ಭಾನುವಾರ ಇಳಕಲ್ಲ ನಗರಕ್ಕೆ ಆಗಮಿಸಿದ ಕನ್ನಡ ಚಿತ್ರರಂಗದ ಮೇರುನಟ ಡಾ.ಶಿವರಾಜ್ ಕುಮಾರ್ ಅವರನ್ನು ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ (ಕೆಎಂಯು) ರಾಜ್ಯಾಧ್ಯಕ್ಷ ಜಬ್ಬಾರ್ ಕಲಬುರ್ಗಿ ಹಾಗೂ ಅಪಾರ ಜನತೆ ಆತ್ಮೀಯವಾಗಿ ಸ್ವಾಗತಿಸಿಕೊಂಡು ಸತ್ಕರಿಸಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಭಾನುವಾರ ಇಳಕಲ್ಲ ನಗರಕ್ಕೆ ಆಗಮಿಸಿದ ಕನ್ನಡ ಚಿತ್ರರಂಗದ ಮೇರುನಟ ಡಾ.ಶಿವರಾಜ್ ಕುಮಾರ್ ಅವರನ್ನು ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ (ಕೆಎಂಯು) ರಾಜ್ಯಾಧ್ಯಕ್ಷ ಜಬ್ಬಾರ್ ಕಲಬುರ್ಗಿ ಹಾಗೂ ಅಪಾರ ಜನತೆ ಆತ್ಮೀಯವಾಗಿ ಸ್ವಾಗತಿಸಿಕೊಂಡು ಸತ್ಕರಿಸಿ ಗೌರವಿಸಿದರು.ಈ ವೇಳೆ ಡಾ.ಶಿವರಾಜ್ ಕುಮಾರ್ ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ ಜಬ್ಬಾರ್ ಕಲಬುರ್ಗಿ, ಕನ್ನಡ ಚಿತ್ರರಂಗಕ್ಕೆ ಅವರು ನೀಡುತ್ತಿರುವ ಕೊಡುಗೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಶ್ಲಾಘಿಸಿದರು.
ತಾಲೂಕಿನ ಐಹೊಳೆ ಗ್ರಾಮದಲ್ಲಿ ಚಿತ್ರನಟ ಅತುಲ್ ಅವರು ನಡೆಸುತ್ತಿರುವ ಹಳ್ಳಿ ಪವರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವ ವೇಳೆ ನಟ ಶಿವರಾಜ್‌ಕುಮಾರ್ ಇಳಕಲ್ ಗೆ ಭೇಟಿ ನೀಡಿದರು. ಈ ವೇಳೆ ಅಪ್ಪು ನದಾಫ್, ರಾಜು ಬನ್ನಿಗೋಳ, ಗೌಸ್ ಕಂದಗಲ್, ಮರ್ತುಜ್ ನದಾಫ್ ಇತರರು ಇದ್ದರು.