ಪೆನ್‌ ಪಾಯಿಂಟ್‌ ಕ್ರಿಕೆಟ್ ಫೆಸ್ಟ್: ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡ ಬ್ಲೂ ಹಂಟರ್ಸ್‌

| Published : Feb 04 2024, 01:33 AM IST

ಪೆನ್‌ ಪಾಯಿಂಟ್‌ ಕ್ರಿಕೆಟ್ ಫೆಸ್ಟ್: ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡ ಬ್ಲೂ ಹಂಟರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೌದಿ ಅರೇಬಿಯಾ, ಕತಾರ್‌, ಯುಎಇ, ಕುವೈತ್‌, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ವಾಸವಿರುವ ಸದಸ್ಯರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 4 ತಂಡಗಳ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅಂತಿಮವಾಗಿ ಇರ್ಫಾನ್‌ ಕನ್ಯಾರಕೋಡಿ ಮಾಲಕತ್ವದ ಬ್ಲೂ ಹಂಟರ್ಸ್ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಪುತ್ತೂರು: ಬಡವರಿಗೆ ಆರ್ಥಿಕ ಸಹಾಯ, ವೈದ್ಯಕೀಯ ನೆರವು, ಮದುವೆ ಸೇರಿ ಇನ್ನಿತರ ಕಾರ್ಯಗಳಿಗೆ ಅಗತ್ಯವಿರುವ ಸಹಾಯಧನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹೆಸರು ವಾಸಿಯಾಗಿರುವ ಪೆನ್‌ ಪಾಯಿಂಟ್ ಸ್ನೇಹ ವೇದಿಕೆ ಈ ಬಾರಿ ತನ್ನದೇ ಸದಸ್ಯರಿಗೆ ಕ್ರಿಕೆಟ್‌ ಫೆಸ್ಟ್‌ ಆಯೋಜಿಸಿತ್ತು. ಇತ್ತೀಚೆಗೆ ನಡೆದ 3ನೇ ಆವೃತ್ತಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಬ್ಲೂ ಹಂಟರ್ಸ್ ತಂಡ ಚೊಚ್ಚಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಕೆಲಸದ ಒತ್ತಡಗಳ ನಡುವೆಯೇ ಸೌದಿ ಅರೇಬಿಯಾ, ಕತಾರ್‌, ಯುಎಇ, ಕುವೈತ್‌, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ವಾಸವಿರುವ ಸದಸ್ಯರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 4 ತಂಡಗಳ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅಂತಿಮವಾಗಿ ಉದ್ಯಮಿ ಇರ್ಫಾನ್‌ ಕನ್ಯಾರಕೋಡಿ ಮಾಲಕತ್ವದ ಬ್ಲೂ ಹಂಟರ್ಸ್ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.ಪುತ್ತೂರಿನ ಪರ್ಪುಂಜ ಅಡ್ಕ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟವನ್ನು ಉದ್ಯಮಿ ಎಂಕೆಎಂ ಕಾವು ಉದ್ಘಾಟಿಸಿದರೆ, ಸ್ಥಾಪಕಾಧ್ಯಕ್ಷ ಅಸಪ ಗೇರುಕಟ್ಟೆ ಪ್ರಮಾಣ ವಚನ ಬೋಧಿಸಿದರು. ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ ‘ಬ್ಲೂ ಹಂಟರ್ಸ್’ ಜೊತೆಗೆ ಶಾಕಿರ್ ಹಕ್ ನೆಲ್ಯಾಡಿ ಮಾಲಕತ್ವದ ರಾಯಲ್ ಇಂಡಿಯನ್ಸ್, ಮೀನು ಉದ್ಯಮಿ ರಾಝಿಕ್ ಬಿ.ಎಂ. ಮಾಲಕತ್ವದ ಅಟ್ಯಾಕರ್ಸ್ ಹಾಗೂ ಸರ್ಫರಾಝ್ ವಳಾಲ್ ಮಾಲಕತ್ವದ ಐ ಮೇಡ್ ವಾರಿಯರ್ಸ್ ತಂಡಗಳು ಪಾಲ್ಗೊಂಡವು. ಫೈನಲ್‌ನಲ್ಲಿ ಐ ಮೇಡ್ ವಾರಿಯರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬ್ಲೂ ಹಂಟರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.