ಬೆಲೆ ಹೆಚ್ಚಿದರೂ ಪಟಾಕಿ ಖರೀದಿಗೆ ಜನರ ಆಸಕ್ತಿ

| Published : Oct 22 2025, 01:03 AM IST

ಸಾರಾಂಶ

ಪಟಾಕಿಗಳಿಂದ ಪರಿಸರ ಮಾಲಿನ್ಯ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ ಪಟಾಕಿ ಹೊಡೆಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಜತೆಗೆ ಪ್ರತಿ ವರ್ಷ ಪಟಾಕಿ ಬೆಲೆ ಹಚ್ಚಳವಾಗುತ್ತಿದ್ದರೂ ವ್ಯಾಮೋಹ ಮಾತ್ರ ದೂರವಾಗುತ್ತಿಲ್ಲ. ಪಟಾಕಿ ಮಳಿಗೆಗಳೆದುರು ಖರೀದಿಗೆ ಜನರ ಹೆಚ್ಚಿಗೆ ಆಗಮಿಸುತ್ತಿರುವುದು ವ್ಯಾಪಾರಸ್ಥರು ಖುಷಿಯಾಗಿದ್ದಾರೆ. ಪಟಾಕಿ ಮಾರಾಟಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ನಿರಾಕ್ಷೇಪಣ ಪತ್ರ ಕಡ್ಡಾಯವಾಗಿದ್ದು, ಆಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಪಟಾಕಿ ಸ್ಟಾಲ್ ತೆರೆಯಲು ಅನುಮತಿ ನೀಡಲಾಗಿದೆ. ಶನಿವಾರದಿಂದ ತಾಲೂಕು ಕೇಂದ್ರದಲ್ಲಿ ಪಟಾಕಿ ಮಾರಾಟ ಆರಂಭವಾಗಿದ್ದು, ಜನರು ಮಕ್ಕಳೊಂದಿಗೆ ಪಟಾಕಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟಾಕಿಗಳಿಂದ ಪರಿಸರ ಮಾಲಿನ್ಯ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ ಪಟಾಕಿ ಹೊಡೆಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಜತೆಗೆ ಪ್ರತಿ ವರ್ಷ ಪಟಾಕಿ ಬೆಲೆ ಹಚ್ಚಳವಾಗುತ್ತಿದ್ದರೂ ವ್ಯಾಮೋಹ ಮಾತ್ರ ದೂರವಾಗುತ್ತಿಲ್ಲ. ಪಟಾಕಿ ಮಳಿಗೆಗಳೆದುರು ಖರೀದಿಗೆ ಜನರ ಹೆಚ್ಚಿಗೆ ಆಗಮಿಸುತ್ತಿರುವುದು ವ್ಯಾಪಾರಸ್ಥರು ಖುಷಿಯಾಗಿದ್ದಾರೆ.ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ ಪಟಾಕಿ ಅಂಗಡಿಗಳಲ್ಲಿ ಮಾರಾಟ ಮಾಡಲು ತಾಲೂಕು ಆಡಳಿತ ಜನನಿಬಿಡ ಪ್ರದೇಶದಿಂದ ಹೊರಗೆ ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿ ನೀಡಿಬೇಕಿತ್ತು. ಆದರೆ ನ್ಯಾಯಾಲಯ ಸಂಕೀರ್ಣ, ಡಿಪ್ಲೊಮ ಕಾಲೇಜು, ಶಿಕ್ಷಕರ ಭವನ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಲೋಕೋಪಯೋಗಿ ಇಲಾಖೆ ವಸತಿ ಸಂಕೀರ್ಣ ಸಮೀಪವಿರುವ ಬಯಲು ರಂಗಮಂದಿರ ಆವರಣದಲ್ಲಿ ಪಟಾಕಿ ಸ್ಟಾಲ್‌ಗಳನ್ನು ತೆರೆಯಲಾಗಿದೆ.ಪಟಾಕಿ ಮಾರಾಟಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ನಿರಾಕ್ಷೇಪಣ ಪತ್ರ ಕಡ್ಡಾಯವಾಗಿದ್ದು, ಆಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಪಟಾಕಿ ಸ್ಟಾಲ್ ತೆರೆಯಲು ಅನುಮತಿ ನೀಡಲಾಗಿದೆ. ಶನಿವಾರದಿಂದ ತಾಲೂಕು ಕೇಂದ್ರದಲ್ಲಿ ಪಟಾಕಿ ಮಾರಾಟ ಆರಂಭವಾಗಿದ್ದು, ಜನರು ಮಕ್ಕಳೊಂದಿಗೆ ಪಟಾಕಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಸಾರ್ವಜನಿಕರು ಪಟಾಕಿ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿರುವುದರಿಂದ ವ್ಯಾಪಾರಸ್ಥರು ಈ ವರ್ಷ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಪ್ರತಿ ಬಾರಿ ಮಕ್ಕಳ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತಿತ್ತು. ಈ ಬಾರಿ ಮಕ್ಕಳ ಪಟಾಕಿಗಳ ಜೊತೆಗೆ ಇತರೆ ಪಟಾಕಿಗಳಿಗೂ ಭಾರೀ ಡಿಮ್ಯಾಂಡ್ ಕೇಳಿಬರುತ್ತಿದೆ. ಮಕ್ಕಳ ಜೊತೆಗೆ ಯುವಕರೂ ಪಟಾಕಿ ಸಿಡಿಸುವುದಕ್ಕೆ ಮುಂದಾಗಿದ್ದಾರೆ. ಪಟಾಕಿಗಳ ಆಕರ್ಷಣೆಯಿಂದ ಜನರು ದೂರವಾಗುತ್ತಿದ್ದಾರೆ ಎಂಬ ಭಾವನೆ ಇತ್ತೀಚಿನ ಕೆಲವು ವರ್ಷಗಳಿಂದ ಮೂಡಿತ್ತಾದರೂ ಈ ವರ್ಷ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಭರ್ಜರಿಯಾಗೇ ನಡೆದಿದೆ. ಪಟಾಕಿಗಳ ಬೆಲೆಯಲ್ಲಿ ಶೇ.೩೦ರಷ್ಟು ಹೆಚ್ಚಳ ಪ್ರತಿವರ್ಷ ಪಟಾಕಿಗಳ ಬೆಲೆ ಶೇ.೧೫ರಿಂದ ೨೦ರಷ್ಟು ಹೆಚ್ಚಳವಾಗುತ್ತಲೇ ಇದೆ. ಅದೇ ರೀತಿ ಈ ಬಾರಿಯೂ ಪಟಾಕಿಗಳ ಬೆಲೆಯಲ್ಲಿ ಶೇ.೩೦ರಷ್ಟು ಏರಿಕೆಯಾಗಿದೆ. ಬೆಲೆ ಹೆಚ್ಚಳ ಆಗಿದ್ದರೂ ಪಟಾಕಿಗಳನ್ನು ಖರೀದಿ ಭರ್ಜರಿಯಾಗಿಯೇ ನಡೆದಿದೆ. ಕನಿಷ್ಟ ೧೦೦ ರುನಿಂದ ೪ ಸಾವಿರ ರು.ವರೆಗೆ ಬಾಕ್ಸ್ ಪಟಾಕಿಗಳು ಮಾರಾಟವಾಗುತ್ತಿವೆ. ಆಗಸದಲ್ಲಿ ಸಿಡಿಯುವಂತಹ ವೈವಿಧ್ಯಮಯ ಬಣ್ಣಬಣ್ಣದ ಚಿತ್ತಾರದ ಪಟಾಕಿಗಳು ೨ ಸಾವಿರ ರು. ನಿಂದ ೫ ಸಾವಿರ ರು.ವರೆಗೂ ಮಾರಾಟವಾಗುತ್ತಿದ್ದವು. ಬಿಡಿ ಪಟಾಕಿಗಳ ಬೆಲೆ ಹೆಚ್ಚೆಂಬ ಕಾರಣಕ್ಕೆ ಬಿಡಿ ಪಟಾಕಿಗಳಿಗಿಂತ ಬಾಕ್ಸ್ ಪಟಾಕಿಗಳಿಗೆ ಜನರ ಹೆಚ್ಚಿನ ಸಂಖ್ಯೆಯಲ್ಲಿ ಮೊರೆ ಹೋಗಿದ್ದರು.