ಸಾರಾಂಶ
ಅಂಗವಾಗಿ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೆಂದೂರುಕಟ್ಟೆಯಲ್ಲಿ ಬಡಕುಟುಂಬವೊಂದಕ್ಕೆ ಮನೆ ನಿರ್ಮಾಣಕ್ಕೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಮರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಶ್ರೀ ಪೇಜಾವರ ಮಠವು ದಾನಿಗಳು ಮತ್ತು ಭಕ್ತರ ನೆರವಿನೊಂದಿಗೆ ಹಮ್ಮಿಕೊಂಡಿರುವ ರಾಮರಾಜ್ಯ ಯೋಜನೆಯ ಅಂಗವಾಗಿ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೆಂದೂರುಕಟ್ಟೆಯಲ್ಲಿ ಬಡಕುಟುಂಬವೊಂದಕ್ಕೆ ಮನೆ ನಿರ್ಮಾಣಕ್ಕೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.ಮಣಿಪುರ ಗ್ರಾ.ಪಂ. ಸದಸ್ಯರಾದ ಆಶಾ, ಸಂತೋಷ್, ಸಾಮಾಜಿಕ ಮುಖಂಡರಾದ ಶ್ರೀಕಾಂತ್ ನಾಯಕ್ ಅಲೆವೂರು, ವಾಸುದೇವ ಭಟ್ ಪೆರಂಪಳ್ಳಿ, ಎಂಜಿನಿಯರ್ ಶ್ರೀಧರ ಆಚಾರ್ಯ ಮೊದಲಾದವರಿದ್ದರು. ಈ ಮನೆ ನಿರ್ಮಾಣಕ್ಕೆ ಉಡುಪಿಯ ಆಸರೆ ಟ್ರಸ್ಟ್ ಕೂಡಾ ಸಹಕರಿಸಿದೆ.
ಧನಸಹಾಯಶ್ರೀ ಪೇಜಾವರ ಮಠವು ದಾನಿಗಳು ಮತ್ತು ಭಕ್ತರ ನೆರವಿನೊಂದಿಗೆ ಹಮ್ಮಿಕೊಂಡಿರುವ ರಾಮರಾಜ್ಯ ಯೋಜನೆಯ ಅಂಗವಾಗಿ ಎ.ಬಿ. ಎಂ.ಎಂ.ಎಂ. ಜನ ಸೇವಾ ನಿಧಿಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದ ಬಾರ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಾಡ ಗ್ರಾಮದ ಸುಮಿತ್ರ ಸುವರ್ಣ ಎಂಬವರ ಬಡಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಧನಸಹಾಯ ಹಸ್ತಾಂತರಿಸಿದರು.