ಇದ್ದರು.