ಆಕಾಶಕ್ಕೆ ಉಗಿದರೆ ಅದು ಅಲ್ಲಿಗೆ ಮುಟ್ಟಲ್ಲ: ಸಿ.ಟಿ. ರವಿ

| Published : Nov 04 2024, 12:17 AM IST

ಆಕಾಶಕ್ಕೆ ಉಗಿದರೆ ಅದು ಅಲ್ಲಿಗೆ ಮುಟ್ಟಲ್ಲ: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬರುತ್ತೆ. ನೀವು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತೆ. ಅದು, ನಿಮ್ಮ ಮುಖಕ್ಕೆ ಮೆತ್ತಿಕೊಳ್ಳೋದು. ನೀವೇ ಮುಖ ತೊಳೆದುಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ನಿಮ್ಮ ನಾಯಕತ್ವಕ್ಕೆ ಜನ ಮತ ನೀಡ್ಲಿಲ್ಲ: ಸಿಎಂ ಸಿದ್ದರಾಮಯ್ಯಗೆ ಟಾಂಗ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬರುತ್ತೆ. ನೀವು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತೆ. ಅದು, ನಿಮ್ಮ ಮುಖಕ್ಕೆ ಮೆತ್ತಿಕೊಳ್ಳೋದು. ನೀವೇ ಮುಖ ತೊಳೆದುಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೋದಿಯನ್ನ ಬೈದು ದೊಡ್ಡವರಾಗಬಹುದು ಎಂದು ಭಾವಿಸಿದ್ದಾರೆ. ಮೋದಿಗೆ 2014, 2019, 2024 ರಲ್ಲಿ ಚಾಲೆಂಜ್ ಮಾಡಿದ್ರಿ, ಆದರೆ, ಆಗಿದ್ದೇನು. ನಿಮ್ಮ ನಾಯಕತ್ವಕ್ಕೆ ಜನ ಮತ ನೀಡ್ಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಟ್ಟರು.

ಸಿಎಂ ಸೂಚನೆ ಮೇರೆಗೆ ಹಳ್ಳಿ ಹಳ್ಳಿಗೆ ಹೋಗಿ ವಕ್ಫ್ ಅದಾಲತ್ ಮಾಡ್ತಿದ್ದೀನಿ ಎಂದು ಸಚಿವ ಜಮೀರ್‌ ಅವರು ಹೇಳುತ್ತಿದ್ದಾರೆ. ವಕ್ಫ್ ನೋಟಿಫಿಕೇಶ್ ಅಕ್ರಮ. ಚಿಕ್ಕಮಗಳೂರಿನ ಡಿ.ಆರ್. ಪೊಲೀಸ್ ಗ್ರೌಂಡ್, ರತ್ನಗಿರಿ ಬೋರೆಯನ್ನ ವಕ್ಫ್ ಆಸ್ತಿ ಅಂತ ನೊಟೀಫಿಕೇಶನ್ ಹೊರಡಿಸಿದ್ದಾರೆ. ಖಾತೆ ಇಡಿ ಅಂದ್ರೆ ಕಣ್ಮುಚ್ಚಿ ಇಟ್ರೆ ಅನ್ಯಾಯವಾಗುತ್ತೆ ಎಂದರು.

ವಕ್ಫ್ ಬೋರ್ಡ್ ವಿಷಯದಲ್ಲಿ ಕೊಟ್ಟಿರೋ ನೋಟೀಸ್ ವಾಪಸ್ ನಿರ್ಣಯ ಸ್ವಾಗತಿಸಿದ ಸಿ.ಟಿ. ರವಿ, ಇದು ಸಿದ್ದರಾಮಯ್ಯ ಕೊಟ್ಟಿರುವ ಅರ್ಧ ನ್ಯಾಯ. ಅಸಂವಿಧಾನಿಕ ವಕ್ಫ್ ಕಾಯ್ದೆ ರದ್ದಾಗಬೇಕು. ಆಗ ಪೂರ್ತಿ ನ್ಯಾಯ ಸಿಕ್ಕಂತೆ ಎಂದರು.

ನಿಮ್ಮ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಯ್ದೆ ತಂದಿದ್ದು, ರಾಕ್ಷಸರಿಗೆ ವರ ಕೊಟ್ಟಂತೆ ವರ ಕೊಟ್ಟಿದ್ದೀರಾ, ಆ ವರ ವಾಪಸ್ ತೆಗೆದು ಕೊಳ್ಳಿ, ವಕ್ಫ್‌ ಕಾಯ್ದೆ ನಿಮ್ಮ ಪಕ್ಷವೇ ಮಾಡಿದ ಪಾಪದ ಕೂಸು. ಸಮಾನ ನ್ಯಾಯದ ಬಗ್ಗೆ ಮಾತಾಡೋ ಸಿಎಂ ಅಪರಿಮಿತ ಅಧಿಕಾರವನ್ನ ಕಾಯ್ದೆ ಮೂಲಕ ವಕ್ಫ್ ಬೋರ್ಡ್ ಗೆ ಕೊಟ್ಡಿದ್ದೇ ಪರಮಾಘಾತ. ಆ ಕಾಯ್ದೆ ರದ್ದಾಗಲು ಧ್ವನಿ ಎತ್ತುದ್ರೆ ಮಾತ್ರ ಪೂರ್ಣ ನ್ಯಾಯ ಸಿಗುತ್ತೆ. ಜನಾಭಿಪ್ರಾಯಕ್ಕೆ ಹೆದರಿ ನೀವು ಒಂದು ಹೆಜ್ಜೆ ಮುಂದಿಟ್ಟಿದ್ದೀರಾ ಆ ಕಾಯ್ದೆ ಬಲದಿಂದ ಅವರು ಈ ಕೆಲಸ ಮಾಡಿದ್ದು ಕಾಯ್ದೆ ರದ್ದಾಗದಿದ್ರೆ ತೂಗುಗತ್ತಿ ತರ ರೈತರು, ದಲಿತರ ನೆತ್ತಿ ಮೇಲೆ ತೂಗ್ತಿರುತ್ತೆ. ಆ‌ ಕತ್ತಿ ಕೆಳಗಿಳಿಯಬೇಕು ಎಂದು ಹೇಳಿದರು.

ಉಪ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ವಾಪಸ್ ಪಡೆದಿದ್ದೀರಾ ಅನ್ಸತ್ತೆ, ಕಾಯ್ದೆ ರದ್ದಾಗುವ ಬಗ್ಗೆ ನಿಮ್ಮ ನಿಲುವನ್ನ ಸ್ಪಷ್ಟಪಡಿಸಿ, ಅದರ ಬಗ್ಗೆ ಧ್ವನಿ ಎತ್ತಿ, ಮೋದಿ ತಿದ್ದುಪಡಿಗೆ ಮುಂದಾಗಿದ್ದಾರೆ, ಅದರ ಪರ ಧ್ವನಿ ಎತ್ತಿ, ನಿಮ್ಮ ಪಕ್ಷದ ನಿಲುವನ್ನ ಸ್ಪಷ್ಟಪಡಿಸಿ. ಜನಾಕ್ರೋಶಕ್ಕೆ ತಾತ್ಕಾಲಿಕ ಉಪಶಮನ ಎಂಬಂತಹ ಪ್ರವೃತ್ತಿ ಬೇಡ ನ್ಯಾಯಾಂಗ ವ್ಯವಸ್ಥೆ ಮೀರಿದ ವ್ಯವಸ್ಥೆ ಕೊಟ್ಟಿರೋದು ಅದರ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಹೇಳಿದರು.

ಡಿಕೆಶಿ ಹೇಳಿಕೆಗೆ ತಿರುಗೇಟು:

ನೀರಾವರಿ ಇಲಾಖೆಯಲ್ಲಿ ಸುಮಾರು ₹20 ಸಾವಿರ ಕೋಟಿ ಬಿಲ್ ಬಾಕಿ ಇದೆ. ಪರಿಸ್ಥಿತಿ ಚೆನ್ನಾಗಿದ್ರೆ ಗುತ್ತಿಗೆದಾರರನ್ನು ಏಕೆ ಬೀದಿ ಪಾಲು ಮಾಡ್ತೀರಾ ಲೋಕೋಪಯೋಗಿ ಇಲಾಖೆಯಲ್ಲಿ ₹5000, ಇತರೆ ಇಲಾಖೆಗಳಲ್ಲಿ 30-35 ಸಾವಿರ ಕೋಟಿ ಬಿಲ್‌ಗಳು ಬಾಕಿ ಇವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದು, ಖಜಾನೆ ತುಂಬಿ ತುಳುಕುತ್ತಿದ್ದರೆ ಅವರಿಗೆ ಏಕೆ ಅನ್ಯಾಯ ಮಾಡುತ್ತೀರಾ, ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎನ್ನುತ್ತಿದ್ದೀರಾ ಆದರೆ, ನಿಮ್ಮ ಶಾಸಕರೇ ಅಭಿವೃದ್ಧಿ ಕೆಲಸ ಆಗ್ತಿಲ್ಲ ಎಂದಿದ್ದಾರೆ. ಅವರಿಗೆ ಏನು ಹೇಳ್ತೀರಾ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ₹100 ಲಕ್ಷ ಕೋಟಿ ಯನ್ನು ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿದೆ. ನೀವೇನು ಮಾಡಿದ್ದೀರಾ, ಬೆಂಗಳೂರಿನ ಗುಂಡಿ ಮುಚ್ಚುವ ಯೋಗ್ಯತೆ ನಿಮಗಿಲ್ಲ, ನಿಮ್ಮ ಮುಖ್ಯಮಂತ್ರಿಗಳೇ ಈ ವರ್ಷ ಏನು ಕೇಳಬೇಡಿ, ಎಲ್ಲಾ ಹಣ ಗ್ಯಾರೆಂಟಿಗೆ ಖರ್ಚು ಮಾಡುತ್ತಿದ್ದೀವಿ ಎಂದು ಶಾಸಕರಿಗೆ ಪಾಠ ಹೇಳಿದ್ರು ಎಲ್ಲಾ ಸರಿ ಇಲ್ಲದ ಕಾರಣಕ್ಕೆ ನಿಮ್ಮ ಮುಖ್ಯಮಂತ್ರಿಗಳು ಪಾಠ ಹೇಳುವ ಸ್ಥಿತಿಗೆ ಬಂದಿರುವುದು ಎಂದರು.

ಖಜಾನೆ ತುಂಬಿದ್ರೆ 3-4 ತಿಂಗಳಿಂದ ಕೊಡಬೇಕಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ಹಾಕಿ, ಹಾಲು ಹಾಕಿರುವ ರೈತರ ಪ್ರೋತ್ಸಾಹ ಧನ ಏಕೆ ಹಿಡಿದಿದ್ದೀರಾ, ನಿಮ್ಮ‌ ನಡೆ ನುಡಿಯಿಂದ ಎಲ್ಲಾ ಸರಿ ಇಲ್ಲ ಅನ್ನೋದು ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.