ದಾಬಸ್‍ಪೇಟೆ: ನೆಲಮಂಗಲ ತಾಲೂಕಾದ್ಯಂತ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಯಿತು. ತಾಲೂಕಿನಲ್ಲಿ ಒಟ್ಟು 645 ಮತದಾರರಿದ್ದು, ಅವರಲ್ಲಿ 626 ಶಿಕ್ಷಕರು ಮಾತ್ರ ಮತ ಚಲಾಯಿಸಿದ್ದಾರೆ

ದಾಬಸ್‍ಪೇಟೆ: ನೆಲಮಂಗಲ ತಾಲೂಕಾದ್ಯಂತ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಯಿತು.

ತಾಲೂಕಿನಲ್ಲಿ ಒಟ್ಟು 645 ಮತದಾರರಿದ್ದು, ಅವರಲ್ಲಿ 626 ಶಿಕ್ಷಕರು ಮಾತ್ರ ಮತ ಚಲಾಯಿಸಿದ್ದಾರೆ. 19 ಶಿಕ್ಷಕರು ಮತದಾನದಿಂದ ದೂರ ಉಳಿದಿದ್ದಾರೆ. ನೆಲಮಂಗಲ ಪಟ್ಟಣ ಹಾಗೂ ಕಸಬಾ ಹೋಬಳಿಯಲ್ಲಿ ಒಟ್ಟು 442 ಶಿಕ್ಷಕರ ಮತಗಳಿದ್ದು, ಅವರಲ್ಲಿ 433 ಶಿಕ್ಷಕರು ಮತ ಚಲಾಯಿಸಿದ್ದು ಶೇ.97.96 ಮತದಾನವಾಗಿದೆ.

ಸೋಂಪುರ ಮತ್ತು ತ್ಯಾಮಗೊಂಡ್ಲು ಹೋಬಳಿಯಲ್ಲಿ ಒಟ್ಟು 203 ಶಿಕ್ಷಕರ ಮತಗಳಿದ್ದು, ಅದರಲ್ಲಿ 193 ಜನ ಶಿಕ್ಷಕರು ಮತ ಚಲಾವಣೆ ಮಾಡಿ, ಶೇ 95.07 ಮತದಾನವಾಗಿದೆ, ತಾಲೂಕಿನಲ್ಲಿ ಒಟ್ಟಾರೆಯಾಗಿ 320 ಪುರುಷ ಶಿಕ್ಷಕರು ಮತ್ತು 306 ಮಹಿಳಾ ಶಿಕ್ಷಕಿಯರು ಮತ ಚಲಾಯಿಸಿದ್ದಾರೆ.

ಭದ್ರತೆ ದೃಷ್ಟಿಯಿಂದ ಮತಕೇಂದ್ರಕ್ಕೆ, ಜಿಲ್ಲಾಧಿಕಾರಿ ಡಾ.ಕೆ.ಅನುರಾಧ, ನೆಲಮಂಗಲ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಉಮಾರಾಣಿ, ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೆಂದ್ರ, ನಗರಸಭೆ ಆಯುಕ್ತ ಗಂಗಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತಗಟ್ಟೆ ಒಳಗೆ 5, ಹೊರಗಡೆ 6 ಸಿಬ್ಬಂದಿ ಕಾರ್ಯನಿರ್ವಹಿಸಿದರು.

ರಾಜಕೀಯ ಧುರೀಣರ ಭೇಟಿ: ಮತದಾನ ಕೇಂದ್ರದ ಸಮೀಪ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣನವರ ಪತ್ನಿ, ಎನ್ ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಅವರ ಪತ್ನಿ, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ತಾಪಂ ಮಾಜಿ ಸದಸ್ಯ ಮಾದೇನಹಳ್ಳಿ ಪ್ರಕಾಶ್, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ಬಿ.ಎಂ.ಶ್ರೀನಿವಾಸ್, ಕರವೇ ಮಂಜುನಾಥ್, ನಾಗಭೂಷಣ್, ನರಸೀಪುರ ನಾಗರಾಜು, ಗೋವಿಂದರಾಜು, ಪ್ರಸಾದ್, ಅರುಣ್ ಕುಮಾರ್, ಎಂ.ಎಂ.ಗೌಡ, ವೇದಾವತಿ, ಮಂಗಳಮ್ಮ, ಮಂಜುಳ, ರುದ್ರೇಶ್, ಕುಮಾರ್, ವೆಂಕಟೇಶ್ ಇತರರು ಉಪಸ್ಥಿತರಿದ್ದರು.

ಫೆÇೀಟೋ 1 :

ದಾಬಸ್‍ಪೇಟೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆ ಕೇಂದ್ರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆ.ಅನುರಾಧ ಭೇಟಿ ನೀಡಿ ಪರಿಶೀಲಿಸಿದರು.