ಬೆಳಾಲು ಅನಂತೋಡಿ ದೇವಸ್ಥಾನಕ್ಕೆ ಪೇಜಾವರ ಶ್ರೀ ಭೇಟಿ

| Published : May 24 2025, 01:04 AM IST

ಸಾರಾಂಶ

ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಇತ್ತೀಚೆಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು, ಮಂಗಳಾರತಿ ಬೆಳಗಿ, ಪ್ರಸಾದ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಇತ್ತೀಚೆಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು, ಮಂಗಳಾರತಿ ಬೆಳಗಿ, ಪ್ರಸಾದ ಸ್ವೀಕರಿಸಿದರು. ಶ್ರೀಗಳನ್ನು ಅರ್ಚಕ ವೃಂದ ,ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಹಾಗು ನಾಗರಿಕರು ಭಕ್ತಿ ಗೌರವದಿಂದ ಸ್ವಾಗತಿಸಿ ಬರಮಾಡಿಕೊಂಡರು.

ಅರ್ಚಕ, ಪುರೋಹಿತ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಶ್ರೀಗಳಿಗೆ ಮಾಲಿಕೆ, ಮಂಗಳಾರತಿ, ಫಲ ಕಾಣಿಕೆ ನೀಡಿ ಗೌರವಿಸಿದರು. ಶ್ರೀಗಳವರು ಆಶೀರ್ವಚನ ನೀಡಿ , ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಜೈನ್, ಆಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶ್ರೀ ನಿವಾಸ ಗೌಡ, ಕೋಲ್ಪಾಡಿ ರಾಜಾರಾಮ ಶರ್ಮ, ಗಿರಿರಾಜ ಬಾರಿತ್ತಾಯ, ಬೆಳಾಲು ಗ್ರಾ.ಪಂ.ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಕಾರ್ಯದರ್ಶಿ ,ಗ್ರಾ.ಪಂ. ಸದಸ್ಯ ಸತೀಶ್ ಎಳ್ಳುಗದ್ದೆ, ಮಹಿಳಾ ಸಮಿತಿ ಸಂಚಾಲಕಿ ಹೇಮಲತಾ ಶ್ರೀನಿವಾಸ ಗೌಡ, ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಪೊಸೊಟ್ಟು, ನಿಕಟ ಪೂರ್ವ ಅಧ್ಯಕ್ಷ ನವೀನ, ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು ,ಬೈಲುವಾರು ಸಮಿತಿ ಪ್ರಧಾನ ಸಂಚಾಲಕರು, ಸಂಚಾಲಕರು, ಊರವರು ಹಾಗು ಭಕ್ತಾದಿಗಳು ಉಪಸ್ಥಿತರಿದ್ದರು.