ಹಿಂಗಾರು ಹಂಗಾಮಿನಲ್ಲಿನ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿರುವುದು ಸ್ವಾಗತಾರ್ಹ. ಆದರೆ, ಹಿಂಗಾರಿನಲ್ಲಿನ ಅತಿವೃಷ್ಟಿಗೆ ಬೆಳೆ ಹಾನಿಯಿಂದಾಗಿ ಕಡಿಮೆ ಇಳುವರಿ ಬಂದಿದೆ.
ನವಲಗುಂದ:
ಕಡಲೆ ಖರೀದಿ ಕೇಂದ್ರ ತಕ್ಷಣವೇ ಆರಂಭಿಸಬೇಕು. ಜತೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕೆ ರಾಜ್ಯ ಸರ್ಕಾರ ಕೂಡ ಒಂದು ಸಾವಿರ ರುಪಾಯಿ ಹೆಚ್ಚಿಗೆ ಸೇರಿಸಿ ಕಡಲೆ ಖರೀದಿಸಬೇಕು ಎಂದು ಆಗ್ರಹಿಸಿ ಮಹದಾಯಿ ಹೋರಾಟಗಾರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು, ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು.
ಹಿಂಗಾರು ಹಂಗಾಮಿನಲ್ಲಿನ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿರುವುದು ಸ್ವಾಗತಾರ್ಹ. ಆದರೆ, ಹಿಂಗಾರಿನಲ್ಲಿನ ಅತಿವೃಷ್ಟಿಗೆ ಬೆಳೆ ಹಾನಿಯಿಂದಾಗಿ ಕಡಿಮೆ ಇಳುವರಿ ಬಂದಿದೆ. ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ₹ 5860 ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹1000 ನೀಡಿ ಕಡಲೆ ಖರೀದಿಸಬೇಕು ಖರೀದಿ ಮಿತಿಯನ್ನು 15 ಕ್ವಿಂಟಲ್‍ನಿಂದ 30 ಕ್ವಿಂಟಲ್‍ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.ಈ ವೇಳೆ ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್ ಮಾತನಾಡಿ, ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿರುವ ಗೋವಿನ ಜೋಳಕ್ಕೆಕೇಂದ್ರ ನಿಗದಿಪಡಿಸಿರುವ ₹ 2400 ದರ ನೀಡಬೇಕು. ರಿಯಾಯಿತಿ ಹೆಸರಿನಲ್ಲಿ ರೈತರಿಗೆ ಅನಾನುಕೂಲವಾಗಬಾರದು. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು. ಕೇಂದ್ರ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್‍ಗಳಲ್ಲಿ ನೀಡುವ ಸಾಲದ ಮಿತಿಯನ್ನು ₹ 3 ರಿಂದ ₹ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸುಧೀರ ಸಾಹುಕಾರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ, ರವಿ ತೋಟದ, ಶಿವಣ್ಣ ಹುಬ್ಬಳ್ಳಿ, ಭಗವಂತಪ್ಪ ಪುಟ್ಟಣ್ಣವರ, ಗಂಗಪ್ಪ ಸಂಗಟಿ, ಕರಿಯಪ್ಪ ತಳವಾರ, ಸಿದ್ದಲಿಂಗಪ್ಪ ಹಳ್ಳದ, ಹುಸೇನಸಾಬ ನದಾಫ್, ಮುರುಗೆಪ್ಪ ಪಲ್ಲೇದ, ದ್ರುವ ಹೊಸಮನಿ,ಈರಣ್ಣ ಬಸಾಪೂರ, ಗೋಪಾಲಗೌಡ ಖಾನಗೌಡ್ರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.