ಚಿನ್ನ ಖರೀದಿಸಿ ಜನರಿಂದ ಅಕ್ಷಯ ತೃತೀಯ ಆಚರಣೆ

| Published : May 01 2025, 12:47 AM IST

ಚಿನ್ನ ಖರೀದಿಸಿ ಜನರಿಂದ ಅಕ್ಷಯ ತೃತೀಯ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನದ ಬೆಲೆ ಗಗನಮುಖಿಯಾಗಿರುವುದನ್ನು ಲೆಕ್ಕಿಸದ ಜನರು ಚಿನ್ನಾಭರಣ ಖರೀಯಲ್ಲಿ ತೊಡಗಿದ್ದರು. ಪ್ರತಿ ಗ್ರಾಂನ ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಖರೀದಿಯಲ್ಲಿ ಈಬಾರಿ ಇಳಿಮುಖವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ರಾಮನಗರ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಬರುವ ಅಕ್ಷಯ ತೃತೀಯ ಹಬ್ಬವನ್ನು ಜಿಲ್ಲೆಯ ಜನರು ಬುಧವಾರ ಸಂಭ್ರಮದಿಂದ ಆಚರಿಸಿದರು.ಹಬ್ಬದ ಪ್ರಯುಕ್ತ ಹಲವರು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಕ್ಷಯ ತೃತೀಯದಿಂದ ಚಿನ್ನ ಖರೀದಿ ಮಾಡಿದರೆ, ಅಕ್ಷಯವಾಗುವ ನಂಬಿಕೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿನ್ನದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ದಶ್ಯ ಕಂಡು ಬಂದಿತು. ಚಿನ್ನದ ಬೆಲೆ ಗಗನಮುಖಿಯಾಗಿರುವುದನ್ನು ಲೆಕ್ಕಿಸದ ಜನರು ಚಿನ್ನಾಭರಣ ಖರೀಯಲ್ಲಿ ತೊಡಗಿದ್ದರು. ಪ್ರತಿ ಗ್ರಾಂನ ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಖರೀದಿಯಲ್ಲಿ ಈಬಾರಿ ಇಳಿಮುಖವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಜನರು ನಿರೀಕ್ಷೆಗೂ ಮೀರಿ ಚಿನ್ನಾಭರಣ ಖರೀದಿ ಮಾಡಿದ್ದಾರೆ. ಹಾಗಾಗಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿತ್ತು. ಹಬ್ಬದ ವ್ಯಾಪಾರಕ್ಕಾಗಿ ಅಂಗಡಿ ಮಾಲೀಕರು ಮಂಗಳವಾರ ರಾತ್ರಿಯೇ ಸಿದ್ಧತೆ ಮಾಡಿಕೊಂಡಿದ್ದರು. ವ್ಯಾಪಾರಿಗಳು ಅಂಗಡಿಗಳನ್ನು ಅಲಂಕಾರ ಮಾಡಿದ್ದರು. ಜತೆಗೆ, ಚಿನ್ನ ಖರೀದಿಗೆ ಇಂತಿಷ್ಟು ಎಂಬಂತೆ ಡಿಸ್ಕೌಂಟ್ ಅನ್ನು ಘೋಷಣೆ ಮಾಡಲಾಗಿತ್ತು. ಒಟ್ಟಾರೆ. ದುಬಾರಿ ಲೆಕ್ಕಿಸದೇ ಜಿಲ್ಲೆಯಲ್ಲಿ ಅಕ್ಷಯ ತೃತೀಯ ಹಬ್ಬದಂದು ಚಿನ್ನದ ಖರೀದಿಯು ಜೋರಾಗಿ ನಡೆಯಿತು.ಅಂಗಡಿ ಪೂಜೆ : ಅಕ್ಷಯ ತೃತೀಯ ದಿನದಂದು ಅಂಗಡಿ ಮಾಲೀಕರು ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. ನೂತನ ಮಳಿಗೆ ಉದ್ಘಾಟನೆ ಅಕ್ಷಯ ತೃತೀಯ ಪ್ರಯಕ್ತ ಮಾಡಲಾಗಿತ್ತು. ಇನ್ನು ಹಳೆಯ ಮಳಿಗೆಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು....ಕೋಟ್ ....ಅಕ್ಷಯ ತೃತೀಯ ಹಬ್ಬದ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಉತ್ತಮ ವ್ಯಾಪಾರವಾಗಿದ್ದು, ಜನರಿಂದಲೂ ಪ್ರತಿಕ್ರಿಯೆ ಲಭಿಸಿದೆ. ನಿರೀಕ್ಷೆಗೂ ಮೀರಿ ಗ್ರಾಹಕರಿಂದ ಸ್ಪಂದನೆ ವ್ಯಕ್ತವಾಗಿದೆ. -ಲಕ್ಷ್ಮಣ್, ಗಣೇಶ್ ಜ್ಯುವೆಲರ್ಸ್‌, ರಾಮನಗರ. 30ಕೆಆರ್ ಎಂಎನ್ 11,12.ಜೆಪಿಜಿ11.ಅಕ್ಷಯ ತತೀಯ ಪ್ರಯುಕ್ತ ಗ್ರಾಹಕರಿಂದ ತುಂಬಿದ್ದ ಚಿನ್ನದ ಮಳಿಗೆ. 12.ಲಕ್ಷ್ಮಣ್