ಸರ್ವರಿಗೂ ಸಮಾನತೆ ಕಲ್ಪಿಸಿಕೊಟ್ಟ ಸಂವಿಧಾನವೂ ನಮ್ಮ ಭಾರತದ ಮಹಾನ್ ಗ್ರಂಥವಾಗಿದೆ
ಕುಷ್ಟಗಿ: ಭಾರತ ಅತ್ಯಂತ ಶ್ರೇಷ್ಠ ಸಂವಿಧಾನ ಹೊಂದಿದ ರಾಷ್ಟ್ರವಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ನೀಡಲು ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ. ಎಲ್. ಪೂಜೇರಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ವರಿಗೂ ಸಮಾನತೆ ಕಲ್ಪಿಸಿಕೊಟ್ಟ ಸಂವಿಧಾನವೂ ನಮ್ಮ ಭಾರತದ ಮಹಾನ್ ಗ್ರಂಥವಾಗಿದೆ. ದೇಶದಲ್ಲಿ ಇರುವ ಎಲ್ಲರೂ ಸಹೋದರರಂತೆ ಲಿಂಗಬೇಧ ಜಾತಿ, ಧರ್ಮ ಬೇಧ ಮಾಡದೆ ಒಳ್ಳೆಯ ಮನೋಭಾವನೆಯಿಂದ ಕೂಡಿ ಬಾಳಬೇಕು ಎಂದರು.
ಬಿಇಒ ಉಮಾದೇವಿ ಬಸಾಪೂರ ಮಾತನಾಡಿ, ಭಾರತದ ಸಂವಿಧಾನವೂ ಶ್ರೇಷ್ಠತೆ ಹೊಂದಿದ್ದು, ಎಲ್ಲರೂ ಓದಿಕೊಂಡು ಅರ್ಥೈಸಿಕೊಳ್ಳುವ ಮೂಲಕ ಸಮಾನತೆ ಸ್ವಾತಂತ್ರ್ಯದಿಂದ ಜೀವನ ನಡೆಸಬೇಕಿದೆ ಎಂದರು.ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ ರಜನಿಕಾಂತ ಕೆಂಗೇರಿ, ಪಿಎಸೈ ಪುಂಡಲಿಕಪ್ಪ, ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್, ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟರ, ವಕೀಲ ಆನಂದ ಡೊಳ್ಳಿನ, ಪಿ.ರಮೇಶ್. ಎಸ್.ಎನ್.ನಾಯಕ್, ಎಸ್.ಕೆ.ಪಾಟೀಲ್, ಮುಖ್ಯಶಿಕ್ಷಕ ಯಮುನಪ್ಪ ಚೂರಿ, ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ, ಎಂ.ಎಂ.ಗೊಣ್ಣಾಗರ, ಶಿವಾನಂದ ಪಂಪಣ್ಣನವರ ಸೇರಿದಂತೆ ಅನೇಕರು ಇದ್ದರು.
ಮೂಲಭೂತ ಕರ್ತವ್ಯ ಎಂಬ ವಿಷಯದ ಮೇಲೆ ಆಯೋಜಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.