ಶಾಂತಿಯುತ ಚುನಾವಣೆ: 9 ಅಭ್ಯರ್ಥಿಗಳು ಗೆಲುವು

| Published : Dec 31 2024, 01:01 AM IST

ಸಾರಾಂಶ

ಇಲ್ಲಿನ ಪ್ರಾ.ಕೃ.ಪ.ಸ. ಸಂಘಕ್ಕೆ ಕಳೆದ ಎರಡು ಅವಧಿಯಲ್ಲಿಯೂ ಅವಿರೋಧವಾಗಿ ಆಯ್ಕೆಯಾಗಿದ್ದ ನಿರ್ದೇಶಕರಿಗೆ ಈ ಭಾರಿ ಎದುರಾಗಿದ್ದ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ಇಲ್ಲಿನ ಪ್ರಾ.ಕೃ.ಪ.ಸ. ಸಂಘಕ್ಕೆ ಕಳೆದ ಎರಡು ಅವಧಿಯಲ್ಲಿಯೂ ಅವಿರೋಧವಾಗಿ ಆಯ್ಕೆಯಾಗಿದ್ದ ನಿರ್ದೇಶಕರಿಗೆ ಈ ಭಾರಿ ಎದುರಾಗಿದ್ದ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆಯಿತು.

ಸಂಘದ ೮೩೯ ಮತಗಳಲ್ಲಿ ೭೭೧ ಮತ ಚಲಾವಣೆಯಾಗಿದ್ದು, ಕಣದಲ್ಲಿದ್ದ ೨೬ ಅಭ್ಯರ್ಥಿಗಳ ಪೈಕಿ ೯ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದರು. ಸಾಲಗಾರರಲ್ಲದ ಕ್ಷೇತ್ರದಿಂದ ಸಂಗಪ್ಪ ಹೂಗಾರ ೧೭ ಮತ ಪಡೆದು ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದರು.

ಇನ್ನೂ ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಬಿ.ಕನಕಪ್ಪ ೩೮೬ ಮತ ಪಡೆಯುವ ಮೂಲಕ ಸತತ ಮೂರನೇ ಬಾರಿಗೆ ಆಯ್ಕೆಯಾದರು. ಹಿಂದುಳಿದ ಬ ವರ್ಗದ ಕ್ಷೇತ್ರದಿಂದ ಶರಣಪ್ಪ ಕಲಿಕೇರಿ ಅವರಿಗೆ ೪೪೨, ಹಿಂದುಳಿದ ಅ ವರ್ಗ ಕ್ಷೇತ್ರಕ್ಕೆ ಸಿಂಧು ಬಲ್ಲಾಳ್, ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಐದು ಸ್ಥಾನಗಳಿಗೆ ಕನಕರೆಡ್ಡಿ ಕೆರಿ(೩೮೪), ರಾಘವೇಂದ್ರ ಚಿತ್ರಗಾರ(೩೬೩), ಮಹಾಂತೇಶ ಕೊಡ್ಲಿ(೩೩೭), ಅಮರೇಶ ಭಾವಿಕಟ್ಟಿ(೩೩೩) ಹಾಗೂ ದುರುಗೇಶ ವಾಲೇಕಾರ್(೩೦೩) ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾದರು. ೨೫೦ಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡ ಮಾಹಿತಿ ಅರಿತ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಿಬ್ಬೆರಗಾದರು. ಓರ್ವ ಅಭ್ಯರ್ಥಿ ಗೆಲ್ಲುವ ಮತಗಳು ಕುಲಗೆಟ್ಟಿರುವ ಕುರಿತು ವಿಷಾದಿಸಿದರು.

ತಡರಾತ್ರಿ ಚುನಾವಣಾಧಿಕಾರಿಗಳು ಅಧಿಕೃತ ಫಲಿತಾಂಶ ಪ್ರಕಟಿಸುತ್ತಿದ್ದಂತೆ ಜಯಭೇರಿ ಬಾರಿಸಿದ ಅಭ್ಯರ್ಥಿಗಳ ಕೆಲ ಬೆಂಬಲಿಗರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರೇ ಇನ್ನೂ ಕೆಲ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.