ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೆ ಏರಿಸಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅಭಿಪ್ರಾಯಪಟ್ಟರು.ನಗರದ ಕಾಟ್ವೆ ಭವನದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಫಲಾನುಭವಿಗಳ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಫಲಾನುಭವಿಗಳ ಸಂಪರ್ಕಿಸಿ ಮತ್ತೆ ಮೋದಿಯವರ ಪ್ರಧಾನಿಯಾಗಿಸುವಂತೆ ಮನವಿ ಮಾಡಿ, ಕಳೆದ ಬಾರಿಗಿಂತ ಇನ್ನೂ ಹೆಚ್ಚಿನ ಸ್ಥಾನಗಳ ನಾವು ಗೆಲ್ಲಿಸಬೇಕು ಎಂದು ಹೇಳಿದರು.
ಪ್ರಧಾನಿ ಮೋದಿಯವರ ಯೋಜನೆಗಳ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುವ ಉದ್ದೇಶದಿಂದ ಫಲಾನುಭವಿಗಳ ಸಂಪರ್ಕ ಅಭಿಯಾನವೆಂಬ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಮನೆ ಮನೆಗೆ ತಲುಪಿಸುವ ಕಾರ್ಯದೊಂದಿಗೆ ಯೋಜನೆಗಳ ಪಡೆದ ಫಲಾನುಭವಿಗಳ ಸಂಪರ್ಕಿಸುವ ಕಾರ್ಯ ಮಾಡುವುದು ಇದರ ಉದ್ದೇಶ ಎಂದರು.ಅಭಿಯಾನದ ಜಿಲ್ಲಾ ಸಂಚಾಲಕ ಬಿ.ಜೆ.ಅಜಯಕುಮಾರ್ ಮಾತನಾಡಿ, ವಿಶ್ವವೇ ಮೆಚ್ಚಿದ ನಾಯಕರೆಂದರೆ ಅದು ನಮ್ಮ ಮೋದಿ ಆಯುಷ್ಮಾನ್, ಉಜ್ವಲ ಯೋಜನೆಯಂತಹ ಉತ್ತಮ ಯೋಜನೆಗಳೊಂದಿಗೆ ಕೋಟ್ಯಾಂತರ ಜನರಿಗೆ ಅನೂಕೂಲಕರ ಯೋಜನೆಗಳ ಜಾರಿಗೆ ತಂದಿದ್ದಾರೆ. ಅವರು ತಂದ ಯೋಜನೆಗಳ ಜನರಿಗೆ ತಲುಪಿಸುವ ಕಾರ್ಯ ಜನರು ಹೇಗೆ ಪಡೆದಿದ್ದಾರೆ. ಯಾರೆಲ್ಲ ಪಡೆದಿದ್ದಾರೆ ಎಂಬುದು ತಿಳಿಯಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಪಡೆದ ಫಲಾನುಭವಿಗಳ ಸಂಪರ್ಕಿಸುವ ಕಾರ್ಯ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದಲೇ ದೇಶವು ಸದೃಢ, ಸುಭದ್ರ, ಅಭಿವೃದ್ಧಿ ರಾಷ್ಟ್ರವಾಗಿ ವಿಶ್ವಗುರು ಸ್ಥಾನದತ್ತ ದಾಪುಗಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಬಾರಿಯೂ ದೇಶದ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸೋಣ ಎಂದರು.ಕಾರ್ಯಗಾರದಲ್ಲಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗಾರಾಜ್ ಹಿಂಡಸಘಟ್ಟ, ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಎಂ.ವೀರೇಶ್, ಚಂದ್ರಶೇಖರ ಪೂಜಾರ್, ಐರಣಿ ಅಣ್ಣಪ್ಪ, ಅಮರ್, ಸುನೀಲಕುಮಾರ್, ಸಿದ್ದೇಶ್ ಕರೂರು, ಶ್ರೀಕಾಂತ್ ಸೇರಿ ಮಹಿಳಾ ಮುಖಂಡರು, ಮೋರ್ಚಾ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರಿದ್ದರು.
ಭದ್ರಾ ಬಲದಂಡೆಗೆ 3 ದಿನ ಹೆಚ್ಚುವರಿ ನೀರು ಹರಿಸಿ: ಸಂಸದ ಡಾ.ಸಿದ್ದೇಶ್ವರದಾವಣಗೆರೆ: ದಾವಣಗೆರೆ, ಹರಿಹರ ತಾಲೂಕಿನ ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ಈವರೆಗೂ ನೀರು ತಲುಪದೇ, ತೋಟಗಳು, ಬೆಳೆಗಳ ನಿರ್ವಹಣೆಗೆ ರೈತರಿಗೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಬಲ ದಂಡೆಯಲ್ಲಿ 3 ದಿನ ಹೆಚ್ಚುವರಿ ನೀರು ಹರಿಸಲು ಜಿಲ್ಲಾಧಿಕಾರಿ ಹಾಗೂ ಭದ್ರಾ ಯೋಜನಾ ವೃತ್ತದ ಮುಖ್ಯ ಅಭಿಯಂತರಿಗೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಒತ್ತಾಯಿಸಿದ್ದಾರೆ.ಭದ್ರಾ ಸಲಹಾ ಸಮಿತಿಯ ಜ.6ರ ಸಭೆಯ ತೀರ್ಮಾನದಂತೆ ಭದ್ರಾ ಬಲದಂಡೆಯಲ್ಲಿ ಮೂರನೇ ಹಂತದಲ್ಲಿ ಫೆ.16ರಿಂದ 28ರವರೆಗೆ 13 ದಿನ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದರೂ, ದಾವಣಗೆರೆ ಹಾಗೂ ಹರಿಹರ ತಾಲೂಕಿನ ಕೊನೆಯ ಭಾಗಕ್ಕೆ ಈವರೆಗೆ ನೀರು ತಲುಪಿಲ್ಲ. ಇದರಿಂದ ರೈತರಿಗೆ ತೋಟಗಳ ನಿರ್ವಹಣೆ, ಬೆಳೆಗಳಿಗೆ ನೀರಿಲ್ಲದೇ ತೀವ್ರ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.ಸೂಳೆಕೆರೆ ಖಾಲಿಯಾಗುತ್ತಿರುವುದರಿಂದ ರೈತರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ಈ ಹಂತದಲ್ಲಿ ಇನ್ನೂ ಹೆಚ್ಚುವರಿಯಾಗಿ ಮಾ.2 ರವರೆಗೆ 3 ದಿನಗಳ ಕಾಲ ನಾಲೆಯಲ್ಲೂ ನೀರು ಹರಿಸಿ, ಸೂಳೆಕೆರೆಗೂ ನಾಲೆಯಿಂದ ನೀರು ಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಈ ಮೂಲಕ ರೈತರ ಹಿತ ಕಾಯುವಂತೆ ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಭದ್ರಾ ಯೋಜನಾ ವೃತ್ತದ ಮುಖ್ಯ ಅಭಿಯಂತರರಿಗೆ ಸಂಸದ ಸಿದ್ದೇಶ್ವರ ಆಗ್ರಹಿಸಿದ್ದಾರೆ.