ಸಾರಾಂಶ
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಜಾಗೃತಿಗಾಗಿ ಸೈಕ್ಲೋಥಾನ್‌ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬೆಳಗಿನ ಇಬ್ಬನಿ, ನಡುಗುವ ಚಳಿಯಲ್ಲಿ ಶಿವಮೊಗ್ಗ ನಿವಾಸಿಗಳು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಸೇರಿ ನೂರಾರು ಸೈಕ್ಲಿಂಗ್ ಪ್ರೇಮಿಗಳು ಉತ್ಸಾಹಭರಿತವಾಗಿ ಭಾನುವಾರ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಕ್ಯಾನ್ಸರ್ ಜಾಗೃತಿಗಾಗಿ ಆಯೋಜಿಸಲಾದ ಸೈಕ್ಲೋಥಾನ್‌ನಲ್ಲಿ ಪಾಲ್ಗೊಂಡರು.ಈ ಸೈಕ್ಲೋಥಾನ್‌ಗೆ ಎಲ್ಲ ವಯಸ್ಸಿನ ಸುಮಾರು 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಸೈಕಲ್ ಕ್ಲಬ್ ನಿರ್ದೇಶಕ ಡಾ.ಎಚ್.ಎಂ.ನಟರಾಜ್, ಡಾ.ಅಪರ್ಣ ಶ್ರೀವತ್ಸ ಅವರು ಹಸಿರು ನಿಶಾನೆ ತೋರಿಸಿದರು.ಸೈಕ್ಲೋಥಾನ್‌ವು ಕುವೆಂಪು ರಸ್ತೆಯ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಮ್, ವಿನೋಬನಗರ ಪೊಲೀಸ್ ಠಾಣೆ, ಅಲ್ಕೋಲ್ ಸರ್ಕಲ್, ಗೋಪಾಳ್ ಬಸ್ ನಿಲ್ದಾಣ, ಎನ್.ಟಿ.ರಸ್ತೆ ಮೂಲಕ ಸಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಹರಕೆರೆಯಲ್ಲಿ ಮುಕ್ತಾಯಗೊಂಡಿತು. ಈ ವೇಳೆ ಮಾತನಾಡಿದ ಡಾ.ಅಪರ್ಣ ಶ್ರೀವತ್ಸ, ಕೆಲವರಲ್ಲಿ ಕ್ಯಾನ್ಸರ್‌ಗೆ ಕಾರಣವೆನೆಂದು ತಿಳಿಯುವದಿಲ್ಲ ಆದರೆ ಇದು ಯಾರಿಗಾದರೂ ಬರುವ ಸಾಧ್ಯತೆ ಇದೆ. ಅನಾರೋಗ್ಯಕರ ಗಡ್ಡೆ, ಅನಿರೀಕ್ಷಿತ ರಕ್ತಸ್ರಾವ (ಮೂಗು, ಮೂತ್ರ ಅಥವಾ ಗುದದ್ವಾರದಿಂದ) ಕಂಡು ಬಂದರೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಜಿಕಲ್ ಅಂಕಾಲಿಜಿಸ್ಟ್ ಡಾ.ಎಂ.ಎ.ವಿವೇಕ್ ಮಾತನಾಡಿ, ಧೂಮಪಾನ, ಮದ್ಯಪಾನ, ಅನಾರೊಗ್ಯಕರ. ಆಹಾರ ಪದ್ಧತಿ, ಚಟುವಟಿಕೆ ಇಲ್ಲದ ಜೀವನಶೈಲಿ ಮುಂತಾದವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು. ಜನರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಶಿಷ್ಟ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಕೆಲವು ಕ್ಯಾನ್ಸರ್‌ಗಳನ್ನು ಲಸಿಕೆ ಮೂಲಕ ತಡೆಯಬಹುದು ಎಂದು ತಿಳಿಸಿದರು.ಡಾ.ಎಚ್.ಎಂ.ನಟರಾಜ್ ಮಾತನಾಡಿ, ಸೈಕ್ಲಿಂಗ್ ಶಾರೀರಿಕ ಆರೋಗ್ಯದ ಅವಿಚ್ಛಿನ್ನ ಭಾಗವಾಗಿದೆ. ಹಲವರು ನಾನು ಸೈಕ್ಲಿಂಗ್ ಮಾಡಲಾಗದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಆದರೆ, ಇದು ಸುಳ್ಳು ಕಲ್ಪನೆ. ಡಾಕ್ಟರ್‌ಗಳು ಸಹ ಸಾಧ್ಯವಾದಾಗ ಸೈಕ್ಲಿಂಗ್ ಅಥವಾ ಆಸ್ಪತ್ರೆಗೆ ಸೈಕಲ್ ಮೂಲಕ ತೆರಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ.ಜಾನ್, ಡಾ.ಶ್ರೀವತ್ಸ ನಾಡಿಗ್, ಡಾ.ಕೆ.ಆರ್.ರವಿ, ಡಾ.ಎಂ.ಜೆ.ವಿಕ್ರಮ್, ಡಾ.ರಾಮಸುಂದರ್, ಮಾರ್ಕೇಟಿಂಗ್ ಜನರಲ್ ಮ್ಯಾನೇಜರ್ ಎಸ್.ವಿ.ರಾಜಸಿಂಗ್, ಮಾರ್ಕೆಟಿಂಗ್ ಮ್ಯಾನೇಜರ್ ಎಸ್.ಎನ್.ಶೈಲೇಶ್, ರೋಟರಿ ಕ್ಲಬ್ ಸದಸ್ಯ ವಿಜಯಕುಮಾರ, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.