ಸಾರಾಂಶ
ಪೆಂಡಾಲ್ ಗಣಪತಿಯ 70ನೇ ವರ್ಷದ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಶನಿವಾರ ಬೆಳಿಗ್ಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಕರ್ಪೂರ ಹಚ್ಚಿ, ಪುಷ್ಪವನ್ನು ಅರ್ಪಿಸಿ, ಕಾಯಿ ಹೊಡೆಯುವುದರ ಮೂಲಕ ಚಾಲನೆ ನೀಡಿದರು. ಸಾರ್ವಜನಿಕರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು, ಇನ್ನು ಪೆಂಡಾಲ್ ಗಣಪತಿ ಉತ್ಸವದ ಅಂಗವಾಗಿ ನಗರದ 19ನೇ ವಾರ್ಡಿನ ಅರಳೇಪೇಟೆ ನಿವಾಸಿಗಳು, ಅಂಗಡಿ ಮಾಲೀಕರಿಂದ ಅನ್ನದಾನ, ಸಹ್ಯಾದ್ರಿ ವೃತದಲ್ಲಿ ಸೇರಿದಂತೆ ಹಲವಾರು ಕಡೆ ಅನ್ನಸಂತರ್ಪಣೆ ನಡೆಸಲಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರತಿವರ್ಷದಂತೆ ಈ ವರ್ಷವು ನಗರದ ಪೆಂಡಾಲ್ ಗಣಪತಿಯ 70ನೇ ವರ್ಷದ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಶನಿವಾರ ಬೆಳಿಗ್ಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಕರ್ಪೂರ ಹಚ್ಚಿ, ಪುಷ್ಪವನ್ನು ಅರ್ಪಿಸಿ, ಕಾಯಿ ಹೊಡೆಯುವುದರ ಮೂಲಕ ಚಾಲನೆ ನೀಡಿದರು.ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಗಣಪತಿ ಪೆಂಡಾಲ್ ಮುಂಭಾಗ ಹೂವಿನಿಂದ ಅಲಂಕೃತಗೊಂಡಿದ್ದ ಮಂಟಪದಲ್ಲಿ ಗಣಪತಿ ಮತ್ತು ಗೌರಿಯನ್ನು ಕೂರಿಸಲಾಗಿತ್ತು. ಬೆಳಿಗ್ಗೆ ಸರಿಯಾಗಿ 11.45ಕ್ಕೆ ಚಾಲನೆ ನೀಡಿದ ಶಾಸಕರು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದ ಪೆಂಡಾಲ್ ಗಣಪತಿಯನ್ನು ಬಹಳ ವಿಜೃಂಭಣೆಯಿಂದ ವಿಸರ್ಜನಾ ಮೆರವಣಿಗೆ ನಡೆಸಲಾಗುತ್ತಿದೆ. ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ಪ್ರತಿವರ್ಷ ಆಕರ್ಷಕವಾಗಿ ಗಣಪತಿ ಮೆರವಣಿಗೆಯನ್ನು ರಾಜಬೀದಿಗಳಲ್ಲಿ ಸಾಗುತ್ತಿದೆ. ಗಣೇಶ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಡಾ. ಎಚ್. ನಾಗರಾಜು ಮಾತನಾಡಿ, ಶ್ರೀ ಗಣಪತಿ ಉತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಮೆರವಣಿಗೆಯು ಗಣಪತಿ ಪೆಂಡಾಲ್‌ನಿಂದ ಹೊರಟು ಶಿವನಂಜಪ್ಪ ವೃತ್ತ, ಗಾಂಧಿ ಬಜಾರ್, ಹಾಸನಾಂಬ ವೃತ್ತ, ಸಂತೆ ಪೇಟೆ, ಹೊಸ ಲೈನ್ ರಸ್ತೆ, ಅರಳೇಪೇಟೆ ರಸ್ತೆ, ಪಾರ್ಕ್ ರಸ್ತೆ, ಸ್ಲೇಟರ್ಸ್ ವೃತ್ತ, ದೊಡ್ಡಿ ರೋಡ್, ಮಹಾವೀರ ವೃತ್ತ, ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ನಂದಿ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಚಮನ ಕುಣಿತ, ಬ್ಯಾಂಡ್ ಸೆಟ್, ಕೀಲು ಕುದುರೆ, ಬೆದರು ಬೊಂಬೆ ಪ್ರದರ್ಶನ, ಹುಲಿ ವೇಶ,ಕುರುಬನ ವೇಶ, ಬೃಹತ್ ಹನುಮಂತ ಮತ್ತು ಶ್ರೀಚನ್ನಕೇಶವಬ ಪ್ರತಿಮೆ, ಉದ್ದ ಮನುಷ್ಯ, ಮಹಿಳೆಯರಿಂದ ಡೋಳು ಕುಣಿತ, ಕೊಡಗಿನ ನೃತ್ಯ, ಬೆಂಕಿಯಲ್ಲಿ ಸಾಹಸ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿ ಗಮನ ಸೆಳೆದವು.ಸಾರ್ವಜನಿಕರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು, ಇನ್ನು ಪೆಂಡಾಲ್ ಗಣಪತಿ ಉತ್ಸವದ ಅಂಗವಾಗಿ ನಗರದ 19ನೇ ವಾರ್ಡಿನ ಅರಳೇಪೇಟೆ ನಿವಾಸಿಗಳು, ಅಂಗಡಿ ಮಾಲೀಕರಿಂದ ಅನ್ನದಾನ, ಸಹ್ಯಾದ್ರಿ ವೃತದಲ್ಲಿ ಸೇರಿದಂತೆ ಹಲವಾರು ಕಡೆ ಅನ್ನಸಂತರ್ಪಣೆ ನಡೆಸಲಾಗಿದೆ ಎಂದು ಹೇಳಿದರು. ಸಂಜೆ 7 ಗಂಟೆಯ ನಂತರ ನಗರ ದೇವಿಗೆರೆಯಲ್ಲಿ ವಿಸರ್ಜನೆ ಮಾಡುವುದಾಗಿ ಹೇಳಿದರು.
ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ ಕಲ್ಪಿಸಲಾಗಿತ್ತು. ರಾತ್ರಿ ಸಮಯಕ್ಕೆ ದೇವಿಗೆರೆ ಬಳಿ ಗಣೇಶನ ಮೆರವಣಿಗೆ ಬಂದು ಕೊನೆಗೊಳಿಸಿದರು. ತೆಪ್ಪೋತ್ಸವದ ಮೂಲಕ ಗಣೇಶನ ವಿಸರ್ಜನೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಮಳೆಯ ಆಗಮನದಿಂದ ಉತ್ಸವಕ್ಕೆ ಸಲ್ಪ ಅಡಚಣೆಯಾದರೂ ಕೂಡ ನಂತರ ಯಶಸ್ವಿಯಾಗಿ ಸಾಗಿತು. ಇದೇ ವೇಳೆ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಡಾ. ಎಚ್. ನಾಗರಾಜು, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಧರ್ಮದರ್ಶಿಗಳಾದ ಲಲಾಟ್ ಮೂರ್ತಿ, ಬೂದೇಶ್, ಎಚ್.ಟಿ. ಶೇಖರ್, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಎಂ.ಟಿ. ಸುರೇಶ್ ಕುಮಾರ್, ಎಂ.ಕೆ. ಕಮಲ್ ಕುಮಾರ್, ಎಚ್.ಡಿ. ದೀಪಕ್, ಲೀಲಾಕುಮಾರ್, ಹಾಗೂ ಗಿರೀಗೌಡ, ಸಿ. ರಾಮಚಂದ್ರಯ್ಯ, ಎಚ್.ಪಿ. ಕಿರಣ್, ಪಿ.ಆರ್. ನಾಗೇಂದ್ರ, ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಗೌಡಗೆರೆ ಪ್ರಕಾಶ್, ಬಿದರಿಕೆರೆ ಜಯರಾಂ, ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹನುಮಂತೇಗೌಡ, ಮಹಂತೇಶ್, ಕುಮಾರ್ ಇತರರು ಉಪಸ್ಥಿತರಿದ್ದರು.